ETV Bharat / sitara

ಪ್ಯಾಕ್​ ಮಾಡುವ ಮುನ್ನ ಟೋಸ್ಟ್ ನೆಕ್ಕಿದ ಬೇಕರಿ ಕೆಲಸಗಾರನನ್ನು ಜೈಲಿಗಟ್ಟಿ: ರವೀನಾ ಟಂಡನ್‌ - ಟೋಸ್ಟ್ ಬೇಕರಿ

ಖ್ಯಾತ ಬಾಲಿವುಡ್ ನಟಿ ರವೀನಾ ಟಂಡನ್ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಶೇರ್​ ಮಾಡಿರುವ ವಿಡಿಯೋದಲ್ಲಿ, ಕಾರ್ಖಾನೆ ಅಥವಾ ಬೇಕರಿಯೊಂದರಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಪ್ಯಾಕ್​ ಮಾಡುವ ಮುನ್ನ ಉದ್ದೇಶಪೂರ್ವಕವಾಗಿ ತನ್ನ ಪಾದವನ್ನು ಟೋಸ್ಟ್​ಗಳ ಮೇಲಿಡುವುದು, ಮತ್ತೊಬ್ಬ ಕೆಲಸಗಾರ ಟೋಸ್ಟ್​ಗಳನ್ನು ನೆಕ್ಕುತ್ತಿರುವುದು ಕಂಡು ಬರುತ್ತದೆ.

ರವೀನಾ ಟಂಡನ್
ರವೀನಾ ಟಂಡನ್
author img

By

Published : Sep 19, 2021, 3:33 PM IST

Updated : Sep 19, 2021, 3:40 PM IST

ಮುಂಬೈ: ಟೋಸ್ಟ್ ತಯಾರಿಕಾ ಘಟಕದಲ್ಲಿನ ಅಸ್ವಚ್ಛತೆಯ ಬಗ್ಗೆ ಬಾಲಿವುಡ್​ ನಟಿ ರವೀನಾ ಟಂಡನ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೋಸ್ಟ್​ಗಳನ್ನು ನೆಕ್ಕುತ್ತಿರುವ, ಅವುಗಳ ಮೇಲೆ ಪಾದವನ್ನಿಟ್ಟಿರುವ ಕೆಲಸಗಾರರನ್ನು ಜೈಲಿಗಟ್ಟಬೇಕು ಎಂದು ಬರೆದುಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್​ ಸ್ಟೋರಿಯಲ್ಲಿ ರವೀನಾ ಶೇರ್​ ಮಾಡಿರುವ ವಿಡಿಯೋದಲ್ಲಿ, ಕಾರ್ಖಾನೆ ಅಥವಾ ಬೇಕರಿಯೊಂದರಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಪ್ಯಾಕ್​ ಮಾಡುವ ಮುನ್ನ ಬೇಕಂತಲೇ ತನ್ನ ಪಾದವನ್ನ ಟೋಸ್ಟ್​ಗಳ ಮೇಲಿಡುವುದು, ಮತ್ತೊಬ್ಬ ಕೆಲಸಗಾರ ಟೋಸ್ಟ್​ಗಳನ್ನು ನೆಕ್ಕುತ್ತಿರುವುದು ಕಂಡು ಬರುತ್ತದೆ.

ರವೀನಾ ಟಂಡನ್ ಇನ್‌ಸ್ಟಾಗ್ರಾಮ್‌ ಸ್ಟೋರಿ
ರವೀನಾ ಟಂಡನ್ ಇನ್‌ಸ್ಟಾಗ್ರಾಮ್‌ ಸ್ಟೋರಿ

ಇದನ್ನೂ ಓದಿ: 'ಗಾಯಗೊಂಡ ಸಿಂಹ'ಕ್ಕೆ ಬಿಡುಗಡೆ ಮುನ್ನವೇ ಡಿಮ್ಯಾಂಡ್ : ಕೋಟಿ ಕೋಟಿ ಬೆಲೆ ಬಾಳುವ ಕೆಜಿಎಫ್ ಚಾಪ್ಟರ್-2

"ಅವರು ಸಿಕ್ಕಿಬೀಳುತ್ತಾರೆ ಹಾಗೂ ಶಾಶ್ವತವಾಗಿ ಕಂಬಿಗಳ ಹಿಂದೆ ಇರುತ್ತಾರೆಂದು ಭಾವಿಸಿದ್ದೇನೆ" ಎಂದು ನಟಿ ಬರೆದುಕೊಂಡಿದ್ದಾರೆ. ಇದೇ ವಿಡಿಯೋವನ್ನು ನೆಟ್ಟಿಗರು ತಮ್ಮ ಇನ್‌ಸ್ಟಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂರ್ಖರು ಜೀವನದಲ್ಲಿ ಎಂದಿಗೂ ಉದ್ಧಾರವಾಗುವುದಿಲ್ಲ' ಎಂದು ಹೇಳಿದ್ದಾರೆ.

ರವೀನಾ ಟಂಡನ್ ಮುಂಬರುವ ಚಿತ್ರ ಕೆಜಿಎಫ್- 2 ನಲ್ಲಿ ರಾಜಕಾರಣಿ ರಮಿಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ನಟ ಯಶ್ ಅಭಿನಯದ ಈ ಸಿನಿಮಾದಲ್ಲಿ ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್ ಮತ್ತು ಅನಂತ್ ನಾಗ್ ಕೂಡ ಪರದೆ ಹಂಚಿಕೊಂಡಿದ್ದಾರೆ.

Last Updated : Sep 19, 2021, 3:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.