ನಿರ್ಮಾಪಕ ಕೆ ಮಂಜು ಅನಾರೋಗ್ಯದಿಂದ ಚೇತರಿಸಿಕೊಂಡು ಸ್ವಲ್ಪ ಸಣ್ಣಗಾಗಿ ಅವರ ಸಿನಿಮಾ ವೃತ್ತಿಯನ್ನು ‘ಆ ದೃಶ್ಯ’ ಮೂಲಕ ಶುರು ಮಾಡಿದ್ದಾರೆ.
ಶಿವ ಗಣೇಶ್ ನಿರ್ದೇಶನದ ‘ಆ ದೃಶ್ಯ’ ವಿ. ರವಿಚಂದ್ರನ್ ಅಭಿನಯದಲ್ಲಿ ಚಿತ್ರ ಸಂಪೂರ್ಣಗೊಂಡಿದೆ. ಕೆಲವು ದಿನಗಳಲ್ಲಿ ಈ ಚಿತ್ರ ಸೆನ್ಸಾರ್ ಮುಂದೆ ಬರಲಿದೆ. ಕೆ. ಮಂಜು ಪುತ್ರ ಶ್ರೇಯಸ್ ಅಭಿನಯದ ಎರಡನೇ ಸಿನಿಮಾಕ್ಕೆ ‘ವಿಷ್ಣು ಪ್ರಿಯ’ ಎಂದು ನಾಮಕರಣ ಮಾಡಲಾಗಿದೆ. ಕಥೆ ಆಯ್ಕೆ ಬಗ್ಗೆ ಒಂದು ಪ್ರತಿಭಾನ್ವೇಷಣೆ ಸಹ ನಡೆಸಿದ್ದರು. 80 ಕಥೆಗಳಲ್ಲಿ ಒಂದು ಕಥೆ ಮಗನ ಚಿತ್ರಕ್ಕೆ ಆಯ್ಕೆ ಆಗಿದೆ.
ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ‘ಆ ದೃಶ್ಯ’ ಸಿನಿಮಾ ಬಿಡುಗಡೆ ಸೆಪ್ಟಂಬರ್ ತಿಂಗಳಿನಲ್ಲಿ ಆಗಲಿದೆ. ಈ ಚಿತ್ರವೂ ಸಹ ಥ್ರಿಲ್ಲರ್ ಕಥಾವಸ್ತುವಾಗಿದ್ದು, ಇಲ್ಲಿ ಎರಡು ಶೇಡ್ ಅಲ್ಲಿ ವಿ. ರವಿಚಂದ್ರನ್ ಕಾಣಿಸಿಕೊಳ್ಳುತ್ತಾರೆ. ದೃಶ್ಯ ಹೇಗೆ ಮಲಯಾಳಂ ಸಿನಿಮಾ ದೃಶ್ಯ ರಿಮೇಕ್ ಅಗಿತ್ತೋ ಈ ‘ಆ ದೃಶ್ಯ’ ತಮಿಳು ಸಿನಿಮಾ ಡಿ – 16 (ದೃವಂಗಲ್ ಪದಿನಾರು) ಚಿತ್ರದ ಅವತರಿಣಿಕೆ. ತಮಿಳು ಸಿನಿಮಾವನ್ನು ಕಾರ್ತಿಕ್ ನರೆನ್ ಕಥೆ ಬರೆದು ನಿರ್ದೇಶನ ಮಾಡಿದ್ದರು.
ಶಿವ ಗಣೇಶ್ ಈ ಹಿಂದೆ ತಮಿಳು ಚಿತ್ರದ ರಿಮೇಕ್ ‘ಜಿಗರ್ ಥಂಡಾ’ ಸಿನಿಮಾವನ್ನ ಎಸ್ ರಘುನಾಥ್ ನಿರ್ಮಾಣದಲ್ಲಿ ನಿರ್ದೇಶನ ಮಾಡಿದ್ದರು. ಈಗ ಮತ್ತೊಮ್ಮೆ ರಿಮೇಕ್ ಸಿನಿಮಾಕ್ಕೆ ಸಿದ್ಧತೆ ಮಾಡಿಕೊಂಡು ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರನ್ನು 30 ಹಾಗೂ 50 ವಯಸ್ಸಿನ ಪಾತ್ರಗಳಲ್ಲಿ ತೆರೆಯ ಮೇಲೆ ತರಲು ರೆಡಿಯಾಗಿದ್ದಾರೆ.