'777 ಚಾರ್ಲಿ' ಚಿತ್ರದ ಚಾರ್ಲಿ ಮೀಟ್ಸ್ ಧರ್ಮ ಎಂಬ ಹೊಸ ಟೀಸರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಅಂಗವಾಗಿ ಭಾನುವಾರವಷ್ಟೇ ಬಿಡುಗಡೆಯಾಗಿದೆ. ಈ ಮಧ್ಯೆ ಈ ಟೀಸರ್ ಹೊಸ ದಾಖಲೆ ಬರೆದಿದೆ.
'777 ಚಾರ್ಲಿ' ಚಿತ್ರದ ಟೀಸರ್ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡಗುಡೆಯಾಗಿದೆ. ಕನ್ನಡವಲ್ಲದೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಬಿಡುಗಡೆಯಾಗಿದ್ದು, ಈ ಐದೂ ಟೀಸರ್ಗಳು ಒಂದೇ ದಿನದಲ್ಲಿ 20 ಮಿಲಿಯನ್ ವೀಕ್ಷಣೆ ಪಡೆದಿವೆ. ಈ ಮೂಲಕ ರಕ್ಷಿತ್ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೇಲರ್ ದಾಖಲೆಯನ್ನು ಮುರಿದುಹಾಕಿದೆ.
ಒಂದೂವರೆ ವರ್ಷದ ಹಿಂದೆ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೇಲರ್ ಭಾರೀ ನಿರೀಕ್ಷೆಯ ಮಧ್ಯೆ ಬಿಡುಗಡೆಯಾಗಿತ್ತು. ಚಿತ್ರದ ಟ್ರೇಲರ್ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಅದು ಸಹ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದರೂ ಇಲ್ಲಿಯವರೆಗೂ ಅಷ್ಟೂ ಭಾಷೆಗಳಿಂದ ಕೇವಲ ಎರಡು ಕೋಟಿ ವೀಕ್ಷಣೆ ಮಾತ್ರ ಸಿಕ್ಕಿದೆ. ಆದರೆ, 777 ಚಾರ್ಲಿ ಚಿತ್ರವು ಕೇವಲ ಒಂದೇ ದಿನದಲ್ಲಿ 20 ಮಿಲಿಯನ್ ವೀಕ್ಷಣೆ ಪಡೆದಿರುವುದು ವಿಶೇಷ.
ಇನ್ನು, ಚಿತ್ರದ ಮಲಯಾಳಂ ಟೀಸರ್ಅನ್ನು ಅಲ್ಲಿನ ನಿವಿನ್ ಪೌಲಿ, ಟೊವಿನೋ ಥಾಮಸ್, ಕುಂಚಾಕೋ ಬೋಬನ್ ಸೇರಿದಂತೆ ಎಂಟು ಸೆಲೆಬ್ರಿಟಿಗಳು ಏಕಕಾಲಕ್ಕೆ ಬಿಡುಗಡೆ ಮಾಡಿದ್ದರು. ಅವರೆಲ್ಲರಿಗೂ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ. ಅಷ್ಟೇ ಅಲ್ಲ, ಟಾಲಿವುಡ್ ಸ್ಟಾರ್ಗಳಾದ ನಾನಿ ಮತ್ತು ಸಾಯಿ ಧರಂ ತೇಜ್, ಚಿತ್ರದ ತೆಲುಗು ಟೀಸರ್ ಬಿಡಗುಡೆ ಮಾಡಿದ್ದರು. ಅವರಿಗೂ ರಕ್ಷಿತ್ ಶೆಟ್ಟಿ ಧನ್ಯವಾದ ಸಲ್ಲಿಸಿದ್ದಾರೆ.
ಓದಿ: ವೈದ್ಯರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ, ಅವರ ಮೇಲೆ ಹಲ್ಲೆ ಮಾಡದಿರಿ: ನಟ ಕಿರಣ್ ರಾಜ್