ಪ್ರೀತಿಗೆ ಕಣ್ಣಿಲ್ಲ ಅನ್ನೋದು ನಿಜ ಅನಿಸುತ್ತೆ. ಅದಕ್ಕೆ ಜಾತಿ, ಧರ್ಮ, ವಯಸ್ಸು ಇದ್ಯಾವುದೂ ಗೊತ್ತಾಗೋದೇ ಇಲ್ಲ. ಪ್ರೀತಿ ಬಲೆಗೆ ಬಿದ್ದೋರಲ್ಲಿ ಸಿನಿಮಾ ಸ್ಟಾರ್ಗಳೇನು ಕಡಿಮೆ ಇಲ್ಲ. ಕೆಲ ಸಿನಿಮಾ ಸ್ಟಾರ್ಗಳು ತಮಗಿಂತ ದೊಡ್ಡವರನ್ನು, ಬೇರೆ ಜಾತಿ, ಧರ್ಮದವರನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಅಂದಹಾಗೆ ಇಂದು ಪ್ರೇಮಿಗಳ ದಿನ.. ವಯಸ್ಸು, ಧರ್ಮ ಮೀರಿ ಪ್ರೀತಿಸಿ ಮದುವೆಯಾದ ಕೆಲ ಬಾಲಿವುಡ್ ಸ್ಟಾರ್ಸ್ ಕುರಿತಾದ ಸ್ಟೋರಿ ಇಲ್ಲಿದೆ...
ಮಾಡೆಲ್ ಮಿಲಂದ್-ಅಂಕಿತಾ:
ಮಾಡೆಲ್ ಮಿಲಂದ್ ಸೋನಮ್ ಎಲ್ಲರಿಗೂ ಗೊತ್ತು. ಮಿಲಂದ್ ವಿವಾಹವಾಗಿದ್ದು ತಮಗಿಂತ ವಯಸ್ಸಿನಲ್ಲಿ ತುಂಬಾ ಚಿಕ್ಕವರಾದ ಅಂಕಿತಾ ಕೊನ್ವಾರ್ರನ್ನ. ಹೀಗೆ ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಕೂಡ ಒಂದಾದ ಈ ಜೋಡಿ ಬಗ್ಗೆ ಭಾರಿ ಟೀಕೆ, ಟ್ರಾಲ್ಗಳು ಹರಿದಾಡಿದ್ದವು. ಅದ್ಯಾವದಕ್ಕೂ ಕ್ಯಾರೆ ಎನ್ನದ ಮಿಲಂದ್-ಅಂಕಿತಾ ಪ್ರೀತಿಗೆ ವಯಸ್ಸಿನ ಅರಿವಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಪ್ರಿಯಾಂಕ-ನಿಕ್:
ಬಾಲಿವುಡ್ನಲ್ಲಿ ಭಾರಿ ಸುದ್ದಿ ಮಾಡಿದ್ದು ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ವಿವಾಹ. ಯಾಕೆಂದ್ರೆ ಪ್ರಿಯಾಂಕಾ ನಿಕ್ಗಿಂತ 10 ವರ್ಷ ದೊಡ್ಡವರು. ಅಲ್ಲದೆ ನಿಕ್ ಅಮೆರಿಕನ್ ಹಾಡುಗಾರ. ಬಾಲಿವುಡ್ ಅಲ್ಲದೆ ಹಾಲಿವುಡ್ನಲ್ಲೂ ಹೆಸರು ಮಾಡಿರೋ ಪಿಗ್ಗಿ, ನಿಕ್ ಜೋನಸ್ರನ್ನು ಮದುವೆಯಾಗಿ ಬಾಲಿವುಡ್ ಹಾಗೂ ಸಿನಿಪ್ರಿಯರು ಹುಬ್ಬೇರಿಸುವಂತೆ ಮಾಡಿದ್ರು.
ಅರ್ಜುನ್-ಮಲೈಕಾ:
ಇನ್ನು ವಯಸ್ಸಿನ ಅಂತರದಿಂದ ಆಗಾಗ ಟ್ರೋಲ್ಗೆ ತುತ್ತಾದ ಮತ್ತೊಂದು ಜೋಡಿ ಅಂದ್ರೆ ಅದು ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ. ಇವರಿಬ್ಬರ ವಯಸ್ಸಿನ ಅಂತರ 9 ವರ್ಷ. ಬಾಲಿವುಡ್ನಲ್ಲಿ ಈ ಜೋಡಿ ಪ್ರೀತಿ-ಪ್ರೇಮ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಯಾಕಂದ್ರೆ ಮಲೈಕಾ ಅವರು ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ನ ಮಾಜಿ ಪತ್ನಿ. ಅವರಿಗೆ ಓರ್ವ ಮಗನೂ ಕೂಡ ಇದ್ದಾನೆ. ಅರ್ಬಾಜ್ಗೆ ವಿಚ್ಛೇದನ ನಿಡಿರೋ ಮಲೈಕಾ ಅರ್ಜುನ್ ಕಪೂರ್ ಜೊತೆ ಪ್ರೀತಿಯ ಪ್ರಯಣ ಮುಂದುವರೆಸಿದ್ದಾರೆ.
ಅಮೀರ್-ಕಿರಣ್:
ಬಾಲಿವುಡ್ ಮಿಸ್ಟರ್ ಫರ್ಫೆಕ್ಟನಿಸ್ಟ್ ಅಮೀರ್ಖಾನ್ ಹಾಗೂ ಕಿರಣ್ ರಾವ್ ಕೂಡ ಪ್ರೀತಿಸಿ ಮದುವೆಯಾದವರು. 2001ರಲ್ಲಿ 'ಲಗಾನ್' ಚಿತ್ರದ ಮೂಲಕ ಪರಿಚಿತರಾದ ಇವರು, ಮುಂದೆ 2004ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಸೈಫ್-ಕರೀನಾ:
ವಯಸ್ಸು ಹಾಗೂ ಧರ್ಮದ ಅಂತರ ಮೀರಿ ಒಂದಾದ ಇನ್ನೊಂದು ಬಾಲಿವುಡ್ ಜೋಡಿಯೆಂದ್ರೆ ಅದು, ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್. ಈ ಇಬ್ಬರು ಸ್ಟಾರ್ಗಳ ನಡುವೆ 10 ವರ್ಷಗಳ ವಯಸ್ಸಿನ ಅಂತರವಿದೆ. 4 ವರ್ಷಗಳ ಡೇಟಿಂಗ್ ಬಳಿಕ ಹಸೆಮಣೆಯೇರಿದ ಈ ಜೋಡಿಗೆ ತೈಮೂರ್ ಎಂಬ ಮುದ್ದಾದ ಮಗನಿದ್ದಾನೆ. ಅಂದಹಾಗೆ ಸೈಫ್ಗೆ ಇದು ಎರಡನೇ ವಿವಾಹ.
ಸುಸ್ಮಿತಾ-ರೋಹ್ಮನ್:
ಮಿಸ್ ಯೂನಿವರ್ಸ್-1994 ಸುಸ್ಮಿತಾ ಸೇನ್ ಕೂಡ ತಮಗಿಂತ ಚಿಕ್ಕವರೊಂದಿಗೆ ಬಾಳಿನ ಪಯಣ ಮುಂದುವರೆಸಿದ್ದಾರೆ. ಸಂಗಾತಿ ರೋಹ್ಮನ್ ಶಾವ್ಲ್ ಸುಸ್ಮಿತಾಗಿಂತ 15 ವರ್ಷ ಚಿಕ್ಕವರು. ಸಾಮಾಜಿಕ ಜಾಲತಾಣಗಳಲ್ಲಿ ಫಿಟ್ನೆಸ್ ವಿಡಿಯೋ ಹಾಟ್ ಫೋಟೋಗಳಿಂದ ಈ ಜೋಡಿ ಸದಾ ತಮ್ಮ ಅಭಿಮಾನಿಗಳ ಗಮನ ಸೆಳೆಯುತ್ತೆ.
ದಿಲೀಪ್ ಕುಮಾರ್-ಸೈರಾ ಬಾನು:
ಬಾಲಿವುಡ್ನ ಹಿರಿಯ ಜೋಡಿಗಳಲ್ಲೊಂದಾದ ದಿಲೀಪ್ ಕುಮಾರ್ ಹಾಗೂ ಸೈರಾ ಬಾನು ಅವರದ್ದೊಂದು ಶಾಶ್ವತ ಪ್ರೇಮಕಥೆ ಎನ್ನಬಹುದು. ಇವರಿಬ್ಬರ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 22 ವಸಂತಗಳು. ಸೈರಾ ಮೊದಲ ಬಾರಿಗೆ ದಿಲೀಪ್ ಜೊತೆ ಪ್ರೀತಿಗೆ ಬಿದ್ದಾಗ ಅವರಿಗೆ ಕೇವಲ 12 ವರ್ಷಗಳಂತೆ. ಬಳಿಕ 1966ರಲ್ಲಿ ದಿಲೀಪ್ ಹಾಗೂ ಸೈರಾ ಹಸೆಮಣೆಯೇರಿದ್ರು. ಆಗ ಸೈರಾಗೆ 34 ವರ್ಷ, ಪ್ರೀತಿಗೆ ಯಾವುದೇ ಗಡಿಯಿಲ್ಲ ಅನ್ನೋದನ್ನ ಈ ಸ್ಟಾರ್ ಜೋಡಿ ಸಾಬೀತುಪಡಿಸಿದೆ.
ಶಾಹಿದ್-ಮೀರಾ:
ಇನ್ನು 2015ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಕೂಡ ವಯಸ್ಸಿನ ಅಂತರದಿಂದ ಸುದ್ದಿಯಲ್ಲಿದ್ದರು. ಶಾಹಿದ್-ಮೀರಾ ನಡುವೆ 13 ವರ್ಷಗಳ ಅಂತರವಿದ್ದು, ಮೀರಾ ಶಾಹಿದ್ರ ಕುಟುಂಬಕ್ಕೆ ಹತ್ತಿರದವರೇ ಆಗಿದ್ದರಿಂದ ಹಲವು ಬಾರಿ ಭೇಟಿಯಾಗಿದ್ದರು. ವಯಸ್ಸಿನ ಅಂತರದ ನಡುವೆಯೂ ಪರಸ್ಪರ ಒಪ್ಪಿಗೆಯಿಂದ ಇಬ್ಬರೂ ವಿವಾಹವಾದರು.
ಫರಾ ಖಾನ್-ಶಿರೀಶ್:
ಇನ್ನು ನಿರ್ದೇಶಕಿ ಫರಾ ಖಾನ್ ಅವರು ಶಿರೀಶ್ ಕುಂದ್ರ ಅವರನ್ನು ಮದುವೆಯಾಗುತ್ತಿರುವ ವಿಚಾರ ತಿಳಿದು ಬಾಲಿವುಡ್ ಅಚ್ಚರಿಗೊಳಗಾಗಿತ್ತು. ಯಾಕಂದ್ರೆ ಫರಾ ಖಾನ್-ಶಿರೀಶ್ ಧರ್ಮವನ್ನೂ ಮೀರಿದ ಪ್ರೇಮ. 'ಮೈ ಹೂ ನಾ' ಚಿತ್ರದ ಮೂಲಕ ಶುರುವಾದ ಇವರ ಪ್ರೀತಿಯು, ಬಳಿಕ 2004ರಲ್ಲಿ ವೈವಾಹಿಕ ಜೀವನಕ್ಕೆ ಮುಂದಡಿಯಿಟ್ಟರು.
ಅರ್ಜುನ್-ಗ್ಯಾಬ್ರಿಯೆಲ್ಲಾ:
ಬಾಲಿವುಡ್ ನಟ ಅರ್ಜುನ್ ರಾಂಪಾಲ್ರದ್ದೂ ಕೂಡ ವಯಸ್ಸಿನ ಅಂತರವನ್ನು ಮೀರಿದ ಪ್ರೀತಿ. ಅರ್ಜುನ್ ಹಾಗೂ ಅವರ ಬಾಳಸಂಗಾತಿ ಗ್ಯಾಬ್ರಿಯೆಲಾ ಡೆಮೆಟ್ರಿಯೇಡ್ ನಡುವೆ 13 ವರ್ಷಗಳ ವಯಸ್ಸಿನ ಅಂತರವಿದೆ. ಐಪಿಎಲ್ ಬಳಿಕದ ಪಾರ್ಟಿಯೊಂದರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ ಇವರಿಬ್ಬರು ಮುಂದೆ ಜೀವನ ಸಂಗಾತಿಗಳಾಗಿದ್ದಾರೆ.