ಮುಂಬೈ: ದಿವಂಗತ ರಿಷಿ ಕಪೂರ್ ಮತ್ತು ನೀತು ಕಪೂರ್ ಅವರ ಪುತ್ರಿ ರಿಧಿಮಾ ಕಪೂರ್ ಸಾಹ್ನಿ ಬಾಲಿವುಡ್‌ನಲ್ಲಿ ಎಂದಿಗೂ ಮುಗಿಯದ ಸ್ವಜನಪಕ್ಷಪಾತ ಕುರಿತಾದ ಚರ್ಚೆ ಬಗ್ಗೆ ಮಾತನಾಡಿದ್ದಾರೆ. ಕುಟುಂಬದ ಹೆಸರನ್ನು ಮೀರಿ ಸಿನಿಮೋದ್ಯಮದಲ್ಲಿ ಬದುಕಲು ಸಾಧ್ಯವೆಂಬುದನ್ನು ಕೆಲವರು ಸಾಬೀತುಪಡಿಸಬೇಕು ಎಂದು ಅವರು ಹೇಳಿದ್ದಾರೆ.
- " class="align-text-top noRightClick twitterSection" data="
">
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಭಿಮಾನಿಗಳು ಬಾಲಿವುಡ್‌ನಲ್ಲಿರುವ ಸ್ವಜನಪಕ್ಷಪಾತದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಅಳಲು ತೋಡಿಕೊಳ್ತಿದ್ದಾರೆ ಎಂದು ವೃತ್ತಿಯಲ್ಲಿ ಆಭರಣ ವಿನ್ಯಾಸಕನಾಗಿರುವ ರಿಧಿಮಾ ಹೇಳಿದ್ದಾರೆ. ಆದರೆ ತಮ್ಮ ಸಹೋದರ ರಣಬೀರ್ ಕಪೂರ್ ಮತ್ತು ಸೋದರ ಸಂಬಂಧಿಗಳಾದ ಕರೀನಾ ಮತ್ತು ಕರಿಷ್ಮಾ ಕಪೂರ್ ಅವರು ಸ್ವಜನಪಕ್ಷಪಾತದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆದವರಲ್ಲ ಎಂದು ಸಾಬೀತುಪಡಿಸಿದ್ದಾರೆ. ವೃತ್ತಿಜೀವನದಲ್ಲಿ ಅವರು ಇಂದು ಎಲ್ಲಿದ್ದಾರೆಯೋ ಅಲ್ಲಿರಲು ಅರ್ಹರು ಎಂದಿದ್ದಾರೆ.
- " class="align-text-top noRightClick twitterSection" data="
">
"ಅಡ್ವಾಂಟೇಜ್ ಕ್ಯಾ ಹೋತಾ ಹೈ (ಏನು ಪ್ರಯೋಜನ)? ನಾವು ಹೆಸರಿನೊಂದಿಗೆ ಬೆಳೆದಿದ್ದೇವೆ ಮತ್ತು ಅದನ್ನು ಬಳಸಿಕೊಂಡಿದ್ದೇವೆ. ಯಾವುದೇ ನಟನ ಮಗು ಅದೇ ವೃತ್ತಿಯನ್ನು ಮುಂದುವರಿಸಲು ಬಯಸಿದರೆ ಅವನು ಅಥವಾ ಅವಳು ಕುಟುಂಬದ ಹಿನ್ನೆಲೆ ಕಾರಣದಿಂದಾಗಿ ಚಿತ್ರಗಳಲ್ಲಿ ಅವಕಾಶ ಪಡೆದರು ಎಂದು ಹೇಳಲಾಗುತ್ತದೆ. ಆದರೆ ಅದರ ನಂತರ ಸಹ ಅವರು ತಮ್ಮ ಟ್ಯಾಲೆಂಟ್ ಅನ್ನು ಸಾಬೀತುಪಡಿಸಬೇಕು. ರಣಬೀರ್, ಕರಿಷ್ಮಾ, ಕರೀನಾ ಅವರ ಕೆಲಸ ಮತ್ತು ಪ್ರತಿಭೆಯಿಂದಾಗಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ, ಹಿರಿಯ ಪತ್ರಕರ್ತರೊಂದಿಗಿನ ಸಂದರ್ಶನದಲ್ಲಿ ಕರೀನಾ ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. "21 ವರ್ಷಗಳಿಂದ ಈ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವುದು ಸ್ವಜನಪಕ್ಷಪಾತದಿಂದ ಸಾಧ್ಯವಿಲ್ಲ ಎಂದು ಹೇಳಿದ್ದರು.