ETV Bharat / sitara

ಡಬ್ಬಿಂಗ್ ಮುಗಿಸಿದ 'ನೈಂಟಿ ಹೊಡಿ ಮನೀಗ್ ನಡಿ' - ನೈಂಟಿ ಹೊಡಿ ಮನೀಗ್ ನಡಿ ಚಿತ್ರದ ಡಬ್ಬಿಂಗ್

ವೈಜನಾಥ್​ ಬಿರಾದಾರ್​ ಅವರ 500ನೇ ಚಿತ್ರವಾದ ‘ನೈಂಟಿ ಹೊಡಿ ಮನೀಗ್ ನಡಿ’ ಡಬ್ಬಿಂಗ್ ಕಾರ್ಯ ಮುಕ್ತಾಯವಾಗಿದ್ದು, ಚಿತ್ರತಂಡ ‌ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಮಾಡುತ್ತಿದೆ.

90 Hodi Maneg Nadi
ನೈಂಟಿ ಹೊಡಿ ಮನೀಗ್ ನಡಿ
author img

By

Published : Aug 5, 2021, 9:17 AM IST

ಕನ್ನಡ ಚಿತ್ರರಂಗದ ಬೇಡಿಕೆಯ ಹಾಸ್ಯನಟ ವೈಜನಾಥ್​ ಬಿರಾದಾರ್​ ಅವರ 500ನೇ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ನೈಂಟಿ ಹೊಡಿ ಮನೀಗ್ ನಡಿ’ ಚಿತ್ರದ ಡಬ್ಬಿಂಗ್​ ಕೆಲಸ ಯಶಸ್ವಿಯಾಗಿ ಮುಗಿದಿದೆ.

ಇತ್ತೀಚೆಗಷ್ಟೇ ಬೆಂಗಳೂರಿನ ಸುತ್ತಮುತ್ತ 'ನೈಂಟಿ ಹೊಡಿ ಮನೀಗ್ ನಡಿ' ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಸಲಾಗಿತ್ತು. ಇದೀಗ ಮುಂದುವರೆದ ಭಾಗವಾಗಿ ಧ್ವನಿ ಮರುಜೋಡಣೆ ಕಾರ್ಯ ಸಹ ಯಶಸ್ವಿಯಾಗಿ ಮುಗಿದಿದೆ. ಸಿನಿಮಾದಲ್ಲಿ ನೀತು, ಪ್ರೀತು ಪೂಜಾ, ಹಿರಿಯ ನಟರಾದ ಕರಿಸುಬ್ಬು, ಡೇರಿಂಗ್ ಸ್ಟಾರ್ ಧರ್ಮ, ಪ್ರಶಾಂತ್ ಸಿದ್ಧಿ, ಅಭಯ್ ವೀರ್, ಆರ್.ಡಿ.ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ, ಹೊಸಕೋಟೆ ಮುರುಳಿ, ಸಂತು ಸೊಕನಾದಗಿ, ರಾಜು ಗೂಗವಾಡ, ಎಲ್ಐಸಿ ಲೋಕೇಶ್ ಸೇರಿದಂತೆ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ.

90 Hodi Maneg Nadi
ನೈಂಟಿ ಹೊಡಿ ಮನೀಗ್ ನಡಿ ಚಿತ್ರದ ದೃಶ್ಯ

ಅಮ್ಮಾ ಟಾಕೀಸ್ ಬಾಗಲಕೋಟೆ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಕಮರ್ಷಿಯಲ್ ಕಾಮಿಡಿ ಥ್ರಿಲ್ಲರ್ ಚಿತ್ರವಾಗಿದ್ದು, ರತ್ನಮಾಲಾ ಬಾದರದಿನ್ನಿಯವರು ಚಿತ್ರಕ್ಕೆ ಹಣ ಹೂಡಿದ್ದಾರೆ.

ವಿಶೇಷವಾಗಿ ಕವಿರತ್ನ ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ ಎರಡು ಹಾಡಿಗೆ ಕಿರಣ್ ಶಂಕರ್ ಸಂಗೀತ ಸಂಯೋಜಿಸಿದ್ದು, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಅವರು ಧ್ವನಿಯಾಗಿದ್ದಾರೆ. ಇನ್ನೊಂದು ಉತ್ತರ ಕರ್ನಾಟಕದ ನಾಟಿ ಶೈಲಿಯ ಹಾಡಿಗೆ ಚುಟು ಚುಟು ಖ್ಯಾತಿಯ ಶಿವು ಭೆರ್ಗಿ ಸಾಹಿತ್ಯ ಬರೆದು, ಸಂಗೀತ ನೀಡಿದ್ದು, ರವೀಂದ್ರ ಸೋರಗಾಂವಿ ಮತ್ತು ಶಮಿತಾ ಮಲ್ನಾಡ್ ಹಾಡು ಹಾಡಿದ್ದಾರೆ. ಭೂಷಣ್ ಕೊರಿಯೋಗ್ರಫಿಯಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ.

90 Hodi Maneg Nadi
ನೈಂಟಿ ಹೊಡಿ ಮನೀಗ್ ನಡಿ ಚಿತ್ರದ ದೃಶ್ಯ

ಸದ್ಯಕ್ಕೆ ಡಬ್ಬಿಂಗ್ ಮುಗಿಸಿರೋ ಚಿತ್ರತಂಡ, ‌ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಮಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.