ಮುಂಬೈ: ಹಿಂದಿ ಧಾರಾವಾಹಿ 'ನಾಗಿನ್' ಖ್ಯಾತಿಯ ನಟಿ ಮೌನಿ ರಾಯ್ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಿನಿಮಾಗಿಂತಲೂ ಹೆಚ್ಚಾಗಿ ತಮ್ಮ ಹಾಟ್ ಫೋಟೋಶೂಟ್ಗಳಿಂದಲೇ ಹೆಚ್ಚು ಸದ್ದು ಮಾಡುತ್ತಿರುವ ನಟಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಮಾದಕ ಫೋಟೋವೊಂದನ್ನು ಶೇರ್ ಮಾಡಿ ನಿರೀಕ್ಷೆಯಂತೆ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ನಟಿ ಮೌನಿ ರಾಯ್ ಅವರ ಇನ್‌ಸ್ಟಾಗ್ರಾಂ ಖಾತೆಯನ್ನೊಮ್ಮೆ ವೀಕ್ಷಿಸಿದ್ರೆ, ಅಲ್ಲಿ ಅವರ ವೈಯಕ್ತಿಕ, ವೃತ್ತಿಪರ ಜೀವನದ ಫೋಟೋಗಳು ಮತ್ತು ವಿಡಿಯೋಗಳೇ ತುಂಬಿ ತುಳುಕುತ್ತಿರುತ್ತವೆ. ಈ ನಡುವೆ ಆಗಾಗ ತಮ್ಮ ಬಹುಕಾಂತೀಯ ದೇಹದ ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಂದ ಪ್ರಶಂಸೆಗೂ ಪಾತ್ರರಾಗುತ್ತಿರುತ್ತಾರೆ.
ನಟಿ ಇದೀಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೀಚ್‌ಸೈಡ್ ಕೆಫೆಗೆ ಭೇಟಿ ನೀಡಿರುವ ಥ್ರೋಬ್ಯಾಕ್ ಫೋಟೋವೊಂದನ್ನು ಹಂಚಿಕೊಂಡಿದ್ದು, 'ಸಮ್ ವೈಟ್ ಗ್ರೀನ್ಸ್ ಅಂಡ್ ಬ್ಲೂಸ್ ಫಾರ್ ಯುವರ್ ಟೈಮ್ಲೈನ್...ಥ್ರೋ ಬ್ಯಾಕ್ ಟು ಹ್ಯಾಪಿಯರ್ ಟೈಮ್ಸ್' ಎಂದು ಕ್ಯಾಪ್ಶನ್ ನೀಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿದ್ದಾರೆ.
ಸದ್ಯ ಫೋಟೊವೊಂದನ್ನು ಶೇರ್ ಮಾಡಿ ಸುದ್ದಿಯಾಗಿರುವ ನಟಿ, ಹಿಂದಿ ಭಾಷೆಯ ಫ್ಯಾಂಟಸಿ ಆ್ಯಕ್ಷನ್ ಸಾಹಸ ಚಿತ್ರವಾದ ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ನಟಿ ಆಲಿಯಾ ಭಟ್, ರಣಬೀರ್ ಕಪೂರ್ ಹಾಗೂ ಮುಖ್ಯ ಪಾತ್ರಗಳಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದಾರೆ. ಅವರು ಕೆಲವು ಬ್ಲಾಕ್ ಬಾಸ್ಟರ್ ಚಲನಚಿತ್ರಗಳಲ್ಲಿ ನಟಿಸಿದ್ದು, ಗೋಲ್ಡ್, ರೋಮಿಯೋ, ಅಕ್ಬರ್ ವಾಲ್ಟರ್ ಮತ್ತು ಮೇಡ್ ಇನ್ ಚೀನಾ ಅವರು ನಟಿಸಿರುವ ಕೆಲವು ಜನಪ್ರಿಯ ಸಿನಿಮಾಗಳಾಗಿವೆ.