ಹೈದರಾಬಾದ್: ಬಾಲಿವುಡ್ ನಟ ವಿಕ್ಕಿ ಕೌಶಲ್ ಇಂದು ಕೊರೊನಾ ಪರೀಕ್ಷೆಗೊಳಗಾಗಿದ್ದು, ತಮಗೆ ನೆಗೆಟಿವ್ ಕಾಣಿಸಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಖುಷಿ ಹಂಚಿಕೊಂಡಿದ್ದಾರೆ.
ವಾರದ ಹಿಂದೆ ನನ್ನಲ್ಲಿ ಪಾಸಿಟಿವ್ ಕಾಣಿಸಿಕೊಂಡಿತ್ತು. ಈಗ ನಾನು ಮತ್ತೆ ಕೊರೊನಾ ಪರೀಕ್ಷೆಗೊಳಗಾಗಿದ್ದು, ವರದಿ ನೆಗೆಟಿವ್ ಬಂದಿದೆ. ನನ್ನ ಚೇತರಿಕೆಗಾಗಿ ಪ್ರಾರ್ಥನೆ ಮಾಡಿಕೊಂಡ ಎಲ್ಲ ಅಭಿಮಾನಿಗಳಿಗೂ ಧನ್ಯವಾದ ಎಂದು ಶೀರ್ಷಿಕೆ ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ. ಅಲ್ಲದೇ ಕೊರೊನಾದಿಂದ ಎಚ್ಚರದಿಂದಿರಿ ಹಾಗೂ ಸುರಕ್ಷಿತವಾಗಿರಿ ಎಂದು ಸಲಹೆ ಸಹ ನೀಡಿದ್ದಾರೆ.
- " class="align-text-top noRightClick twitterSection" data="
">
ವಿಕ್ಕಿ ಈ ಹಿಂದೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಆಗ ಅವರಲ್ಲಿ ಪಾಸಿಟಿವ್ ಕಾಣಿಸಿಕೊಂಡಿತ್ತು. ಹಾಗಾಗಿ ತಮ್ಮ ಮುಖ್ಯಭೂಮಿಕೆಯಲ್ಲಿನ 'ಮಿಸ್ಟರ್ ಲೆಲೆ' ಚಿತ್ರೀಕರಣದಿಂದ ದೂರವೇ ಉಳಿದುಕೊಂಡಿದ್ದರು. ವೈದ್ಯರ ಸಲಹೆ ಮೇರೆಗೆ ಸ್ವತಃ ಹೋಂ ಕ್ವಾರಂಟೈನ್ ಸಹ ಆಗಿದ್ದರು.
ಸರ್ದಾರ್ ಉಧಮ್ ಸಿಂಗ್, ದಿ ಇಮ್ಮಾರ್ಟಲ್ ಅಶ್ವತ್ಥಮ, ತಖ್ತ್, ಸ್ಯಾಮ್ ಬಹದ್ಧೂರ್ ಸೇರಿದಂತೆ ಹಲವು ಚಿತ್ರಗಳು ಇವರ ಖಾತೆಯಲ್ಲಿದ್ದು ಸದ್ಯ ಬಾಲಿವುಡ್ನಲ್ಲಿ ಬ್ಯೂಸಿ ನಟರಾಗಿದ್ದಾರೆ.