ಈ ವಾರದ ಆರಂಭದಲ್ಲಿ ಧನುಷ್ ಮತ್ತು ಐಶ್ವರ್ಯ ಅವರು 18 ವರ್ಷಗಳ ದಾಂಪತ್ಯದ ನಂತರ ಬೇರ್ಪಡುವುದಾಗಿ ಘೋಷಿಸಿದ್ದರು. ಅವರ ಹೇಳಿಕೆಯನ್ನು ಅನುಸರಿಸಿ, ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅವರು ಮದುವೆಯ ಬಗ್ಗೆ ಸರಣಿ ಟ್ವೀಟ್ ಮಾಡಿದ್ದರು. ಆರ್‌ಜಿವಿ ಹೇಳಿಕೆಗೆ ನಟಿ ಉರ್ಫಿ ಜಾವೇದ್ ಕೆಂಡಾಮಂಡಲಾಗಿದ್ದಾರೆ.
ಯುವಕರು ಮದುವೆ ಮಾಡಿಕೊಳ್ಳಬೇಕೇ ಅಥವಾ ಬೇಡವೇ ಎಂಬುದಕ್ಕೆ ಸ್ಟಾರ್ ದಂಪತಿಗಳ ವಿಚ್ಛೇದನ ಪ್ರಕರಣಗಳು ಮಾದರಿಯಾಗಿವೆ. ಮದುವೆಯಾಗಿ 'ಜೈಲು' ಸೇರುವ ಬದಲು, ಇಬ್ಬರು ಪರಸ್ಪರ ಪ್ರೀತಿಯಲ್ಲೇ ಜೀವನ ಸಾಗಿಸುವುದೇ ಸಂತೋಷದ ರಹಸ್ಯವಾಗಿದೆ. ಮದುವೆಯಾದ ದಂಪತಿ ಪ್ರೀತಿಯಲ್ಲಿ ಕಾಣುವ ಸುಖದ ದಿನಗಳು ಹೆಚ್ಚೆಂದರೆ 4 ರಿಂದ 5 ದಿನ. ಆದರೆ, ಪ್ರೀತಿ ಮಾಡುವವರು ದಿನವೂ ಸುಖಿಸುತ್ತಾರೆ.
ಅಲ್ಲದೇ, ಬುದ್ಧಿಹೀನರು ಮದುವೆಯಾದರೆ, ವಿವೇಕಿಗಳು ಬರೀ ಪ್ರೀತಿಸುತ್ತಾರೆ. ವಿವಾಹ ವಿಚ್ಛೇದನಗಳನ್ನು ಸಂಭ್ರಮದಿಂದ ಆಚರಿಸಬೇಕು. ಮದುವೆ ಎಂಬ ಅತೃಪ್ತಿ ಮತ್ತು ದುಃಖದ ಸಂಕೋಲೆಯನ್ನು ನಮ್ಮ ಪೂರ್ವಜರು ನಮ್ಮ ಮೇಲೆ ಬಿಟ್ಟು ಹೋಗಿದ್ದಾರೆ. ಮದುವೆ ಎಂಬುದು ಸಮಾಜದ ಮೇಲೆ ಹೇರಲಾದ ಅತ್ಯಂತ ಕೆಟ್ಟ ಪದ್ಧತಿಯಾಗಿದೆ ಎಂದು ಆರ್‌ಜಿವಿ ಸರಣಿ ಟ್ವೀಟ್ಗಳ ಮೂಲಕ ಟೀಕಿಸಿದ್ದರು.
ಓದಿ: ಸ್ಫೋಟಕ ವಸ್ತುಗಳು ಸಾಗಿಸುತ್ತಿದ್ದ ಲಾರಿಗೆ ಬೈಕ್ ಡಿಕ್ಕಿ.. ನೂರಾರು ಮನೆಗಳು ನಾಶ, 17 ಮಂದಿ ಸಾವು
ಧನುಷ್ ಮತ್ತು ಐಶ್ವರ್ಯಾ ಅವರ ಪ್ರತ್ಯೇಕತೆಯ ಬಗ್ಗೆ ಮತ್ತು ಆರ್‌ಜಿವಿ ಅವರ ಆಲೋಚನೆಗಳ ಬಗ್ಗೆ ಮಾಧ್ಯಮದವರು ಉರ್ಫಿಯನ್ನು ಪ್ರಶ್ನಿಸಿದಾಗ, ಮಹಿಳೆಯರು ಗಂಡಸರ ಗುಲಾಂರಲ್ಲ. ನಿಂದನೀಯ ಸಂಬಂಧದಲ್ಲಿರಲು ನಾವು ಸಿದ್ಧರಿಲ್ಲ. ಇಬ್ಬರು ಮಧ್ಯೆ ಹೊಂದಿಕೆಯಾಗದಿದ್ದರೆ ಅವರು ಒಟ್ಟಿಗೆ ಜೀವಿಸುವುದರ ಬದಲು ಬೇರ್ಪಡೆಯಾಗುವುದು ಒಳ್ಳೆಯದು.
ಇಲ್ಲದಿದ್ದಲ್ಲಿ ಸಮಾಜ ಏನ್ ತಿಳಿದುಕೊಳ್ಳುತ್ತೆ. ಅಷ್ಟಕ್ಕೂ ಧನುಷ್ ಮತ್ತು ಅವರ ಪತ್ನಿ (ಐಶ್ವರ್ಯ) ನಡುವೆ ಮಾತನಾಡಲು ರಾಮ್ ಗೋಪಾಲ್ ವರ್ಮಾ ಯಾರೀ ಎಂದು ಉರ್ಫಿ ಗರಂ ಆಗಿಯೇ ಪ್ರಶ್ನಿಸಿದರು.
- " class="align-text-top noRightClick twitterSection" data="
">
ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಪಿ ಜಾವೇದ್, ಆಗಾಗೊಮ್ಮೆ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಂಚಿಕೊಳ್ಳುವ ಪೋಸ್ಟ್ಗಳ ಮೂಲಕ ನಿರಂತವಾಗಿ ಸುದ್ದಿಯಲ್ಲಿ ಇರುತ್ತಾರೆ.ಈಗ ಶೇರ್ ಮಾಡಿಕೊಂಡಿರುವ ವಿಡಿಯೋವೊಂದರಲ್ಲಿ ಅವರು ಉಲ್ಟಾ ಬ್ಲೌಸ್ ಧರಿಸುವ ಮೂಲಕ ಸುದ್ದಿಯಾದ್ರೆ, ಇದನ್ನು ಟ್ರೋಲ್ ಸಹ ಮಾಡುತ್ತಿದ್ದಾರೆ.
ಓದಿ: T -20 World Cup: ಟಿ - 20 ವಿಶ್ವಕಪ್ನ ವೇಳಾಪಟ್ಟಿ ಬಹಿರಂಗ: ಟೀಂ ಇಂಡಿಯಾದ ಮೊದಲ ಪಂದ್ಯ
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ