ETV Bharat / sitara

ತುರಹಳ್ಳಿ ಅರಣ್ಯ ಪರಿಸರದಲ್ಲಿ ಕಾಂಕ್ರೀಟಿಕರಣ ನಡೆಸದಂತೆ ನಟ ಅನಿರುದ್ಧ್ ಮನವಿ - Anirudh appeals

ತುರಹಳ್ಳಿ ಅರಣ್ಯ ಉಳಿಸುವಂತೆ ಹಾಗೂ ಅಲ್ಲಿ ಕಾಂಕ್ರೀಟಿಕರಣ ನಡೆಸದಂತೆ ನಟ ಅನಿರುದ್ಧ್ ಮನವಿ ಮಾಡಿದ್ದಾರೆ.

actor anirudh
ನಟ ಅನಿರುದ್ಧ್
author img

By

Published : Feb 3, 2021, 2:40 PM IST

ಹಸಿರೇ ಉಸಿರು, ಹಸರೀಕರಣ ಇದೀಗ ಕಾಂಕ್ರೀಟಿಕರಣ ಪರಿಸರಕ್ಕೆ ಮಾರಕ ಎಂಬ ಸಂದೇಶವನ್ನು ನಟ ಅನಿರುದ್ಧ್ ನೀಡಿದ್ದಾರೆ. ತುರಹಳ್ಳಿ ಅರಣ್ಯ ಉಳಿಸುವಂತೆ ಹಾಗೂ ಅಲ್ಲಿ ನಡೆಸಲು ಮುಂದಾಗಿರುವ ಯೋಜನೆಗಳಿಂದ ಪರಿಸರಕ್ಕೆ ಹಾನಿಯುಂಟಾಗಬಹುದು. ಈ ಬಗ್ಗೆ ಸರ್ಕಾರ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.

ನಟ ಅನಿರುದ್ಧ್ ಮನವಿ

ಹಾಗೆಯೇ, ಸ್ವಚ್ಛತೆಗಾಗಿ ನಾನೂ ಸಹಬಾಗಿ ಅಭಿಯಾನದಲ್ಲಿ ನಟ ಅನಿರುದ್ಧ್, ರಸ್ತೆ ವಿಭಜಕ (ರೋಡ್ ಡಿವೈಡರ್ಸ್) ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವಂತೆ ಬಿಬಿಎಂಪಿಗೆ ಹೇಳಿದ್ದಾರೆ.

actor anirudh
ತುರಹಳ್ಳಿ ಅರಣ್ಯ ಉಳಿಸುವಂತೆ ನಟ ಅನಿರುದ್ಧ್ ಮನವಿ ಮಾಡಿಕೊಂಡಿದ್ದಾರೆ.
https://www.facebook.com/107502077316700/posts/506897240710513/
ಜಯನಗರದ ಎಫ್ ಬ್ಲಾಕ್​ನ ರಸ್ತೆ ಡಿವೈಡರ್​ಗಳು ಶೋಚನೀಯ ಹಂತಕ್ಕೆ ತಲುಪಿದ್ದು, ಅಲ್ಲಿ ಸಸಿ ನೆಡುವ ಕೆಲಸವನ್ನು ಅನಿರುದ್ದ್​​ ಮಾಡಿದ್ದಾರೆ. ಇತ್ತೀಚಿಗೆ ಫೇಸ್​ಬುಕ್​ನಲ್ಲಿ ವಿಡಿಯೋ ಶೇರ್ ಮಾಡಿರುವ ಅನಿರುದ್ಧ್​​, ಶೋಚನೀಯವಾಗಿದ್ದ ರಸ್ತೆ ಡಿವೈಡರ್​​​ಗಳು ಈಗ ಅಥಾರಿಟಿಯಿಂದ ಸ್ವಚ್ಛ ಮಾಡಲ್ಪಟ್ಟಿದೆ ಎಂದು ನಿಮ್ಮೊಡನೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ನಗರದಲ್ಲಿ ಹಸಿರನ್ನು ಹೆಚ್ಚು ಮಾಡುವ ಸಲುವಾಗಿ ಈಗ ನಾವು ಅಲ್ಲಿ ಗಿಡ ನೆಟ್ಟಿದ್ದೇವೆ ಎಂದಿದ್ದಾರೆ. ಅಲ್ಲದೇ ಅಭಿಮಾನಿಗಳು ಹಾಗೂ ಹಿಂಬಾಲಕರಿಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಲು ನೇತೃತ್ವ ವಹಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಬಿಗ್​ಬಾಸ್ ಸೀಸನ್ 8 ರಲ್ಲಿ ಭಾಗವಹಿಸುವ ವದಂತಿಯನ್ನು ತಳ್ಳಿ ಹಾಕಿರುವ ಅನಿರುದ್ಧ್​​ ಜೊತೆಜೊತೆಯಲಿ ಧಾರಾವಾಹಿಯನ್ನು ತೊರೆಯಲು ಬಯಸುವುದಿಲ್ಲ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.