ETV Bharat / sitara

51 ಡಿಗ್ರಿ ಹೈ ಟೆಂಪರೇಚರ್ ಫೋಟೋಶೂಟ್.. ಇನ್​​ಸ್ಟಾಗ್ರಾಂನಲ್ಲಿ ಈ ನಟಿಯ ಆ ಫೋಟೋದ್ದೇ ಹವಾ! - ಹೈದರಾಬಾದ್

ನಟಿ ಊವರ್ಶಿ ರೌಟೇಲಾ ಅವರು 2020ರಲ್ಲಿ ಮಾಡಿದ ಒಂದು ಮ್ಯಾಗಜೀನ್ ಫೋಟೋಶೂಟ್​​ನ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Urvashi Rautela
ಊವರ್ಶಿ ರೌಟೇಲಾ
author img

By

Published : Aug 11, 2021, 9:09 PM IST

ಹೈದರಾಬಾದ್: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಳ್ಳುವಾಗ, ಈ ಚಿತ್ರೀಕರಣವನ್ನು ಹೆಚ್ಚಿನ ತಾಪಮಾನದಲ್ಲಿ ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಬಾಲಿವುಡ್‌ಗೆ ಕಾಲಿಟ್ಟ ತಕ್ಷಣ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದ ನಟಿ ಊವರ್ಶಿ ರೌಟೇಲಾ 2020ರಲ್ಲಿ ಮಾಡಿದ ಒಂದು ಮ್ಯಾಗಜೀನ್ ಫೋಟೋಶೂಟ್​​ನ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದುಬೈಯ ಪ್ರಮುಖ ಫ್ಯಾಷನ್ ಮತ್ತು ಜೀವನ ಶೈಲಿ ನಿಯತಕಾಲಿಕೆ ಎಕ್ಸ್‌ಪೆಡಿಶನ್​​ಗಾಗಿ ಊರ್ವಶಿಯ ಫೋಟೋಶೂಟ್​ ಮಾಡಲಾಗಿದೆ.

ತನ್ನ ಮನಮೋಹಕ ನೋಟದ ಫೋಟೋವನ್ನು ಹಂಚಿಕೊಂಡ ಊರ್ವಶಿ ತಾನು 51 ಡಿಗ್ರಿ ಬಿಸಿಲಿನಲ್ಲಿ ಫೋಟೋಶೂಟ್ ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಬುಧವಾರ ಊರ್ವಶಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, 51 ಡಿಗ್ರಿ ಹೈ ಟೆಂಪರೇಚರ್​​ನಲ್ಲಿ ನಾನು ಕರಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ, ಊರ್ವಶಿ ಇಟಾಲಿಯನ್ ಫ್ಯಾಶನ್ ಲೇಬಲ್ ಅಮಾಟೊ ಕೌಚರ್‌ನ ಗೌನ್ ಧರಿಸಿದ್ದಾರೆ. ಊರ್ವಶಿಯ ಈ ಹೊಸ ಲುಕ್ ಅಭಿಮಾನಿಗಳನ್ನು ಅಚ್ಚರಿಗೊಳಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.