ಬಾಲಿವುಡ್ ಹಿರಿಯ ನಟಿ ಶರ್ಮಿಳಾ ಠ್ಯಾಗೋರ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಹಲವು ಸುದ್ದಿ ಹರಿದಾಡುತ್ತಿವೆ. ಈ ಬಗ್ಗೆ ನಟಿಯು ಪ್ರತಿಕ್ರಿಯೆ ನೀಡಿದ್ದು, ನಾನು ಆರಾಮವಾಗಿದ್ದೇನೆ. ನನ್ನ ಬಗ್ಗೆ ಯಾಕೆ ಇಷ್ಟೊಂದು ಕಾಳಜಿ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿರುವ ಅವರು, ದೇವರ ದಯೆಯಿಂದ ನಾನು ಚೆನ್ನಾಗಿದ್ದೇನೆ. ನನ್ನ ಆರೋಗ್ಯವೂ ಉತ್ತಮವಾಗಿದೆ. 76ನೇ ವರ್ಷದಲ್ಲೂ ಕೂಡ ನನ್ನ ಕೆಲಸದಲ್ಲಿ ನಾನು ಬ್ಯುಸಿಯಾಗಿದ್ದೇನೆ. ಆದ್ರೂ ಕೂಡ ಯಾಕೆ ನನ್ನ ಆರೋಗ್ಯದ ಬಗ್ಗೆ ಇಷ್ಟೆಲ್ಲ ಕಾಳಜಿ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಹಿರಿಯ ನಟಿ ಹೇಳಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಆದ್ರೆ, ನಟ ಹಾಗೂ ಶರ್ಮಿಳಾ ಪುತ್ರ ಸೈಫ್ ಅಲಿಖಾನ್ ಇದೀಗ ಕಾನೂನು ಹೋರಾಟ ಎದುರಿಸುತ್ತಿದ್ದಾರೆ. ತಾಂಡವ್ ವೆಬ್ ಸಿರೀಸ್ನಲ್ಲಿ ನಟಿಸಿ ಧಾರ್ಮಿಕ ಭಾವನೆಗಳಿಗೆ ಅಪಚಾರವೆಸಗಿದ ಆರೋಪದ ಮೇಲೆ ಚಿತ್ರತಂಡ ಸೇರಿ ಸೈಫ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದಕ್ಕೆ ಶರ್ಮಿಳಾ ಕೊಂಚ ತಲೆ ಕೆಡಿಸಿಕೊಂಡಿದ್ದಾರೆ.
ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಕರೀನಾ ಕಪೂರ್ ಸದ್ಯ ತುಂಬು ಗರ್ಭಿಣಿಯಾಗಿದ್ದು, 2ನೇ ಮಗುವಿನ ಸ್ವಾಗತಕ್ಕೆ ಕಾಯುತ್ತಿದ್ದಾರೆ. ಈ ವೇಳೆ ಸೈಫ್ಗೆ ಕಾನೂನು ಸಂಕಷ್ಟ ಎದುರಾಗಿದ್ದು, ಇದು ಶರ್ಮೀಳಾ ಅವರಿಗೆ ಟೆನ್ಷನ್ ಆಗಿರಬಹುದು ಎಂದು ಹೇಳಲಾಗುತ್ತಿದೆ.