ETV Bharat / sitara

ಸೆಕ್ಯುರಿಟಿ ಗಾರ್ಡ್ ಜೊತೆ ವಾಗ್ವಾದಕ್ಕಿಳಿದ ಉರ್ಫಿ ಜಾವೇದ್ : ಮತ್ತೊಮ್ಮೆ ಟ್ರೋಲ್​ ಆದ ನಟಿ - ಒಟಿಟಿ ಬಿಗ್​ಬಾಸ್ ಖ್ಯಾತಿಯ ಉರ್ಫಿ

ಚಿತ್ರ, ವಿಚಿತ್ರ ಉಡುಪುಗಳಿಂದಲೇ ಸಾಕಷ್ಟು ವಿವಾದ ಸೃಷ್ಟಿಸಿಕೊಂಡಿರುವ ಕಿರುತೆರೆ ನಟಿ ಉರ್ಫಿ ಜಾವೇದ್, ಇದೀಗ ಸೆಕ್ಯುರಿಟಿ ಗಾರ್ಡ್ ಜೊತೆ ಜಗಳವಾಡಿ ಟ್ರೋಲ್​ ಆಗಿದ್ದಾರೆ.

Urfi Javed gets in to an argument with security guard
ಸೆಕ್ಯುರಿಟಿ ಗಾರ್ಡ್ ಜೊತೆ ವಾಗ್ವಾದಕ್ಕಿಳಿದ ಉರ್ಫಿ ಜಾವೇದ್
author img

By

Published : Mar 29, 2022, 7:51 AM IST

ಮುಂಬೈ: ಟಿವಿ ಸೆಲೆಬ್ರೆಟಿ, ಒಟಿಟಿ ಬಿಗ್​ಬಾಸ್ ಖ್ಯಾತಿಯ ಜನಪ್ರಿಯ ಕಿರುತೆರೆ ನಟಿ ಉರ್ಫಿ ಜಾವೇದ್,​ ಆಗಾಗ ಬೋಲ್ಡ್​ ಮತ್ತು ಹಾಟ್​ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡುತ್ತಾರೆ. ವಿಭಿನ್ನ ಜೊತೆಗೆ ಕೊಂಚ ವಿಚಿತ್ರ ವೇಷಭೂಷಣಕ್ಕೆ ಹೆಸರಾಗಿರುವ ಉರ್ಫಿ, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಮುನ್ನೆಲೆಗೆ ಬಂದಿರುವುದು ಬಟ್ಟೆ ವಿಚಾರಕ್ಕೆ ಅಲ್ಲ, ಸೆಕ್ಯುರಿಟಿ ಗಾರ್ಡ್ ಜೊತೆ ಜಗಳ ಮಾಡಿದ್ದಾರೆ ಎಂಬ ಕಾರಣಕ್ಕೆ.

ಸೆಕ್ಯುರಿಟಿ ಗಾರ್ಡ್ ಜೊತೆ ವಾಗ್ವಾದಕ್ಕಿಳಿದ ಉರ್ಫಿ ಜಾವೇದ್

ಮುಂಬೈನಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮಕ್ಕೆ ಉರ್ಫಿಯನ್ನು ಅಥಿತಿಯಾಗಿ ಆಹ್ವಾನಿಸಲಾಗಿತ್ತು. ಸಮಾರಂಭಕ್ಕೆ ಉರ್ಫಿ ಹಾಟ್​ ಅವತಾರದಲ್ಲಿ ಆಗಮಿಸಿದ್ದರು. ಈ ವೇಳೆ, ಅಲ್ಲಿನ ಸೆಕ್ಯುರಿಟಿ ಗಾರ್ಡ್ ಉರ್ಫಿ ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಒಳಗೆ ತೆರಳದಂತೆ ತಡೆದಿದ್ದರು. ಇದರಿಂದ ಕೋಪಗೊಂಡ ಉರ್ಫಿ, ಆತನೊಂದಿಗೆ ಜಗಳವಾಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದೇ ಕಾರ್ಯಕ್ರಮ ಆಯೋಜನೆ ಮಾಡಿದವರ ಜೊತೆಗೆ ವಾಗ್ವಾದ ನಡೆಸಿ ಅಲ್ಲಿಂದ ತೆರಳಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದ್ದು, ತರಹೇವಾರಿ ಕಮೆಂಟ್​ಗಳು ಬರುತ್ತಿವೆ. ತಮ್ಮದೇ ವಿಭಿನ್ನ ಸ್ಟೈಲಿನಿಂದ ಸಾಕಷ್ಟು ಜನಪ್ರಿಯತೆ ಪಡೆದಿರುವ ಉರ್ಫಿ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಚಿತ್ರ ವಿಚಿತ್ರ ಬಟ್ಟೆ ತೊಟ್ಟು ಅಭಿಮಾನಿಗಳಿಗಾಗಿ ಪೋಟೋ ಶೇರ್​ ಮಾಡಿಕೊಳ್ಳುವ ಮತ್ತು ಕೆಲವೊಮ್ಮ ಅಭಿಮಾನಿಗಳೆದುರು ಬರುವ ಉರ್ಫಿ ಜಾವೇದ್ ತಮ್ಮ ಉಡುಪಿನ ವಿಚಾರವಾಗಿಯೇ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಒಳಗಾಗುತ್ತಾರೆ.

ಇದನ್ನೂ ಓದಿ: Oscars 2022; ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ತಾರೆಯರ ಪಟ್ಟಿ ಹೀಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.