ಹೈದರಾಬಾದ್ : ದೀರ್ಘಕಾಲದ ಗೆಳತಿ ನತಾಶಾ ದಲಾಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬಾಲಿವುಡ್ ನಟ ವರುಣ್ ಧವನ್, ತನ್ನ ವಿವಾಹದ ಯೋಜನೆಗಳನ್ನು ತೆರೆದಿಟ್ಟಿದ್ದಾರೆ. ಕೊರೊನಾ ಮುಗಿದ ಬಳಿಕವೇ ವಿವಾಹ ಆಗುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳದಿದ್ದರೆ, ಇಷ್ಟೊತ್ತಿಗೆ ವರುಣ್ ಧವನ್ ವಿವಾಹಿತ ವ್ಯಕ್ತಿಯಾಗಿರುತ್ತಿದ್ದರು. ಆದರೆ, ಕೊರೊನಾ ಅದಕ್ಕೆ ಅಡ್ಡಿಯಾಯಿತು. ಎರಡು ವರ್ಷಗಳಿಂದ ಈ ವಿಷಯದ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ. ಜಗತ್ತಿನಾದ್ಯಂತ ಅನಿಶ್ಚಿತತೆ (ಕೊರೊನಾ) ಎಲ್ಲರನ್ನೂ ಕಾಡುತ್ತಿದೆ. ಅದು ಪೂರ್ತಿಯಾಗಿ ಇತ್ಯರ್ಥಗೊಂಡ ಬಳಿಕವೇ ಮದುವೆ ಆಗುತ್ತೇನೆ ಎಂದು ಧವನ್ ಮಾಹಿತಿ ನೀಡಿದರು.
- " class="align-text-top noRightClick twitterSection" data="
">
ಪ್ರಸ್ತುತ ಕೊರೊನಾ ಪ್ರಕರಣ ಇಳಿಮುಖವಾಗುತ್ತಿವೆ, ಖಂಡಿತವಾಗಿಯೂ ಅದಕ್ಕಾಗಿಯೇ ಯೋಜನೆ ರೂಪಿಸುತ್ತೇನೆ. ನನಗನಿಸಿದ ಮಟ್ಟಿಗೆ ಈ ವರ್ಷವೇ ಮದುವೆ ಮಾಡಿಕೊಳ್ಳುತ್ತೇನೆ. ಆದರೆ, ಖಚಿತತೆ ಇಲ್ಲ ಎಂದು ಕೂಲಿ ನಂ.1 ಚಿತ್ರದ ನಟ ವೆಬ್‌ಲಾಯ್ಡ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
- " class="align-text-top noRightClick twitterSection" data="
">
ವರುಣ್ ಅವರು ನತಾಶಾ ಅವರೊಂದಿಗೆ ಬಹು ವರ್ಷಗಳಿಂದ ಗೆಳತನ ಹೊಂದಿದ್ದು, ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕರೀನಾ ಕಪೂರ್ ಖಾನ್ ಅವರ ರೇಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವರುಣ್, ಮದುವೆಗೆ ನನ್ನ ಪೋಷಕರು ಕಾತರವನ್ನ ಹೊಂದಿದ್ದಾರೆ ಎಂದಿದ್ದರು.