ಹೈದರಾಬಾದ್: ಬಾಲಿವುಡ್ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಅವರ ಮಗಳು ಶ್ವೇತಾ ಬಚ್ಚನ್ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆ ಅಭೀಷೇಕ್ ಬಚ್ಚನ್ ಗಾಯಗೊಂಡಿರುವ ಕಾರಣದಿಂದಲೇ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆಂದು ವರದಿಯಾಗಿದೆ.
ಅಮಿತಾಬ್ ಬಚ್ಚನ್ ಹಾಗೂ ಶ್ವೇತಾ ಲೀಲಾವತಿ ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಕೆಲವೊಂದು ಫೋಟೋ ವೈರಲ್ ಆಗಿವೆ. ಇನ್ನು ಮಧ್ಯಪ್ರದೇಶದಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ನಟಿ ಐಶ್ವರ್ಯ ರೈ ಬಚ್ಚನ್ ಕೂಡ ಇದೇ ಕಾರಣಕ್ಕಾಗಿ ಮುಂಬೈಗೆ ಆಗಮಿಸಿದ್ದಾರೆಂದು ವರದಿಯಾಗಿದೆ.
ಇದನ್ನೂ ಓದಿರಿ: ನಟಿ ಐಶ್ವರ್ಯ ರೈ ಮತ್ತೊಮ್ಮೆ ಗರ್ಭಿಣಿ..? ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿದೆ ಈ ಫೋಟೋ!
ಸಿನಿಮಾ ಶೂಟಿಂಗ್ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿರುವ ಕಾರಣ ನಟ ಅಭಿಷೇಕ್ ಬಚ್ಚನ್ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ. ನಟ ಅಭಿಷೇಕ್ ಬಚ್ಚನ್ ಬಲಗೈ ಗಂಭೀರವಾಗಿ ಗಾಯವಾಗಿದೆ ಎಂಬ ಮಾತು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೈಗೆ ಬ್ಯಾಂಡೇಜ್ ಹಾಕಿಕೊಂಡಿರುವ ಫೋಟೋ ಸಹ ವೈರಲ್ ಆಗಿವೆ.
ಅಭಿಷೇಕ್ ಬಚ್ಚನ್ ಬಾಬ್ ಬಿಸ್ವಾಸ್, ದಾಸ್ವಿ ಚಿತ್ರಗಳ ಶೂಟಿಂಗ್ನಲ್ಲಿ ಫುಲ್ ಬ್ಯುಸಿಯಾಗಿದ್ದು, ಇದೇ ವೇಳೆ, ಅವಘಡ ಸಂಭವಿಸಿದೆ ಎನ್ನಲಾಗಿದೆ. ಆದರೆ, ಇದರ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಪೊನ್ನಿಯಿನ್ ಸೆಲ್ವನ್'ನಲ್ಲಿ ಐಶ್ವರ್ಯ ರೈ ನಟನೆ ಮಾಡಿದ್ದು, ಅದಕ್ಕಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದರು. ಇದೀಗ ಮುಂಬೈಗೆ ವಾಪಸ್ ಆಗಿದ್ದಾರೆ.