ನವದೆಹಲಿ: ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಹುಟ್ಟುಹಬ್ಬದ ಅಂಗವಾಗಿ ಜೀ ಸ್ಟುಡಿಯೋಸ್, ನಿರ್ಮಾಪಕ ಅಹ್ಮದ್ ಖಾನ್ ಹಾಗೂ ಶಹಿರಾ ಖಾನ್ ಸೋಮವಾರ ಹೊಸ ಚಿತ್ರವೊಂದನ್ನು ಅನೌನ್ಸ್ ಮಾಡಿದ್ದಾರೆ. ಚಿತ್ರಕ್ಕೆ 'ಓಂ' ಎಂದು ಹೆಸರಿಟ್ಟಿದ್ದು, ದಿ ಬ್ಯಾಟಲ್ ವಿತ್ಇನ್ ಎಂಬ ಟ್ಯಾಗ್ ಲೈನ್ ಇದೆ. ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಹುಟ್ಟುಹಬ್ಬದ ಅಂಗವಾಗಿ ಜೀ ಸ್ಟುಡಿಯೋಸ್, ನಿರ್ಮಾಪಕ ಅಹ್ಮದ್ ಖಾನ್ ಹಾಗೂ ಶಹಿರಾ ಖಾನ್ ಸೋಮವಾರ ಹೊಸ ಚಿತ್ರವೊಂದನ್ನು ಅನೌನ್ಸ್ ಮಾಡಿದ್ದಾರೆ. ಚಿತ್ರಕ್ಕೆ 'ಓಂ' ಎಂದು ಹೆಸರಿಟ್ಟಿದ್ದು, ದಿ ಬ್ಯಾಟಲ್ ವಿತ್ಇನ್ ಎಂಬ ಟ್ಯಾಗ್ ಲೈನ್ ಇದೆ.
- " class="align-text-top noRightClick twitterSection" data="
">
'ಆಶಿಕಿ-2' ಖ್ಯಾತಿಯ ನಟ ಆದಿತ್ಯ ರಾಯ್ ಕಪೂರ್ ಫೋಟೋವೊಂದನ್ನು ಜೀ ಸ್ಟುಡಿಯೋಸ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಫೋಟೋ ಜೊತೆಗೆ ಹೊಸ ಚಿತ್ರದ ಮಾಹಿತಿ ನೀಡಿದೆ. ''ಆದಿತ್ಯ ಕಪೂರ್ ಹುಟ್ಟುಹಬ್ಬದ ಅಂಗವಾಗಿ 'ಓಂ' ಚಿತ್ರವನ್ನು ನಿರ್ಮಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದು ಈ ಪೋಸ್ಟನ್ನು ಆದಿತ್ಯ ರಾಯ್ ಕಪೂರ್, ಶಹಿರಾ ಖಾನ್ ಹಾಗೂ ಈ ಚಿತ್ರವನ್ನು ನಿರ್ದೇಶಿಸುತ್ತಿರುವ ಕಪಿಲ್ ವರ್ಮಾಗೆ ಟ್ಯಾಗ್ ಮಾಡಲಾಗಿದೆ. ಡಿಸೆಂಬರ್ನಲ್ಲಿ ಈ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು 2021 ಮಧ್ಯದಲ್ಲಿ ಸಿನಿಮಾ ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಲಾಗಿದೆ.