ETV Bharat / sitara

'ಭೇಡಿಯಾ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿವೀಲ್; ಅರ್ಧ ಮನುಷ್ಯ- ಅರ್ಧ ತೋಳದ ಪಾತ್ರದಲ್ಲಿ ವರುಣ್! - ಭೇಡಿಯಾ ಚಿತ್ರದ ಬಿಡುಗಡೆ

ಹಾಲಿವುಡ್​ ತಂತ್ರಜ್ಞರ ಕೈಚಳಕ ಹಾಗೂ ಬಿಗ್​ ಬಜೆಟ್​ ಚಿತ್ರವಾದ 'ಭೇಡಿಯಾ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿವೀಲ್​​ ಆಗಿದೆ. ಚಿತ್ರದಲ್ಲಿ ವರುಣ್ ಅರ್ಧ ಮನುಷ್ಯ ಮತ್ತು ಅರ್ಧ ತೋಳದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Varun Dhawan's First Look From The Movie 'Bhediya' Revealed

author img

By

Published : Nov 25, 2021, 1:55 PM IST

ಬಾಲಿವುಡ್​ ನಟ ವರುಣ್ ಧವನ್​ ನಟನೆಯ ಬಹುನಿರೀಕ್ಷಿತ 'ಭೇಡಿಯಾ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ರಿವೀಲ್​ ಮಾಡಲಾಗಿದೆ. ಹಸಿದ ಹೆಬ್ಬುಲಿಯಂತೆ ಅತೀಂದ್ರಿಯ ಕೆಂಪು ಬಣ್ಣದೊಂದಿಗೆ ರೌದ್ರಾವತಾರ ತಾಳಿರುವ ಕಣ್ಣುಗಳನ್ನು ತೆರೆದ ಪೋಸ್ಟರ್​ ಇದಾಗಿದೆ.

14, 2022 ರಂದು ಬಿಡುಗಡೆ ಮಾಡಲು ಚಿತ್ರ ತಂಡ ಈ ಹಿಂದೆ ಪ್ಲಾನ್​ ಮಾಡಿಕೊಂಡಿತ್ತು. ಆದರೆ, ಕೊರೊನಾ ಕಾರಣದಿಂದ ಮೂಂದೂಡಲಾಗಿತ್ತು. ಬರುವ ನವೆಂಬರ್ 25, 2022 ರಂದು ಬಿಡುಗಡೆ ಮಾಡಲು ತೀರ್ಮಾನಿಸಿದೆ.

ವಿಶಿಷ್ಟತೆಯಿಂದ ಕೂಡಿದ ಚಿತ್ರದ ಮೊದಲ ಪೋಸ್ಟರ್​ಗೆ​ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೃತಿ ಸನೋನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ದಿನೇಶ್ ವಿಜನ್ ನಿರ್ಮಾಣ ಮಾಡಿದರೆ ಅಮರ್ ಕೌಶಿಕ್ ನಿರ್ದೇಶನವಿದೆ. ಹಾಲಿವುಡ್​ ತಂತ್ರಜ್ಞರ ಕೈಚಳಕ ಚಿತ್ರಕ್ಕೆ ಮಗದೊಂದು ಪ್ಲಸ್​ ಪಾಯಿಂಟ್​ ಎನ್ನಲಾಗುತ್ತಿದೆ.

ಚಿತ್ರದಲ್ಲಿ ವರುಣ್ ಅರ್ಧ ಮನುಷ್ಯ ಮತ್ತು ಅರ್ಧ ತೋಳದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಮತ್ತು ದೀಪಕ್ ಡೊಬ್ರಿಯಾಲ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರೇನ್ ಭಟ್ ಎಂಬುವರು ಚಿತ್ರಕಥೆ ಬರೆದಿದ್ದಾರೆ.

ವರುಣ್ ಧವನ್​ ಅವರ ಸಿನಿಮಾ ಕರಿಯರ್​ನಲ್ಲೇ 'ಭೇಡಿಯಾ' ಅತಿ ದೊಡ್ಡ ಬಜೆಟ್​ ಚಿತ್ರವಾಗಲಿದೆ ಎನ್ನಲಾಗುತ್ತಿದೆ. ಹಾಗಾಗಿ ಬಾಲಿವುಡ್​ ಬಳಗ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದೆಯಂತೆ. ವರುಣ್ ಧವನ್​ ಕೂಡ ಟ್ವೀಟ್​ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.