ETV Bharat / sitara

ಅಕ್ಷಯ್ ಕುಮಾರ್ ನೀಡಿದ್ದ ಮಾನನಷ್ಟ ಮೊಕದ್ದಮೆ ನೋಟೀಸ್ ತಿರಸ್ಕರಿಸಿದ ಯೂಟ್ಯೂಬರ್​​​​​ - Sushant singh suicide case

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹೆಸರನ್ನು ಬಳಸಲಾಗಿದೆ ಎಂದು ಆರೋಪಿಸಿ ಬಾಲಿವುಡ್​​ ನಟ ಅಕ್ಷಯ್ ಕುಮಾರ್ ಯೂಟ್ಯೂಬರ್ ರಶೀದ್ ಸಿದ್ದಿಕಿ ಮೇಲೆ 500 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ ರಶೀದ್ ನೋಟೀಸನ್ನು ತಿರಸ್ಕರಿಸಿದ್ದು ಕೂಡಲೇ ನೋಟೀಸ್ ಹಿಂಪಡೆಯಬೇಕು, ಇಲ್ಲವಾದರೆ ಕಾನೂನಿನ ಮೂಲಕ ಹೋರಾಡುತ್ತೇನೆ ಎಂದು ಹೇಳಿದ್ದಾರೆ.

Akshay Kumar
ಅಕ್ಷಯ್ ಕುಮಾರ್
author img

By

Published : Nov 21, 2020, 12:49 PM IST

ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮೇಲೆ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ನೋಟೀಸನ್ನು ಯೂಟ್ಯೂಬರ್​ ರಶೀದ್​​​​​​​​​​​​​ ಸಿದ್ದಿಕಿ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ನನ್ನ ವಿಡಿಯೋಗಳಲ್ಲಿ ಅಕ್ಷಯ್ ಕುಮಾರ್​​​ಗೆ ಮಾನಹಾನಿಯಾಗುವಂತ ಯಾವುದೇ ವಿಚಾರಗಳು ಇಲ್ಲ ಎಂದು ರಶೀದ್ ಸ್ಪಷ್ಟಪಡಿಸಿದ್ದಾರೆ.

ಯೂಟ್ಯೂಬರ್ ರಶೀದ್ ಸಿದ್ದಿಕಿ ಮೇಲೆ ನಟ ಅಕ್ಷಯ್ ಕುಮಾರ್ 500 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ರಶೀದ್ ಸಿದ್ದಿಕಿ ನನ್ನ ಹೆಸರನ್ನು ಬಳಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅಕ್ಷಯ್ ಕುಮಾರ್, ಅನಗತ್ಯವಾಗಿ ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಆರೋಪಿಸಿ ರಶೀದ್ ಸಿದ್ದಿಕಿ ಮೇಲೆ 500 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ತಮ್ಮ ಪರ ವಕೀಲರಾದ ಜೆಪಿ ಜೈಸ್ವಾಲ್​​ ಅವರ ಮೂಲಕ ರಶೀದ್ ಸಿದ್ದಿಕಿ ಕಳಿಸಲಾಗಿರುವ ಉತ್ತರದಲ್ಲಿ , ಅಕ್ಷಯ್ ಕುಮಾರ್ ಉದ್ದೇಶಪೂರಕವಾಗಿ "ನನಗೆ ಕಿರುಕುಳ ನೀಡುವ ದೃಷ್ಟಿಯಿಂದ ಹೀಗೆಲ್ಲಾ ಮಾಡುತ್ತಿದ್ದಾರೆ. ಭಾರತದಂತ ದೇಶದಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಇದೆ. ಆದರೆ ಇದನ್ನು ಮಾನಹಾನಿ ಎಂದು ಪರಿಗಣಿಸಬಾರದು. ಕೂಡಲೇ ನೋಟೀಸನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಕಾನೂನಿನ ಮೂಲಕವೇ ನಾನೂ ಹೋರಾಡುತ್ತೇನೆ" ಎಂದು ರಶೀದ್ ಸಿದ್ದಿಕಿ ಹೇಳಿದ್ದಾರೆ.

ರಶೀದ್ ಸಿದ್ದಿಕಿ, ಬಿಹಾರ ಮೂಲದ ಇಂಜಿನಿಯರ್. ಇದರೊಂದಿಗೆ ಎಫ್​ಎಫ್​​ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಸಿದ್ದಿಕಿ, ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ನಂತರ ಅನೇಕ ವಿಡಿಯೋಗಳನ್ನು ಮಾಡಿ 4 ತಿಂಗಳಲ್ಲೇ ಅಪಾರ ಹಣ ಸಂಪಾದಿಸಿದ್ದಾರೆ ಎನ್ನಲಾಗಿದೆ. ರಶೀದ್ ಸಿದ್ದಿಕಿ ಮಹಾರಾಷ್ಟ್ರ ಸರ್ಕಾರ, ಮಹಾರಾಷ್ಟ್ರ ಪೊಲೀಸರು ಹಾಗೂ ಮಂತ್ರಿ ಆದಿತ್ಯ ಠಾಕ್ರೆ ಬಗ್ಗೆ ಕೂಡಾ ವಿಡಿಯೋ ಮಾಡಿದ್ದರು. ಇದರಿಂದ ಮಹಾರಾಷ್ಟ್ರ ಪೊಲೀಸರನ್ನು ಹಲವರು ಟೀಕೆ ಮಾಡಿ ಕಮೆಂಟ್ ಮಾಡಿದ್ದರು. ಈ ಕಾರಣದಿಂದ ಅನುಚಿತ ವರ್ತನೆ ಆರೋಪದ ಮೇರೆಗೆ ಮುಂಬೈ ಪೊಲೀಸರು ಕೂಡಾ ರಶೀದ್ ಸಿದ್ದಿಕಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ನವೆಂಬರ್ 3 ರಂದು ತನಿಖೆಗೆ ಸಹಕರಿಸಲು ಸೂಚಿಸಿ ಸ್ಥಳೀಯ ಕೋರ್ಟ್ ಸಿದ್ದಿಕಿಗೆ ಜಾಮೀನು ನೀಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.