ಹೈದರಾಬಾದ್: ನಟಿ ಯಾಮಿ ಗೌತಮ್ ತಮ್ಮ ಮೆಹೆಂದಿ ಕಾರ್ಯಕ್ರಮದ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರದ ನಿರ್ದೇಶಕಿ ಆದಿತ್ಯ ಧಾರ್ ಅವರನ್ನು ಯಾಮಿ ವಿವಾಹವಾಗಿದ್ದು, ದಂಪತಿಗಳು ಶುಕ್ರವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಪ್ರಕಟಿಸಿದ್ದಾರೆ.
ಶನಿವಾರ ಹಂಚಿಕೊಂಡ ಮೆಹೆಂದಿ ಫೋಟೋಗಳಲ್ಲಿ, ಯಾಮಿ ಹಳದಿ ಬಣ್ಣದ ಸಲ್ವಾರ್ ಸೂಟ್‌ನಲ್ಲಿ ಮಿಂಚುತ್ತಿದ್ದಾರೆ.
- " class="align-text-top noRightClick twitterSection" data="
">
ಶುಕ್ರವಾರ ಸಂಜೆ, ಯಾಮಿ ತಮ್ಮ ವಿವಾಹದ ಚಿತ್ರಗಳನ್ನು ಹಂಚಿಕೊಂಡಿದ್ದರು: "ನಿಮ್ಮೆಲ್ಲರ ಆಶೀರ್ವಾದಗಳನ್ನು ಮತ್ತು ಶುಭಾಶಯಗಳನ್ನು ನಾವು ಬಯಸುತ್ತೇವೆ" ಎಂದು ಬರೆದಿದ್ದರು.
ವರದಿಗಳ ಪ್ರಕಾರ, ಯುರಿ: ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರದ ಚಿತ್ರೀಕರಣದಲ್ಲಿ ಯಾಮಿ ಮತ್ತು ಆದಿತ್ಯ ನಡುವೆ ಪ್ರೀತಿ ಚಿಗುರಿತ್ತು.