ಬಾಲಿವುಡ್ ನಟಿ ಆಲಿಯಾ ಭಟ್ ಎಸ್.ಎಸ್. ರಾಜಮೌಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಆರ್ಆರ್ಆರ್' ಸಿನಿಮಾದ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ ಮುಂಬೈಗೆ ವಾಪಸ್ ತೆರಳಿದ್ದಾರೆ. ಆರ್ಆರ್ಆರ್ ಚಿತ್ರದಲ್ಲಿ ಆಲಿಯಾ, ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.
- " class="align-text-top noRightClick twitterSection" data="
">
ಆಲಿಯಾ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋವೊಂದನ್ನು ಅಭಿಮಾನಿಗಳು ಬಹಳ ಇಷ್ಟಪಟ್ಟಿದ್ದಾರೆ. ಮೇಕಪ್ ಇಲ್ಲದೆ ಕಾಣಿಸಿಕೊಂಡಿರುವ ಈ ಫೋಟೋದಲ್ಲಿ ಆಲಿಯಾ ಭಟ್, ಮೊಗದಲ್ಲಿ ಮಂದಹಾಸ ಬೀರುತ್ತಾ ಏನೋ ಹಗಲು ಕನಸು ಕಾಣುತ್ತಿರುವವರಂತೆ ಆಕಾಶವನ್ನು ನೋಡುತ್ತಿದ್ದಾರೆ. "Took a flight mid convo" ಎಂದು ಆಲಿಯಾ ತಮ್ಮ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಯಾರನ್ನು ನೋಡುತ್ತಿದ್ದೀರಿ ಎಂದು ಕೆಲವರು ಕಮೆಂಟ್ ಮಾಡಿದರೆ ಮತ್ತೆ ಕೆಲವರು ಆಲಿಯಾ ಹಗಲು ಕನಸು ಕಾಣುತ್ತಿರಬಹುದು ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಸಮಂತಾ ಜಿಮ್ಗೆ ಹೋಗೋದು ಫಿಟ್ನೆಸ್ಗಾಗಿ ಅಲ್ವಂತೆ.. ಹಾಗಾದ್ರೆ?
ಕರಿಯರ್ ವಿಚಾರಕ್ಕೆ ಬರುವುದಾದರೆ, ಆಲಿಯಾ ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಅಮಿತಾಬ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್ ಹಾಗೂ ಇನ್ನಿತರರು ನಟಿಸಿದ್ದಾರೆ. ಇದರೊಂದಿಗೆ ಸಂಜಯ್ ಲೀಲಾ ಬನ್ಸಾಲಿಯವರ 'ಗಂಗೂಬಾಯಿ ಕಾಥಿಯಾವಾಡಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.