ಮುಂಬೈ: ಬದೈ ಹೋ ಚಿತ್ರದಲ್ಲಿ ಕೆಲಸ ಮಾಡಬೇಕಾದರೆ ಸುರೇಖಾ ಸಿಕ್ರಿ ಅವರ ಸರಳತೆ ನನಗೆ ಬಹಳ ಇಷ್ಟವಾಗಿತ್ತು ಎಂದು ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರುವ ಸುರೇಖಾ ಸಿಕ್ರಿ (75) ಗೆ ಸಂತಾಪ ಸೂಚಿಸಿರುವ ಅವರು, ಹಿರಿಯ ನಟಿ ಬಗ್ಗೆ ಗುಣಗಾನ ಮಾಡಿದ್ದಾರೆ.
ಬಾದೈ ಹೋ ಚಿತ್ರವು ಮಾತೃ ಪ್ರಧಾನ ಚಿತ್ರವಾಗಿದ್ದು, ತಾಯಿ (ಸುರೇಖಾ ಸಿಕ್ರಿಯ) ಮಧ್ಯವಯಸ್ಸಿನಲ್ಲಿ ಗರ್ಭಿಣಿಯಾಗುವುದು ಮಗನಿಗೆ ಇರುಸು ಮುರುಸು ಉಂಟು ಮಾಡುತ್ತದೆ. ನಟಿ ನೀನಾ ಗುಪ್ತಾ, ಗಜರಾವ್ ರಾವ್ ಮತ್ತು ಸನ್ಯಾ ಮಲ್ಹೋತ್ರಾ ಅವರನ್ನೊಳಗೊಂಡ ಬಾದೈ ಹೋ ಚಿತ್ರವು ಒಂದು ದೊಡ್ಡ ಕುಟುಂಬವಾಗಿದ್ದು, ಸಿಕ್ರಿ ಅದರ ಮುಖ್ಯಸ್ಥರಾಗಿದ್ದಾರೆ ಎಂದು ಖುರಾನಾ ಹೇಳಿದರು.
ನಾವು ನಮ್ಮ ಕುಟುಂಬಕ್ಕಿಂತ ಹೆಚ್ಚಿನ ಸಮಯವನ್ನು ಸಿನಿಮಾ ತಂಡಗಳ ಜತೆ ಕಳೆಯುತ್ತೇವೆ. ಅಂಥ ಒಂದು ಸುಂದರವಾದ ಕುಟುಂಬ ಬಾದೈ ಹೋದಲ್ಲಿತ್ತು ಎಂದು ಉಲ್ಲೇಖಿಸಿದ್ದಾರೆ. ನಾನು ಅಭಿನಯಿಸಿರುವ ಎಲ್ಲಾ ಚಿತ್ರಗಳ ಪೈಕಿ ಪರಿಪೂರ್ಣ ಪಾತ್ರವರ್ಗವನ್ನು ಹೊಂದಿರುವ ಚಿತ್ರ ಬಾದೈ ಹೋ. ಚಿತ್ರದಲ್ಲಷ್ಟೇ ಅಲ್ಲ, ಅವರು ನಿಜ ಜೀವನದಲ್ಲಿಯೂ ಅತ್ಯಂತ ಸರಳ ವ್ಯಕ್ತಿಯಾಗಿದ್ದರು ಎಂದಿದ್ದಾರೆ.
ಇದನ್ನೂ ಓದಿ:ಹೃದಯಾಘಾತ: 3 ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ನಿಧನ
ನಾನೊಮ್ಮೆ ಹೇಳಿದ್ದೆ, ಅಮ್ಮಾ ನೀವು ನಿಜವಾದ ತಾರೆ ಎಂದು. ಅವರು ನಿನಗೆ ಇನ್ನಷ್ಟು ಹೆಚ್ಚು ಅವಕಾಶಗಳು ದೊರೆಯಲಿ ಎಂದು ಆಶಿಸಿದ್ದರು. ಅವರ ಆಶೀರ್ವಾದಕ್ಕೆ ನಾನು ಕೆಲಕಾಲ ಮೌನಿಯಾಗಿದ್ದೆ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.