ಬಾಲಿವುಡ್ನ ಸ್ಟಾರ್ ನಟ ವರುಣ್ ಧವನ್ ಅವರು ಪತ್ನಿ ನತಾಶಾ ದಲಾಲ್ ಅವರ ದಾಂಪತ್ಯಕ್ಕೆ ಒಂದು ವರ್ಷದ ಸಂಭ್ರಮ. ಕಳೆದ ವರ್ಷ ಇದೇ ದಿನ ಬಹುಕಾಲದ ಗೆಳತಿ ನತಾಶಾ ದಲಾಲ್ ಅವರ ಜತೆ ಹೊಸ ಜೀವನ ಆರಂಭಿದ್ದರು.
ವೈವಾಹಿಕ ಜೀವನ ಒಂದು ವರ್ಷ ಪೂರೈಸಿದ ಸಂಭ್ರಮದ ಹಿನ್ನೆಲೆ ನಟ ವರುಣ್ ಧವನ್ ವಿವಾಹ ವಾರ್ಷಿಕೋತ್ಸವದ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಮದುವೆಯ ಚಿತ್ರಗಳನ್ನು ಫೋಸ್ಟ್ ಮಾಡಿದ ವರುಣ್, ಶೀರ್ಷಿಕೆಯಲ್ಲಿ 'ಹೃದಯದ ಐಕಾನ್' ಎಂದು ಬರೆದಿದ್ದಾರೆ. ಮದುವೆ ಸಮಾರಂಭದಲ್ಲಿ ಪರಸ್ಪರ ಕೈ ಹಿಡಿದು, ಹಾರ ಬದಲಾಯಿಸಿಕೊಳ್ಳುತ್ತಿರುವ ಫೋಟೋಗಳನ್ನು ಅವರು ಶೇರ್ ಮಾಡಿದ್ದಾರೆ.
ಕರಿಷ್ಮಾ ಕಪೂರ್ ಈ ಪೋಸ್ಟ್‌ಗೆ 'ಕ್ಯೂಟೀಸ್'ಎಂದು ಪ್ರತಿಕ್ರಿಯಿಸಿದ್ದಾರೆ. ಟೈಗರ್ ಶ್ರಾಫ್ ದಂಪತಿಯನ್ನು ಅಭಿನಂದಿಸಿದ್ದಾರೆ. ಕೋವಿಡ್ ಹಿನ್ನೆಲೆ ಕಳೆದ ವರ್ಷ(2021ಜ.24) ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅಲಿಬಾಗ್‌ನಲ್ಲಿ ವರುಣ್ ಧವನ್ ಹಾಗೂ ನತಾಶಾ ದಲಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇದನ್ನೂ ಓದಿ: ಹೆಚ್ಚಿನ ಮಕ್ಕಳನ್ನು ಹೊಂದಲು ಬಯಸುತ್ತಾರಂತೆ ಪ್ರಿಯಾಂಕಾ - ನಿಕ್ ಜೋನಾಸ್ ದಂಪತಿ!