ಲಾಕ್ಡೌನ್ ವೇಳೆ ಜನರಲ್ಲಿ ಹೊಸ ಹೊಸ ಪ್ರತಿಭೆ ಅನಾವರಣಗೊಳ್ಳುತ್ತಿರುವುದಂತೂ ಸತ್ಯ. ಅಡುಗೆ ಮಾಡದವರು ಅಡುಗೆ ಕಲಿಯುತ್ತಿದ್ದಾರೆ. ಕೆಲಸವೇ ಮಾಡದವರು ಮೈ ಬಗ್ಗಿಸಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಟಿಕ್ಟಾಕ್ ಕೂಡಾ ಮಾಡಲು ಆರಂಭಿಸಿದ್ದಾರೆ.
- " class="align-text-top noRightClick twitterSection" data="
">
ಇನ್ನು ಇತ್ತೀಚೆಗೆ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಟಿಕ್ಟಾಕ್ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿದೆ. ಅದರಲ್ಲೂ ಪತಿ ರಾಜ್ಕುಂದ್ರಾ ಜೊತೆ ಸಖತ್ ಟಿಕ್ಟಾಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತಿದ್ದಾರೆ ಈ ವಯ್ಯಾರಿ.
ಇಂದು ಬೆಳಗ್ಗೆ ಕೂಡಾ ಶಿಲ್ಪಾ ಹೊಸ ಟಿಕ್ಟಾಕ್ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಶಿಲ್ಪಾ ತಮ್ಮ ಪತಿ ರಾಜ್ಕುಂದ್ರಾಗಾಗಿ ರುಚಿ ರುಚಿಯಾದ ಆಲೂ ಪರಾಠ ಮಾಡಿ ಬಡಿಸುತ್ತಾರೆ. ಆಲೂ ಪರಾಠವನ್ನು ಸುತ್ತ ತಿರುಗಿಸಿ ನೋಡಿದ ಕುಂದ್ರಾ ಆಲೂ ಪರಾಠದಲ್ಲಿ ಆಲೂಗಡ್ಡೆಯೇ ಇಲ್ವಲ್ಲಾ ಎಂದು ಪತ್ನಿಯನ್ನು ಪ್ರಶ್ನಿಸುತ್ತಾರೆ.
ಪತಿ ಪ್ರಶ್ನೆಗೆ ಕಿರಿಕಿರಿಯಾದ ಶಿಲ್ಪಾ, ಆಲೂ ಪರಾಠದಲ್ಲಿ ಆಲೂಗಡ್ಡೆ ಕಾಣಿಸುತ್ತಿಲ್ಲವೇ...? ಹಾಗಾದರೆ ನಿಮಗೆ ಕಾಶ್ಮೀರಿ ಪಲಾವ್ನಲ್ಲಿ ಕಾಶ್ಮೀರ್ ಕಾಣುವುದೇ..? ಬನಾರಸ್ ಸೀರೆಯಲ್ಲಿ ಬನಾರಸ್ ಕಾಣುವುದೇ ಎಂದು ಕೇಳುತ್ತಾರೆ. ಈ ಮರುಪ್ರಶ್ನೆಗೆ ಕುಂದ್ರಾ ಕಕ್ಕಾಬಿಕ್ಕಿಯಾಗುತ್ತಾರೆ. ಈ ಫನ್ನಿ ವಿಡಿಯೋವನ್ನು ಶಿಲ್ಪಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು 'Food for thought'ಎಂದು ಕ್ಯಾಪ್ಷನ್ ನೀಡಿದ್ಧಾರೆ.
ಈ ವಿಡಿಯೋ ನೋಡಿದ ಅಭಿಮಾನಿಗಳು ಸಖತ್ ಎಂಜಾಯ್ ಮಾಡಿದ್ದಾರೆ. ಒಟ್ಟಿನಲ್ಲಿ ಶಿಲ್ಪಾ ತಮ್ಮ ಟಿಕ್ಟಾಕ್ ವಿಡಿಯೋಗಳಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಶಿಲ್ಪಾ ಕರಿಯರ್ ವಿಚಾರಕ್ಕೆ ಬರುವುದಾದರೆ 'ನಿಕಮ್ಮಾ' ಹಾಗೂ 'ಹಂಗಾಮ 2' ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಕೊರೊನಾ ವೈರಸ್ ತೊಂದರೆ ನಿವಾರಣೆಯಾಗುತ್ತಿದ್ದಂತೆ ಚಿತ್ರಗಳ ಶೂಟಿಂಗ್ ಆರಂಭವಾಗಲಿದೆ.