ETV Bharat / sitara

ಪತಿಯ ಸಾವಿನಿಂದ ದುಃಖದಲ್ಲಿರುವ ಮಾಲಾಶ್ರೀಗೆ ಜಗ್ಗೇಶ್ ಸಾಂತ್ವನ - acter Jaggesh tweet for malashri

ತಮ್ಮ ಪ್ರೀತಿಯ ಪತಿಯ ಅಗಲಿಕೆಯಿಂದ ನಟಿ ಮಾಲಾಶ್ರೀ ಅವರೀಗ ದುಃಖದಲ್ಲಿದ್ದಾರೆ. ಈ ಸಮಯದಲ್ಲಿ ಚಿತ್ರರಂಗದ ಅನೇಕರು ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ. ಅದೇ ರೀತಿ ನಟ ಜಗ್ಗೇಶ್ ಕೂಡಾ ನೊಂದಿರುವ ನಟಿಯನ್ನು ಸಂತೈಸುವ ಪ್ರಯತ್ನ ಮಾಡಿದ್ದಾರೆ.

acter-jaggesh-tweet-to-malashree
ನೊಂದ ಮಾಲಾಶ್ರೀಗೆ ತಲೆ ಬಾಗಿ ಕ್ಷಮೆ ಕೋರಿದ ನಟ ಜಗ್ಗೇಶ್
author img

By

Published : Apr 30, 2021, 8:11 PM IST

ಕನ್ನಡ ಚಿತ್ರರಂಗದ 'ಕೋಟಿ ನಿರ್ಮಾಪಕ' ರಾಮು ಅವರ ನಿಧನಕ್ಕೆ ಇಡೀ ಸ್ಯಾಂಡಲ್​ವುಡ್​ ಕಂಬನಿ ಮಿಡಿದಿದೆ. ಈ ನಡುವೆ ತಮ್ಮ ಪ್ರೀತಿಯ ಪತಿಯ ಅಕಾಲಿಕ ನಿಧನದಿಂದ ನಟಿ ಮಾಲಾಶ್ರೀ ದುಃಖದಲ್ಲಿದ್ದಾರೆ. ಹೀಗಾಗಿ ಚಿತ್ರರಂಗದ ಅನೇಕರು ಸಾಂತ್ವನ ಹೇಳಿದ್ದಾರೆ. ಇದೇ ರೀತಿ ನಟ ಜಗ್ಗೇಶ್​ ಇಂದು ಟ್ವೀಟ್​ ಮಾಡಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.

  • @RamuMalashree
    ಮೇಡಂ ನಿಮ್ಮ ಸಂಕಷ್ಟದಲ್ಲಿ ಭಾಗಿ ಆಗುವ ಯೋಗ್ಯತೆ ಇಲ್ಲದಂತೆ ಮಾಡಿದ ಈ ಸಮಯಕ್ಕೆ ತಲೆಬಾಗಿ ಕ್ಷಮೆ ಕೋರುವೆ!
    ತಮ್ಮ ನೋವಿಗೆ ಸಾಂತ್ವನ ಹೇಳುವ ಶಕ್ತಿಮಾತ್ರ ಉಳಿದಿದೆ!
    ಕನ್ನಡ ಚಿತ್ರರಂಗಕ್ಕೆ ಅನನ್ಯ ಸೇವೆಮಾಡಿ ಅನೇಕ ಚಿತ್ರರಂಗದ ಕಾರ್ಮಿಕರಿಗೆ ಅನ್ನನೀಡಿದ ಮಹನೀಯ ನನ್ನ ತಮ್ಮ ರಾಮು.
    ಅವನ ಆತ್ಮಕ್ಕೆ ಶಾಂತಿಕೋರಿ ನಿಮ್ಮ ಮನೆಯಲ್ಲೆ

    — ನವರಸನಾಯಕ ಜಗ್ಗೇಶ್ (@Jaggesh2) April 30, 2021 " class="align-text-top noRightClick twitterSection" data=" ">

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್​ ಮಾಡಿರುವ ನಟ ಜಗ್ಗೇಶ್, 'ನಿಮ್ಮ ಸಂಕಷ್ಟದಲ್ಲಿ ಭಾಗಿ ಆಗುವ ಯೋಗ್ಯತೆ ಇಲ್ಲದಂತೆ ಮಾಡಿದ ಈ ಸಮಯಕ್ಕೆ ತಲೆ ಬಾಗಿ ಕ್ಷಮೆ ಕೋರುವೆ. ತಮ್ಮ ನೋವಿಗೆ ಸಾಂತ್ವನ ಹೇಳುವ ಶಕ್ತಿಮಾತ್ರ ಉಳಿದಿದೆ. ಕನ್ನಡ ಚಿತ್ರರಂಗಕ್ಕೆ ಅನನ್ಯ ಸೇವೆ ಮಾಡಿ ಚಿತ್ರರಂಗದ ಅನೇಕ ಕಾರ್ಮಿಕರಿಗೆ ಅನ್ನ ನೀಡಿದ ಮಹನೀಯ ನನ್ನ ತಮ್ಮ ರಾಮು. ಅವನ ಆತ್ಮಕ್ಕೆ ಶಾಂತಿಕೋರಿ ನಿಮ್ಮ ಮನೆಯಲ್ಲೇ ರಾಮು ಹುಟ್ಟಿಬರಲಿ ಎಂದು ರಾಯರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

  • ರಾಮು ಹುಟ್ಟಿಬರಲಿ ಎಂದು ರಾಯರಲ್ಲಿ ಪ್ರಾರ್ಥನೆ..
    ದಯಮಾಡಿ ನೀವು ಧೈರ್ಯದಿಂದ ಈ ಸಂಕಷ್ಟ ಎದುರಿಸಿ ಮಕ್ಕಳನ್ನ ರಾಮು ಎತ್ತರಕ್ಕೆ ಬೆಳಸಿ..ನಿಮ್ಮ ಜೊತೆ ನಾವು ಉಧ್ಯಮದ ಎಲ್ಲಾ ಸ್ನೇಹಿತರು ಸದಾ ಇರುತ್ತೇವೆ.. ಮುಂದಿನ ಸಾಂಸಾರಿಕ ಜೀವನ ನಿಭಾಯಿಸುವ ಶಕ್ತಿ ರಾಯರು ನಿಮಗೆ ನೀಡಲಿ ನಿಮ್ಮ ಕಲಾಬಂಧು 🙏

ದಯಮಾಡಿ ನೀವು ಧೈರ್ಯದಿಂದ ಈ ಸಂಕಷ್ಟ ಎದುರಿಸಿ. ಮಕ್ಕಳನ್ನು ರಾಮು ಎತ್ತರಕ್ಕೆ ಬೆಳಸಿ. ನಿಮ್ಮ ಜೊತೆ ನಾವು ಉದ್ಯಮದ ಎಲ್ಲಾ ಸ್ನೇಹಿತರು ಸದಾ ಇರುತ್ತೇವೆ. ಮುಂದಿನ ಸಾಂಸಾರಿಕ ಜೀವನ ನಿಭಾಯಿಸುವ ಶಕ್ತಿ ರಾಯರು ನಿಮಗೆ ನೀಡಲಿ ಎಂದು ಜಗ್ಗೇಶ್​ ಅವರು ಟ್ವೀಟ್​ ಮಾಡಿದ್ದು, ಈ ಮೂಲಕ ದುಃಖದಲ್ಲಿರುವ ನಟಿ ಮಾಲಾಶ್ರೀಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.

ಓದಿ: ಭಾರವಾದ ಹೃದಯದಿಂದ ರಾಮುಗೆ ಭಾವಪೂರ್ಣ ಶ್ರದ್ಧಾಂಜಲಿ : ಆತ್ಮೀಯ ಸ್ನೇಹಿತೆಗೆ ಶೃತಿ ಭಾವನಾತ್ಮಕ ಪತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.