ಸ್ಯಾಂಡಲ್ವುಡ್ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಇಬ್ಬರಿಗೂ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಅಭಿಷೇಕ್ ಹಾಗೂ ರಚಿತಾ ಇಬ್ಬರಿಗೂ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಅಭಿಷೇಕ್ ಅಂಬರೀಶ್ಗೆ ಇದು 27ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 03 ಅಕ್ಟೋಬರ್ 1993 ರಂದು ಜನಿಸಿದ ಅಭಿಷೇಕ್ ಈಗ ಯಂಗ್ ರೆಬಲ್ ಸ್ಟಾರ್ ಎಂದೇ ಫೇಮಸ್. ಅಭಿಷೇಕ್ ಈ ಬಾರಿ ಮನೆಯಲ್ಲೇ ಬಹಳ ಸರಳವಾಗಿ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. "ಈ ಬಾರಿ ನಾನು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಅಪ್ಪನ ಹೆಸರಿನಲ್ಲಿ ಅಭಿಮಾನಿಗಳು ಒಂದೊಂದು ಗಿಡ ನೆಟ್ಟು ಹುಟ್ಟುಹಬ್ಬ ಆಚರಿಸಿ" ಎಂದು ಅಭಿ ಮನವಿ ಮಾಡಿದ್ದಾರೆ. 'ಅಮರ್' ನಂತರ ಅಭಿಷೇಕ್ ಈಗ 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ 3-4 ಸಿನಿಮಾಗಳ ಕಥೆಗಳನ್ನು ಅಭಿಷೇಕ್ ಕೇಳಿದ್ದು ಶೀಘ್ರದಲ್ಲೇ ಫೈನಲ್ ಮಾಡಲಿದ್ದಾರೆ ಎನ್ನಲಾಗಿದೆ.
ಡಿಂಪಲ್ ಕ್ವೀನ್ ಬಿಂದಿಯಾ ರಾಮ್ ಅಲಿಯಾಸ್ ರಚಿತಾ ರಾಮ್ಗೆ ಇಂದು 28ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. 03 ಅಕ್ಟೋಬರ್ 1992 ರಲ್ಲಿ ಜನಿಸಿದ ರಚಿತಾ ರಾಮ್ ಈಗ ಸ್ಯಾಂಡಲ್ವುಡ್ನಲ್ಲಿ ಬಹುಬೇಡಿಕೆಯ ನಟಿ. 'ಅರಸಿ' ಧಾರಾವಾಹಿ ಮೂಲಕ ಹೆಸರು ಗಳಿಸಿದ ರಚಿತಾ ರಾಮ್ ದರ್ಶನ್ ಜೊತೆ 'ಬುಲ್ ಬುಲ್' ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಬಂದವರು. ರಚಿತಾ ಇಂದು ಶೂಟಿಂಗ್ಗೆ ಕೂಡಾ ಹೋಗದೆ ಮನೆಯಲ್ಲೇ ಅಪ್ಪ, ಅಮ್ಮ ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಚಿತಾ ಕೈಯಲ್ಲಿ ಈಗ ಸಾಲು ಸಾಲು ಚಿತ್ರಗಳಿದ್ದು ಇನ್ನೂ 2-3 ವರ್ಷ ಅವರು ಸಖತ್ ಬ್ಯುಸಿ.
ರಚಿತಾ ರಾಮ್ ಹಾಗೂ ಅಭಿಷೇಕ್ ಅಂಬರೀಶ್ ಇಬ್ಬರಿಗೂ ದರ್ಶನ್, ನಿಖಿಲ್ ಕುಮಾರಸ್ವಾಮಿ ಹಾಗೂ ಇನ್ನಿತರರು ಹುಟ್ಟುಹಬ್ಬದ ಶುಭ ಕೋರಿದ್ದಾರೆ.
-
ನನ್ನ ಪ್ರೀತಿಯ ತಮ್ಮ ಅಭಿಷೇಕ್ ಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲಾ ಆದಷ್ಟು ಬೇಗ ಈಡೇರಲಿ👍 ಬೆಸ್ಟ್ ಆಫ್ ಲಕ್ ಫಾರ್ ಬ್ಯಾಡ್ ಮ್ಯಾನರ್ಸ್ pic.twitter.com/ZzfHnT8dLe
— Darshan Thoogudeepa (@dasadarshan) October 3, 2020 " class="align-text-top noRightClick twitterSection" data="
">ನನ್ನ ಪ್ರೀತಿಯ ತಮ್ಮ ಅಭಿಷೇಕ್ ಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲಾ ಆದಷ್ಟು ಬೇಗ ಈಡೇರಲಿ👍 ಬೆಸ್ಟ್ ಆಫ್ ಲಕ್ ಫಾರ್ ಬ್ಯಾಡ್ ಮ್ಯಾನರ್ಸ್ pic.twitter.com/ZzfHnT8dLe
— Darshan Thoogudeepa (@dasadarshan) October 3, 2020ನನ್ನ ಪ್ರೀತಿಯ ತಮ್ಮ ಅಭಿಷೇಕ್ ಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲಾ ಆದಷ್ಟು ಬೇಗ ಈಡೇರಲಿ👍 ಬೆಸ್ಟ್ ಆಫ್ ಲಕ್ ಫಾರ್ ಬ್ಯಾಡ್ ಮ್ಯಾನರ್ಸ್ pic.twitter.com/ZzfHnT8dLe
— Darshan Thoogudeepa (@dasadarshan) October 3, 2020