ಇಂದು ತೆರೆಗೆ ಬಂದಿರುವ 'ಅಮರ್' ಚಿತ್ರದಲ್ಲಿ ಅಂಬರೀಶ್ ಕಾಣಿಸಿಕೊಂಡಿದ್ದಾರೆ. ಹಾಗಂತ ಅವರು ಈ ಚಿತ್ರದಲ್ಲಿ ನಟಿಸಿಲ್ಲ. ಬದಲಾಗಿ ಅವರ ಒಂದು ಸಣ್ಣ ವಿಡಿಯೋ ತುಣುಕು ಚಿತ್ರತಂಡ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಸೇರಿಸಿದೆ. ಕಪ್ಪು ಬಣ್ಣದ ಸೂಟ್ ಧರಿಸಿ, ಪಿಯಾನೋ ಮುಂದೆ ಒಲವಿನ ಉಡುಗೊರೆ ಸಾಂಗ್ ನುಡಿಸುತ್ತಿರುವ ಅಂಬಿ ದೃಶ್ಯದ ಮೂಲಕ ಅಮರ್ ಚಿತ್ರಕ್ಕೆ ಶುಭಂ ಹೇಳಿದ್ದಾರೆ ನಿರ್ದೇಶಕ ನಾಗಶೇಖರ್.
ಈ ಚಿತ್ರದಲ್ಲಿ ನಟ ದರ್ಶನ್ ಹಾಗೂ ನಿರೂಪ್ ಭಂಡಾರಿ ಸಹೋದರರಾಗಿ ನಟಿಸಿದ್ದಾರೆ. ಅಭಿಗೆ ಆತನ ಪ್ರೀತಿಯನ್ನು ಮರಳಿ ಒಪ್ಪಿಸುವ ಪಾತ್ರ ದಚ್ಚು ನಿಭಾಯಿಸಿದ್ದಾರೆ. ಇದು ತುಂಬ ತೂಕದ ಪಾತ್ರವಾಗಿದ್ದು, ಚಿತ್ರಕ್ಕೆ ಮೈಲೇಜ್ ನೀಡಿದೆ.