ETV Bharat / sitara

ಎಂಟು ವರ್ಷಗಳ ಗ್ಯಾಪ್ ನಂತರ ಸ್ಯಾಂಡಲ್​ವುಡ್​​​ಗೆ ಮತ್ತೆ ಎಂಟ್ರಿಯಾದ ಕಾಶೀನಾಥ್​ ಪುತ್ರ - ದೀಪಾವಳಿ

‘ಬಾಜಿ‘ ಹಾಗೂ ‘12 ಎಎಂ ಮಧ್ಯರಾತ್ರಿ’ ಸಿನಿಮಾಗಳ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ಕಾಶೀನಾಥ್ ಪುತ್ರ ಅಭಿಮನ್ಯು ಕಾಶೀನಾಥ್ ಇದೀಗ 8 ವರ್ಷಗಳ ಗ್ಯಾಪ್ ಬಳಿಕ ಮತ್ತೆ ಚಿತ್ರರಂಗಕ್ಕೆ ವಾಪಸಾಗಿದ್ದಾರೆ. ಕಿರಣ್ ಸೂರ್ಯ ನಿರ್ದೇಶನದ ಸಿನಿಮಾವೊಂದರಲ್ಲಿ ಅಭಿಮನ್ಯು ನಟಿಸುತ್ತಿದ್ದಾರೆ ಎನ್ನಲಾಗಿದೆ.

ಅಭಿಮನ್ಯು ಕಾಶೀನಾಥ್
author img

By

Published : Sep 3, 2019, 10:14 AM IST

2009 ರಲ್ಲಿ 'ಬಾಜಿ' ಚಿತ್ರದ ಮೂಲಕ ಸ್ಯಾಂಡಲ್​​ವುಡ್​​ಗೆ ಕಾಲಿಟ್ಟ ಅಭಿಮನ್ಯು ನಿಮಗೆಲ್ಲಾ ನೆನಪಿರಬಹುದು. ಇವು ದಿವಂಗತ ಕಾಶೀನಾಥ್ ಪುತ್ರ ಅಭಿಮನ್ಯು. ಇವರ ಮೂಲ ಹೆಸರು ಅಲೋಕ್​​. ಮೊದಲ ಚಿತ್ರಕ್ಕೆ ಅಂದುಕೊಂಡಂತ ರೆಸ್ಪಾನ್ಸ್ ಸಿಗಲಿಲ್ಲ.

abhimanyu
ಅಭಿಮನ್ಯು ಕಾಶೀನಾಥ್

ಇದೀಗ ಸುಮಾರು 8 ವರ್ಷಗಳ ನಂತರ ಅಭಿಮನ್ಯು ಸ್ಯಾಂಡಲ್​​ವುಡ್​​ಗೆ ವಾಪಸಾಗಿದ್ದಾರೆ. ಅಪ್ಪನ ಅಗಲಿಕೆ ನೋವಿನಿಂದ ಅಭಿಮನ್ಯು ಈಗೀಗ ಹೊರಬರುತ್ತಿದ್ದಾರಂತೆ. 'ಬಾಜಿ' ಚಿತ್ರದ ನಂತರ 2012 ರಲ್ಲಿ ಬಿಡುಗಡೆ ಆದ ‘12 ಎ ಎಂ ಮಧ್ಯರಾತ್ರಿ’ ಸಿನಿಮಾದಲ್ಲಿ ಅಭಿಮನ್ಯು ತಂದೆ ಕಾಶೀನಾಥ್ ಜೊತೆಗೆ ನಟಿಸಿದ್ದರು. ಕ್ರಿಕೆಟ್​​​ನಲ್ಲಿ ಆಸಕ್ತಿ ಇರುವುದರಿಂದ ಕಿಚ್ಚ ಸುದೀಪ್ ಅವರ ಕರ್ನಾಟಕ ಬುಲ್ಡೋಜರ್ ಸೆಲಬ್ರಿಟಿ ಲೀಗ್ ಜೊತೆ ಕೂಡಾ ಅಭಿಮನ್ಯು ಜೊತೆಯಾಗಿದ್ದರು. ಕಿರಣ್ ಸೂರ್ಯ ನಿರ್ದೇಶನದ ಸಿನಿಮಾವೊಂದರಲ್ಲಿ ನಟಿಸಲು ಅಭಿಮನ್ಯು ಒಪ್ಪಿಕೊಂಡಿದ್ದಾರಂತೆ. ಇದಕ್ಕಾಗಿ ಅವರು ತಯಾರಿ ಕೂಡಾ ನಡೆಸಿದ್ದಾರೆ.

ಕಿರಣ್ ಸೂರ್ಯ ‘ದೇವಕಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕ ಆಗಿ ಕೆಲಸ ಮಾಡಿದ್ದವರು. ಇದೀಗ ಈ ಚಿತ್ರದಿಂದ ಸ್ವತಂತ್ಯ್ರ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡಾ ಅವರೇ ಬರೆದಿದ್ದಾರೆ. ಇದೊಂದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾ ವಸ್ತುವಂತೆ. ಸುದರ್ಶನ್ ಆರ್ಟ್ಸ್ ಬ್ಯಾನರ್ ಅಡಿ ಎಂ.ಸಿ. ಗೌಡ ಹಾಗೂ ಜತಿನ್ ಜಿ. ಪಟೇಲ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಗೌತಮ್ ಮನು ಛಾಯಾಗ್ರಹಣವಿದೆ. ಆರ್​.ಎಸ್​. ಗಣೇಶ್ ನಾರಾಯಣ್ ಸಂಗೀತ ನಿರ್ದೇಶಿಸಿರುವ ಈ ಚಿತ್ರದಲ್ಲಿ ಎರಡು ಹಾಡುಗಳಿದೆಯಂತೆ. ದೀಪಾವಳಿ ವೇಳೆಗೆ ಸಿನಿಮಾ ಸೆಟ್ಟೇರಲಿದೆ.

ಅಭಿಮನ್ಯು ಕಾಶಿನಾಥ್ ಮರಳಿ ಬಂದರು

ಯಾರಿದು ಅಭಿಮನ್ಯು? ಇವರೇ ದಿವಂಗತ ಕಾಶೀನಾಥ್ – ನಟ, ನಿರ್ದೇಶಕ, ನಿರ್ಮಾಪಕ ಅವರ ಪುತ್ರ. ಅಪ್ಪನ ಅಗಲಿಕೆ ಇಂದ ಈಗ ಅಭಿಮನ್ಯು ಸ್ವಲ್ಪ ಚೇತರಿಸಿಕೊಂಡಂತೆ ಇದ್ದಾರೆ. 12 ಎ ಎಂ ಮಧ್ಯರಾತ್ರಿ  2012 ರಲ್ಲಿ ಬಿಡುಗಡೆ ಆದ ಕನ್ನಡ ಸಿನಿಮಾ, ಅದರಲ್ಲಿ ಅಪ್ಪನ ಜೊತೆ ಅಭಿಮನ್ಯು ಸಹ ಅಭಿನಯಿಸಿದ್ದರು. ಈಗ ಏಳು ವರ್ಷಗಳ ಬಳಿಕ ಚಿತ್ರವೊಂದಕ್ಕೆ ವಾಪಸ್ಸಾಗುತ್ತಿದ್ದಾರೆ.

ಕ್ರಿಕೆಟ್ ಅಲ್ಲಿ ಆಸಕ್ತಿ ಇರುವುದರಿಂದ ಕಿಚ್ಚ್ ಸುದೀಪ್ ಕರ್ನಾಟಕ ಬುಲ್ಲ್ದೋಜರ್ ಸೆಲಬ್ರಿಟಿ ಕ್ರಿಕೆಟ್ ಲೀಗ್ ಜೊತೆ ಅಭಿಮನ್ಯು ಜೊತೆಯಾಗಿದ್ದರು. ಇವರ ಮೂಲ ಹೆಸರು ಆಲೋಕ್ ಆಗಿದ್ದಾಗ 2009 ರಲ್ಲಿ ಬಾಜಿ ಮೂಲಕ ಸಿನಿಮಾಕ್ಕೆ ಪದಾರ್ಪಣೆ ಮಾಡಿದರು.  

ಆಲೋಕ್ ಅಲಿಯಾಸ್ ಅಭಿಮನ್ಯು ಕಾಶಿನಾಥ್ ಈಗ ಕಿರಣ್ ಸೂರ್ಯ ನಿರ್ದೇಶನದಲ್ಲಿ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನ ಹೆಸರಿಡದ ಸಿನಿಮಾಕ್ಕೆ ಅಭಿಮನ್ಯು ಹಲವು ಬಗೆಯಲ್ಲಿ ತಯಾರಿ ಸಹ ಮಾಡಿಕೊಳ್ಳುತ್ತಿದ್ದಾರೆ.

ಕಿರಣ್ ಈ ಹಿಂದೆ ದೇವಕಿ (ಪ್ರಿಯಾಂಕ ಉಪೇಂದ್ರ ಹಾಗೂ ಮಗಳು ಐಶ್ವರ್ಯ ಅಭಿನಯ) ಸಿನಿಮಾ ಇಂದ ಸಹಾಯಕ ನಿರ್ದೇಶಕ ಆಗಿದ್ದವರು. ಕಥೆ, ಚಿತ್ರಕಥೆ ಸಹ ಅವರೇ ಬರೆದಿದ್ದಾರೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾ ವಸ್ತು.

ಎಂ ಸಿ ಗೌಡ ಮತ್ತು ಜತಿನ್ ಜಿ ಪಟೇಲ್ ಸುದರ್ಶನ್ ಆರ್ಟ್ಸ್ ಬ್ಯಾನ್ನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಗೌತಮ್ ಮನು ಛಾಯಾಗ್ರಹಣ, ಆರ್ ಎಸ್ ಗಣೇಶ್ ನಾರಾಯಣ್ ಸಂಗೀತ ಇರುವ ಈ ಚಿತ್ರದಲ್ಲಿ ಕೇವಲ ಎರಡು ಹಾಡುಗಳಿಗೆ ಮಾತ್ರ ಅವಕಾಶ. ದೀಪಾವಳಿ ಸಂದರ್ಭಕ್ಕೆ ಈ ಅಭಿಮನ್ಯು ಕಾಶೀನಾಥ್ ಸಿನಿಮಾ ಸೆಟ್ಟರಲಿದೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.