ಹೈದರಾಬಾದ್ : ನಟಿ ಮೌನಿ ರಾಯ್ ಇಂದು 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಆಪ್ತ ಸ್ನೇಹಿತರೊಂದಿಗೆ ಗೋವಾದ ಮೊಯಿರಾದಲ್ಲಿರುವ ನಟಿಯು ಪಾರ್ಟಿಯಲ್ಲಿ ತಲ್ಲೀಣರಾಗಿದ್ದಾರೆ. ಇನ್ನು, ಹುಟ್ಟು ಹಬ್ಬದ ನಿಮಿತ್ತ ಆಶ್ಚರ್ಯಕರ ಕೊಡುಗೆ ನೀಡಿ ವಿಶ್ ಮಾಡಿದ ಸ್ನೇಹಿತರನ್ನು ಕಂಡು ನಟಿ ಕಣ್ಣೀರು ಹಾಕುವ ಮೂಲಕ ಆನಂದ ವ್ಯಕ್ತಪಡಿಸಿದ್ದಾರೆ.
ಡಿಸೈನರ್ ಅನುರಾಧಾ ಖುರಾನಾ ಮತ್ತು ಮೀಟ್ ಬ್ರದರ್ಸ್ ಖ್ಯಾತಿಯ ಸಂಗೀತ ನಿರ್ದೇಶಕ ಮನ್ಮೀತ್ ಸಿಂಗ್ ಸೇರಿ ಇತರೆ ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ತೇಲಾಡುತ್ತಿರುವ ನಟಿ ಮೌನಿ ರಾಯ್ ಅವರ ಕೆಲ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಕೊಳದಲ್ಲಿ ನೃತ್ಯ ಮಾಡುತ್ತಿರುವ ನಟಿಯ ವಿಡಿಯೋ ಇದಾಗಿದೆ.
ಸದ್ಯ ಬಾಲಿವುಡ್ನಲ್ಲಿ ಭರವಸೆಯ ನಟಿಯಾಗಿ ಗುರುತಿಸಿಕೊಂಡಿರುವ ಮೌನಿ ರಾಯ್, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದಲ್ಲಿ ಮೌನಿ ರಾಯ್ ನೆಗೆಟಿವ್ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರತಂಡ ಭಾರಿ ಭರವಸೆ ಇಟ್ಟುಕೊಂಡಿದೆ. ಮೌನಿ ರಾಯ್ ಕೆಜಿಎಫ್ ಸಿನಿಮಾದಲ್ಲಿ ಗಲಿ ಗಲಿ ಎಂದು ಸೊಂಟ ಬಳುಕಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.