ETV Bharat / sitara

ಗಾಯಕ ಬಪ್ಪಿ ಲಹರಿ ಅಂತ್ಯಕ್ರಿಯೆ : ಅಭಿಮಾನಿಗಳು, ಸ್ನೇಹಿತರಿಂದ ಡಿಸ್ಕೋ ಕಿಂಗ್​​ಗೆ ಅಂತಿಮ ನಮನ ಸಲ್ಲಿಕೆ - ಗಾಯಕ ಬಪ್ಪಿ ಲಾಹಿರಿ ಅಂತ್ಯಕ್ರಿಯೆ

ಖ್ಯಾತ ಗಾಯಕ, ಸಂಯೋಜಕ ಬಪ್ಪಿ ಲಹರಿ ಅವರ ಅಂತ್ಯಕ್ರಿಯೆ ಮಧ್ಯಾಹ್ನ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನೆರವೇರಿತು.

Veteran Singer Bappi Lahiri CreVeteran Singer Bappi Lahiri Cre
ಗಾಯಕ ಬಪ್ಪಿ ಲಾಹಿರಿ ಅಂತ್ಯಕ್ರಿಯೆ
author img

By

Published : Feb 17, 2022, 5:29 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​​ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹರಿ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನೆರವೇರಿದೆ. ಕುಟುಂಬಸ್ಥರು, ಸ್ನೇಹಿತರು, ಬಾಲಿವುಡ್​ ಪ್ರಮುಖರು ಬಪ್ಪಿ ದಾಗೆ ಕಣ್ಣೀರಿನ ವಿದಾಯ ಹೇಳಿದರು.

ಬಪ್ಪಿ ಲಹರಿ ಅಂತಿಮ ಯಾತ್ರೆ

ಡಿಸ್ಕೋ ಕಿಂಗ್ ಅವರ ಪಾರ್ಥಿವ ಶರೀರವನ್ನು ಹೂವಿನಿಂದ ಅಲಂಕರಿಸಿದ ಟ್ರಕ್‌ನಲ್ಲಿ ಅವರ ನಿವಾಸದಿಂದ ಪವನ್ ಹನ್ಸ್ ಸ್ಮಶಾನಕ್ಕೆ ತೆಗೆದುಕೊಂಡು ಹೋಗಲಾಯಿತು. ಈ ವೇಳೆ ಕುಟುಂಬಸ್ಥರು ಬಪ್ಪಿ ಲಹರಿ ಇಷ್ಟಪಡುತ್ತಿದ್ದ ಚಿನ್ನದ ಸರ ಮತ್ತು ಸನ್‌ಗ್ಲಾಸ್‌ಗಳನ್ನು ಹಾಕಿದ್ದರು. ದಾರಿ ಉದ್ದಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಬಪ್ಪಿ ದಾ ಅವರ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದರು.

Veteran Singer Bappi Lahiri Cremated,
ತಂದೆಗೆ ಅಂತಿಮ ವಿಧಿ ವಿಧಾನ ನೆರವೇರಿಸಿದ ಪತ್ರ ಬಪ್ಪಿ ಲಹರಿ

ಬಳಿಕ ಪುತ್ರ ಬಪ್ಪ ಲಹರಿ ಸಂಪ್ರದಾಯದಂತೆ ವಿಧಿ - ವಿಧಾನಗನ್ನು ನೆರವೇರಿಸಿ ಅಗ್ನಿ ಸ್ಪರ್ಶ ಮಾಡುವ ಮೂಲಕ ತಂದೆಗೆ ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಯಲ್ಲಿ ಮಗಳು ರೆಮಾ, ವಿದ್ಯಾ ಬಾಲನ್, ಅಲ್ಕಾ ಯಾಗ್ನಿಕ್, ಶಾನ್, ಇಲಾ ಅರುಣ್, ಲಲಿತ್ ಪಂಡಿತ್, ರೂಪಾಲಿ ಗಂಗೂಲಿ ಮತ್ತು ಮಿಕಾ ಸಿಂಗ್ ಸೇರಿದಂತೆ ಇತರರು ಭಾಗಿಯಾಗಿದ್ದರು.

80 ಮತ್ತು 90ರ ದಶಕದಲ್ಲಿ ಡಿಸ್ಕೋ ಸಾಂಗ್‌ಗಳಿಗೆ ಸಖತ್ ಫೇಮಸ್ ಆಗಿದ್ದ ಬಪ್ಪಿ, ಆ ಕಾಲಕ್ಕೆ ಸಿನಿಮಾ ಸಂಗೀತದಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ್ದರು. ಫೆ.16ರಂದು ಮುಂಬೈನ ಜುಹುವಿನಲ್ಲಿರುವ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಬಪ್ಪಿ ಲಹಿರಿ ನಿಧನ ಹೊಂದಿದ್ದರು. ಆದರೆ, ಅವರ ಹಾಡುಗಳಿಂದ 'ಬಪ್ಪಿ ದಾ' ಸದಾ ಜನರ ಮನಸ್ಸಲ್ಲಿ ಅಜರಾಮರರಾಗಿರುತ್ತಾರೆ.

ಇದನ್ನೂ ಓದಿ: ಡಿಸ್ಕೋ ಸಾಂಗ್‌ ಮಾಂತ್ರಿಕ ಬಪ್ಪಿ ಲಹರಿ ಅವರನ್ನು ನೆನಪು ಮಾಡುವ ಅತ್ಯದ್ಭುತ ಟಾಪ್​ 10 ಹಾಡುಗಳು ಯಾವವು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.