ETV Bharat / sitara

ನಾಳೆ ಕನ್ನಡ ಸಿನಿ ರಸಿಕರಿಗೆ ಭರ್ಜರಿ ಸಿನಿಮಾ ಹಬ್ಬ - ಮುನಿರತ್ನ ಕುರುಕ್ಷೇತ್ರ

ನಾಳೆ ಕನ್ನಡ ಸಿನಿ ರಸಿಕರಿಗೆ ಹಬ್ಬ. ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಕನ್ನಡದ ಎರಡು ಬಿಗ್ ಸಿನಿಮಾಗಳು ತೆರೆಗೆ ಬರುತ್ತಿವೆ.

ಸಿನಿಮಾ ಹಬ್ಬ
author img

By

Published : Aug 8, 2019, 1:57 PM IST

ಡಿಬಾಸ್ ದರ್ಶನ್ ಅಭಿನಯದ ಮಲ್ಟಿ ಸ್ಟಾರ್ ಸಿನಿಮಾ 'ಮುನಿರತ್ನ ಕುರುಕ್ಷೇತ್ರ' 2ಡಿ ಹಾಗೂ 3ಡಿಯಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಇದರ ಜೊತೆಗೆ ಕೋಮಲ್ ಕುಮಾರ್ ಅವರ ಕೆಂಪೇಗೌಡ 2 ಸಹ ಬಿಡುಗಡೆ ಆಗುತ್ತಿದೆ. ಈ ಎರಡು ಭರ್ಜರಿ ಸಿನಿಮಾಗಳಿಗೆ ಐದು ಪರಭಾಷಾ ಸಿನಿಮಾಗಳು ಪೈಪೋಟಿ ನೀಡುತ್ತಿವೆ. ತಮಿಳಿನ ಅಜಿತ್ ಅಭಿನಯದ ‘ನೆರಕೊಂಡ ಪರವೈ’, ನಯನತಾರಾ ಅಭಿನಯದ ಕೊಳಯತಿರ್ ಕೆಲಮ್, ತೆಲುಗು ಭಾಷೆಯಲ್ಲಿ ನಾಗಾರ್ಜುನ ಅಭಿನಯದ ‘ಮನ್ಮುಥುಡು 2’, ಕಥನಮ್, ಹಿಂದಿ ಭಾಷೆಯ ‘ಜಾಬಾರಿಯೆ ಜೋಡಿ’ ನಾಳೆ ಬಿಡುಗಡೆ ಆಗುತ್ತಿವೆ.

'ಮುನಿರತ್ನ ಕುರುಕ್ಷೇತ್ರ' ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಬಹು ನಿರೀಕ್ಷಿತ ಸಿನಿಮಾ ಹಾಗೂ ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ 3ಡಿನಲ್ಲಿ ಬಿಡುಗಡೆ ಆಗುತ್ತಿರುವ ಪೌರಾಣಿಕ ಸಿನಿಮಾ. ವೃಷಭಾದ್ರಿ ಪ್ರೊಡಕ್ಷನ್​​ಲ್ಲಿ ದುರ್ಯೋಧನ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಾಪಕ ಮುನಿರತ್ನ ಅವರ ಅನಿಸಿಕೆಯಂತೆ ಇಲ್ಲಿ ಚಿತ್ರಕಥೆ ವಿಸ್ತಾರ ಮಾಡಲಾಗಿದೆ. 3 ಗಂಟೆ 2 ನಿಮಿಷದ ಸಿನಿಮಾಕ್ಕೆ ಸುಮಾರು 100 ಗಂಟೆಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು. ಇದು ದರ್ಶನ್ ಅವರ 50ನೇ ಸಿನಿಮಾ ಆಗಿದ್ದು, ₹50 ಕೋಟಿಗೂ ಹೆಚ್ಚು ಹಣ ಹೂಡಲಾಗಿದೆ.

ಜೆ.ಕೆ.ಭಾರವಿ ಸಂಭಾಷಣೆ, ಜಯನ್ ವಿನ್ಸೆಂಟ್ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ಡಾ. ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಗೀತ ಸಾಹಿತ್ಯ, ಶಿವಶಂಕರ್ ಹಾಗೂ ಕಲೈ ನೃತ್ಯ, ಕಿರಣ್ ಕುಮಾರ್ ಕಲಾ ನಿರ್ದೇಶನ, ಕನಲ್ ಕಣ್ಣನ್, ಕಿಂಗೋ ಸೋಲೋಮನ್, ವಿನೋದ್, ಶಿವ ಸಾಹಸ, ಜೋನಿ ಹರ್ಷ ಸಂಕಲನ ಇರುವ ಈ ಚಿತ್ರದ ನಿರ್ದೇಶಕರು ನಾಗಣ್ಣ. ಈ ಹಿಂದೆ ನಾಗಣ್ಣ ಚಾರಿತ್ರಿಕ ಸಿನಿಮಾ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನಿರ್ದೇಶನ ಮಾಡಿದವರು.

ದುರ್ಯೋಧನ ಆಗಿ ದರ್ಶನ್, ಕರ್ಣನಾಗಿ ಅರ್ಜುನ್ ಸರ್ಜಾ, ಭೀಷ್ಮನಾಗಿ ಡಾ. ಅಂಬರೀಶ್, ಶ್ರೀಕೃಷ್ಣ ಆಗಿ ವಿ.ರವಿಚಂದ್ರನ್, ಧರ್ಮರಾಯ ಆಗಿ ಶಶಿಕುಮಾರ್, ಭೀಮನಾಗಿ ಡ್ಯಾನಿಶ್​ ಅಖ್ತರ್, ಅರ್ಜುನನಾಗಿ ಸೋನು ಸೂದ್​, ನಕುಲ ಆಗಿ ಯಶಸ್ ಸೂರ್ಯ, ಸಹದೇವ ಆಗಿ ಚಂದನ್, ಅಭಿಮನ್ಯು ಆಗಿ ನಿಖಿಲ್ ಕುಮಾರಸ್ವಾಮಿ, ಶಕುನಿ ಆಗಿ ರವಿಶಂಕರ್, ಕುಂತಿ ಪಾತ್ರದಲ್ಲಿ ಡಾ. ಭಾರತಿ ವಿಷ್ಣುವರ್ಧನ್​, ದ್ರೌಪದಿ ಆಗಿ ಸ್ನೇಹಾ, ಭಾನುಮತಿ ಆಗಿ ಮೇಘನಾರಾಜ್, ರಾಕ್​ಲೈನ್ ವೆಂಕಟೇಶ್ ಶಲ್ಯನಾಗಿ, ದ್ರುತರಾಷ್ಟ್ರನಾಗಿ ಡಾ. ಶ್ರೀನಾಥ್, ದುಶ್ಯಾಸನ ಆಗಿ ರವಿ ಚೇತನ್, ಗಂಧರ್ವ ರಾಜ ಆಗಿ ಅವಿನಾಶ್, ದ್ರೋಣಾಚಾರ್ಯ ಆಗಿ ಶ್ರೀನಿವಾಸಮೂರ್ತಿ, ವಿಧುರ ಆಗಿ ರಮೇಶ್ ಭಟ್, ಸುಭದ್ರ ಆಗಿ ಪವಿತ್ರ ಲೋಕೇಶ್, ಮಾಯೆ ಆಗಿ ಹರಿಪ್ರಿಯಾ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಇನ್ನು ಕೋಮಲ್ ಕುಮಾರ್ ಅಭಿನಯದ 'ಕೆಂಪೇಗೌಡ 2' ಬಹು ದೊಡ್ಡ ಕನ್ನಡ ಸಿನಿಮಾ. 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಪಂಚಮುಖಿ ಹನುಮಾನ್ ಸಿನಿ ಪ್ರೊಡಕ್ಷನ್ ಅಡಿಯಲ್ಲಿ ವಿ.ವಿನೋದ್ ನಿರ್ಮಾಣದ ಈ ಸಿನಿಮಾದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಸುತ್ತ ಕಥೆಯನ್ನು ಹಣೆಯಲಾಗಿದೆ. ಇದು ಮೊದಲ ಬಾರಿಗೆ ಭಾರತೀಯ ಕ್ರಿಕೆಟ್ ಪಟು ಶ್ರೀಶಾಂತ್ ಅಭಿನಯ ಮಾಡಿರುವ ಕನ್ನಡ ಸಿನಿಮಾ. ಲೂಸ್ ಮಾದ ಯೋಗಿ ಸಹ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ.

ನಿರ್ದೇಶಕ ಶಂಕರ್ ಗೌಡ ಅವರ ಕಥೆಗೆ ಹಿರಿಯ ನಿರ್ದೇಶಕ ಕೆ.ವಿ.ರಾಜು ಅವರ ಚಿತ್ರಕಥೆ ಇದೆ. ಶ್ರೀನಾಥ್ ಎಂ.ಎಸ್. ಹಾಗೂ ನಂಜುಂಡ ಸಂಭಾಷಣೆ ರಚಿಸಿದ್ದಾರೆ. ರೋಶ್ ಮೋಹನ್ ಛಾಯಾಗ್ರಹಣ, ವರುಣ್ ಉಣ್ಣಿ ಸಂಗೀತ, ಸಿ.ರವಿಚಂದ್ರ ಸಂಕಲನ, ಮುರಳಿ ನೃತ್ಯ, ಅಂಬು ಅರಿವು, ಥ್ರಿಲ್ಲರ್ ಮಂಜು, ಜಾಲಿ ಬಸ್ತಿನ್ ಸಾಹಸ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರಕ್ಕೆ ಕೋಮಲ್ ಕುಮಾರ್ ಕೆಲವು ವರ್ಷಗಳ ಕಾಲ ಪರಿಶ್ರಮ ಹಾಕಿದ್ದಾರೆ. ರಕ್ಷಿಕಾ ಶರ್ಮ, ಆಲಿ, ಚೇತನ್ ಶರ್ಮ, ಲೋಹಿತಾಶ್ವ, ಸುಚಿಂದ್ರ ಪ್ರಸಾದ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.