ರಾಖಿ ಸಾವಂತ್ ಸಿನಿಮಾಗಳಲ್ಲಿ ಆ್ಯಕ್ಟಿಂಗ್ನಿಂದ ಹೆಸರು ಮಾಡದಿದ್ರೂ ಸದಾ ವಿಚಿತ್ರ ಹಾಗೂ ಹಾಸ್ಯಾಸ್ಪದ ಸ್ಟೇಟ್ಮೆಂಟ್ಗಳನ್ನು ನೀಡುವ ಮೂಲಕ ಟಾಕ್ ಆಫ್ ದಿ ಟೌನ್ ಆಗುತ್ತಾರೆ. ಮೊನ್ನೆ ಯೋಗ ದಿನದಂದು ಕೂಡಾ ಯೋಗ ಮಾಡುವುದರಿಂದ ನನ್ನ ಲೈಂಗಿಕ ಶಕ್ತಿ ವೃದ್ಧಿಸಿದೆ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು ರಾಖಿ.
ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಹಾಗೂ ನಟ ಶತ್ರುಘ್ನ ಸಿನ್ಹ ಅವರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. 'ಚಪ್ಪನ್ ಚೋರಿ' ಎಂಬ ಐಟಂ ಸಾಂಗ್ನಲ್ಲಿ ಡ್ಯಾನ್ಸ್ ಮಾಡುತ್ತಿರುವ ರಾಖಿ 'ಈ ಹಾಡಿನಲ್ಲಿ ಅಮಿತಾಬ್ ಬಚ್ಚನ್ ಹಾಗೂ ಶತ್ರುಘ್ನ ಸಿನ್ಹ ನಟಿಸಬೇಕಿತ್ತು. ಇಬ್ಬರಿಗೂ ಇಲ್ಲಿಗೆ ಬರಲು ಫ್ಲೈಟ್ ಬುಕ್ ಆಗಿತ್ತು. ಆದರೆ ಅಮಿತಾಬ್ ಜಿ ಗೆ ಫ್ಲೈಟ್ ಮಿಸ್ ಆಗಿದೆ. ಹೋಗಲಿ ಶತ್ರುಘ್ನ ಸಿನ್ಹ ಅವರಾದ್ರೂ ಬರುತ್ತಿದ್ದಾರಾ ಎಂದು ಕೇಳಲು ಅವರಿಗೆ ಕರೆ ಮಾಡಿದರೆ ನನಗೆ ಹೊಟ್ಟೆ ಸರಿ ಇಲ್ಲ ಅಂತ ಹೇಳ್ಬಿಟ್ರು. ಆದ್ದರಿಂದ ಅವರ ಡ್ಯೂಪ್ಲಿಕೇಟ್ಗಳನ್ನು ಕರೆಸಲಾಯಿತು' ಎಂದು ಮನಸಿಗೆ ಬಂದಂತೆ ಮಾತನಾಡಿದ್ದಾರೆ. ಅಸಲಿಗೆ ರಾಖಿ ಹೇಳಿದ್ದು ನಿಜವೇ ಅಲ್ಲ. ಅಮಿತಾಗ್ ಆಗಲೀ ಶತ್ರುಘ್ನ ಸಿನ್ಹ ಆಗಲಿ ಈ ಹಾಡಿನಲ್ಲಿ ನಟಿಸುತ್ತಿಲ್ಲ.
- " class="align-text-top noRightClick twitterSection" data="">
ರಾಖಿ ಈ ವಿಡಿಯೋ ವೈರಲ್ ಆಗಿದ್ದು ನೆಟಿಜನ್ಸ್ ಕೋಪಗೊಂಡಿದ್ದಾರೆ. 'ನೀನು ಬಾಲಿವುಡ್ಗೆ ಒಂದು ಕಪ್ಪು ಚುಕ್ಕೆ' ಎಂದು ಕೆಲವರು ಕಮೆಂಟ್ ಮಾಡಿದರೆ ಮತ್ತೆ ಕೆಲವರು 'ರಾಖಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ' ಎಂದು ಕಮೆಂಟ್ ಮಾಡಿದ್ದಾರೆ.