ಬಾಲಿವುಡ್ ನಟಿ ಯಾಮಿ ಗೌತಮ್ ಮತ್ತು ಉರಿ ಸಿನಿಮಾ ನಿರ್ದೇಶಕ ಆದಿತ್ಯ ಧರ್ ನಡುವಿನ ಪ್ರೇಮ ಪ್ರಣಯವು ಜೂನ್ 4 ರಂದು ಅವರು ತಮ್ಮ ವಿವಾಹದ ಕುರಿತು ಘೋಷಿಸುವವರೆಗೂ ಗುಟ್ಟಾಗಿಯೇ ಉಳಿದಿತ್ತು. ಯಾಮಿ ತನ್ನ ವೈಯಕ್ತಿಕ ಜೀವನವನ್ನು ಮಾಧ್ಯಮಗಳಿಂದ ದೂರ ಇಡುವಲ್ಲಿ ಯಶಸ್ವಿಯಾದರು. ಕೊರೊನಾ ಸಾಂಕ್ರಾಮಿಕದ ನಡುವೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
- " class="align-text-top noRightClick twitterSection" data="
">
ಮದುವೆಗೆ ಯಾಮಿ ತನ್ನ ತಾಯಿಯ 33 ವರ್ಷದ ಸೀರೆಯನ್ನು ಧರಿಸಿದ್ದಳು ಮತ್ತು ಈ ವಿಶೇಷ ದಿನದಂದು ತನ್ನ ಸಹೋದರಿ ಸುರಿಲಿ ಗೌತಮ್ ಜೊತೆ ತನ್ನ ಮೇಕಪ್ ಮಾಡಿಕೊಂಡಳು. ಕೊರೊನಾ ಟೈಮ್ ಅಲ್ಲಿ ಮದುವೆಯಾದ ಸ್ಟಾರ್ ಜೋಡಿಗಳ ಪೈಕಿ ಯಾಮಿ ಗೌತಮ್ ಹಾಗೂ ಆದಿತ್ಯ ಧರ್ ಜೋಡಿ ಸಹ ಒಂದು. ಉರಿ ನಿರ್ದೇಶಕ ಆದಿತ್ಯ ಧರ್‌ನೊಂದಿಗೆ ಯಾಮಿ ತಮ್ಮ ಹುಟ್ಟೂರು ಹಿಮಾಚಲ ಪ್ರದೇಶದ ಬಿಲಾಸ್ಪುರ್‌ನಲ್ಲಿ ವಿವಾಹವಾಗಿದ್ದರು. ಇನ್ಸ್ಟಾಗ್ರಾಂನಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಚಿತ್ರೋದ್ಯಮದ ಸ್ನೇಹಿತರಿಗೆ ಈ ಜೋಡಿ ಅಚ್ಚರಿ ಮೂಡಿಸಿದ್ರು.
ಮದುವೆ ದಿನ ಯಾಮಿ ತನ್ನ ತಾಯಿಯ 33 ವರ್ಷದ ಹಿಂದಿನ ಸೀರೆಯನ್ನು ಧರಿಸಿದ್ದು ವಿಶೇಷ. ಹಾಗೆಯೇ ಅವರಿಗೆ ವಧುವಿನ ಅಲಂಕಾರ ಮಾಡಿದ್ದು ಮತ್ಯಾರೂ ಅಲ್ಲ ಅವರ ಪ್ರೀತಿಯ ಸಹೋದರಿ ಸುರಿಲಿ ಗೌತಮ್.
- " class="align-text-top noRightClick twitterSection" data="
">
ಇತ್ತೀಚಿನ ವರ್ಚುಯಲ್ ಸಂದರ್ಶನದಲ್ಲಿ, ಪೂರ್ವಸಿದ್ಧತೆಯಿಲ್ಲದೇ ದಿಢೀರ್ ವಿವಾಹವಾಗಿದ್ದರ ಕುರಿತು ಕೇಳಿದಾಗ ಯಾಮಿ, ಇದು ಯೋಜಿತ ಮದುವೆಯಲ್ಲ ಆದರೆ , "ಇದು ಅತ್ಯಂತ ಸುಂದರ ರೀತಿಯಲ್ಲಿ ಜರುಗಿತು" ಎಂದು ಹೇಳಿಕೊಂಡಿದ್ದಾರೆ.
ಉರಿ ಸಿನಿಮಾ ಪ್ರಚಾರದ ಸಮಯದಲ್ಲಿ ನಮ್ಮಬ್ಬಿರ ನಡುವೆ ಮಾತು ಆರಂಭವಾಗಿತ್ತು. ನಂತರ ನಮ್ಮ ಸ್ನೇಹ ಪ್ರಾರಂಭವಾಯಿತು. ಎರಡು ವರ್ಷಗಳು ಕಳೆದಿವೆ, ಮತ್ತು ನಾವು 'ಮದುವೆಯಾಗೋಣ' ಎಂದುಕೊಂಡೆವು ಇಬ್ಬರ ಕುಟುಂಬಗಳು ಸಹ ಒಪ್ಪಿಗೆ ನೀಡಿದವು ನಾವಿಬ್ಬರೂ ಬಹಳ ಖುಷಿಯಾಗಿದ್ದೇವೆ ನಮಗಿಂತ ನಮ್ಮಿಬ್ಬರ ಕುಟುಂಬದವರು ಹೆಚ್ಚು ಸಂತಸ ಪಟ್ಟಿದ್ದಾರೆ ಎಂದು ಯಾಮಿ ತಿಳಿಸಿದ್ದಾರೆ.
"ನಾವು ನಿಶ್ಚಿತಾರ್ಥ ಮಾಡಿಕೊಳ್ಳಬೇಕಾಗಿತ್ತು. ಆದರೆ, ನಿಶ್ಚಿತಾರ್ಥ ಇವೆಲ್ಲಾ ನಮ್ಮ ಸಂಸ್ಕೃತಿಯ ಭಾಗವಲ್ಲ, ಹಾಗಾದರೆ ಮದುವೆಯಾಗುವುದು ಹೇಗೆ?' ತದನಂತರ ಆದಿತ್ಯ ನನ್ನನ್ನು ಕೇಳಿದ, 'ನೀವು ಮದುವೆಗೆ ಸಿದ್ಧರಿದ್ದೀರಾ? ನಾವು ಮದುವೆ ಆಗೋಣವೇ ಎಂದು ಮಾಡೋಣವೇ?' ಪ್ರಾಮಾಣಿಕವಾಗಿ ನನಗೆ ಈಗಲೂ ನಾನು ಮದುವೆ ಯಾಗಿದ್ದೇನೆ ಎಂಬ ಭಾವನೆಯೇ ಬರುತ್ತಿಲ್ಲ. ಬಹುಶಃ ಬಹಳ ಸಂತೋಷವಾಗಿದ್ದೇನೆ'' ಎನಿಸುತ್ತಿದೆ ಎಂದಿದ್ದಾರೆ.
- " class="align-text-top noRightClick twitterSection" data="
">
ಯಾಮಿ ಪ್ರಸ್ತುತ ತಮ್ಮ ಮುಂಬರುವ ಚಿತ್ರ ಲಾಸ್ಟ್‌ನ ಚಿತ್ರೀಕರಣಕ್ಕಾಗಿ ಕೋಲ್ಕತ್ತಾದಲ್ಲಿದ್ದಾರೆ, ಇದರಲ್ಲಿ ಅವರು ಕ್ರೈಂ ರಿಪೋರ್ಟರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರ ಕೈಯಲ್ಲಿ ಇನ್ನು ಮೂರು ಚಿತ್ರಗಳಿದ್ದು, ಶೀಘ್ರದಲ್ಲೇ ಅವುಗಳನ್ನು ಘೋಷಿಸಲಾಗುವುದು.
ಒಟ್ಟಿನಲ್ಲಿ ಉರಿ ಸಿನಿಮಾ ಪ್ರಚಾರದ ವೇಳೆ ಆರಂಭವಾದ ಸಲುಗೆ ಸ್ನೇಹಕ್ಕೆ ತಿರುಗಿ ,ನಂತರ ಪ್ರೇಮವಾಗಿ ಎರಡೂವರೆ ವರ್ಷಗಳಾಗುವುದರೊಳಗೆ ವಿವಾಹ ಬಂಧನದಲ್ಲಿ ಯಾಮಿ ಹಾಗೂ ಆದಿತ್ಯ ಅವರನ್ನು ಬಂಧಿಸಿದೆ.