ETV Bharat / sitara

ವಿಶ್ವನಾಥನ್ ಆನಂದ್ ಬಯೋಪಿಕ್​​​ನಲ್ಲಿ ಆಮೀರ್ ಖಾನ್​​...ಚಿತ್ರತಂಡ ಹೇಳೋದೇನು...? - Bollywood actor Amir Khan

ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಜೀವನ ಆಧಾರಿತ ಸಿನಿಮಾ ಬಾಲಿವುಡ್​​ನಲ್ಲಿ ತಯಾರಾಗುತ್ತಿದೆ. ಸದ್ಯಕ್ಕೆ ಸಿನಿಮಾ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಚಿತ್ರದಲ್ಲಿ ನಟ ಆಮೀರ್ ಖಾನ್, ವಿಶ್ವನಾಥನ್ ಆನಂದ್ ಪಾತ್ರ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Vishwanathan Anand
ವಿಶ್ವನಾಥನ್ ಆನಂದ್
author img

By

Published : Feb 12, 2021, 1:59 PM IST

ವಿಶ್ವನಾಥನ್ ಆನಂದ್, ಚೆಸ್​​​​ನಲ್ಲಿ ಗ್ರ್ಯಾಂಡ್​​ ಮಾಸ್ಟರ್ ಪಟ್ಟ ಪಡೆಯುವ ಮೂಲಕ ಸಾಧನೆ ಮಾಡಿದ ಆಟಗಾರ. ರಾಜೀವ್ ಗಾಂಧಿ ಖೇಲ್​​​ರತ್ನ, ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ವಿಶ್ವನಾಥನ್ ಆನಂದ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಎತ್ತಿ ಹಿಡಿದವರು.

Aamir khan
ಆಮೀರ್ ಖಾನ್

ಇದನ್ನೂ ಓದಿ: ಆ ವಿಶೇಷ ದಿನದಂದು ಬಿಡುಗಡೆಯಾಗಲಿದೆ 'ರಾಧೇ ಶ್ಯಾಮ್' ಟೀಸರ್

ವಿಶ್ವನಾಥನ್ ಆನಂದ್ ಬಗ್ಗೆ ಇನ್ನೂ ಹೆಚ್ಚಿನ ಜನರಿಗೆ ತಿಳಿಸುವ ಉದ್ದೇಶದಿಂದ ಬಾಲಿವುಡ್​​​ನಲ್ಲಿ ಅವರ ಜೀವನ ಆಧಾರಿತ ಸಿನಿಮಾವೊಂದು ತಯಾರಾಗುತ್ತಿದೆ. ಸಿನಿಮಾ ಬಗ್ಗೆ ಕಳೆದ ವರ್ಷ ಡಿಸೆಂಬರ್​​​​ನಲ್ಲೇ ಘೋಷಿಸಲಾಗಿತ್ತು. ವಿಶ್ವನಾಥನ್ ಆನಂದ್ ಬಗ್ಗೆ ಸಿನಿಮಾ ಬರುತ್ತಿದೆ ಎಂದರೆ ಅವರ ಪಾತ್ರದಲ್ಲಿ ನಟಿಸಲು ಸೂಕ್ತ ನಟನ ಅವಶ್ಯಕತೆ ಇದೆ. ಈ ಪಾತ್ರವನ್ನು ಯಾರು ಮಾಡಬಹುದು ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಮಹಾವೀರ್ ಜೈನ್, "ವಿಶ್ವನಾಥನ್ ಆನಂದ್ ಪಾತ್ರದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಆನಂದ್ ಪಾತ್ರಕ್ಕೆ ಆಮೀರ್ ಖಾನ್ ಸರಿ ಹೊಂದುತ್ತಾರೆ ಎನ್ನಿಸುತ್ತಿದೆ. ಆದರೆ ಈ ಬಗ್ಗೆ ಅಂತಿಮ ತೀರ್ಮಾನ ಮಾಡಬೇಕಿದೆ" ಎಂದು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮಹಾವೀರ್ ಜೊತೆಗೆ ಆನಂದ್ ಎಲ್​.ರಾಯ್ ಕೂಡಾ ಈ ಚಿತ್ರದ ನಿರ್ಮಾಣಕ್ಕೆ ಜೊತೆಯಾಗಲಿದ್ದಾರೆ. ಒಂದು ವೇಳೆ ಮಹಾವೀರ್ ಜೈನ್ ಹೇಳಿದಂತೆ ಈ ಸಿನಿಮಾದಲ್ಲಿ ಆಮೀರ್ ಖಾನ್ ವಿಶ್ವನಾಥನ್ ಆನಂದ್ ಪಾತ್ರ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕು. ಸದ್ಯಕ್ಕೆ ಆಮೀರ್ ಖಾನ್ 'ಲಾಲ್​ಸಿಂಗ್​​​ಚಡ್ಡಾ' ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.