ETV Bharat / sitara

'ಇದ್ಯಾವ್ ಚಾಲೆಂಜ್ ಅಕ್ಕಾ'?... ಅಮ್ಮನೆದುರೇ ಧಮ್ ಎಳೆದ ಪಿಗ್ಗಿ ಕಾಲೆಳೆದ ನೆಟ್ಟಿಗರು - ಸೋಷಿಯಲ್ ಮೀಡಿಯಾ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಿಗರೇಟ್ ಸೇದಿ ಟೀಕೆಗೆ ಗುರಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Jul 22, 2019, 12:03 PM IST

'ಹೇಳುವುದು ವೇದಾಂತ ಮಾಡುವುದು ಅನಾಚಾರ' ಎಂಬ ಹಿರಿಯರ ಮಾತಿಗೆ ಜೀವಂತ ಉದಾಹರಣೆಗೆ ಆಗಿದ್ದಾರೆ ಪಿಗ್ಗಿ. ಪತಿ ನಿಕ್ ಜೋನಾಸ್ ಹಾಗೂ ಅಮ್ಮ ಮಧು ಚೋಪ್ರಾ ಜತೆ ಕಡಲ ವಿಹಾರದ ವೇಳೆ ಪ್ರಿಯಾಂಕಾ ಧಮ್ ಎಳೆದಿದ್ದಾರೆ. ಪಕ್ಕದಲ್ಲಿ ಕುಳಿತ ನಿಕ್ ಹಾಗೂ ಎದುರಿಗಿದ್ದ ಅಮ್ಮನ ಬಾಯಲ್ಲಿ ದಪ್ಪನೇಯ ಸಿಗಾರ್ ಸುಡುತ್ತಿದ್ದರೆ, ಪ್ರಿಯಾಂಕಾ ಬೆರಳ ತುದಿಯಲ್ಲಿ ಸಿಗರೇಟ್​ ಹಿಡಿದು ಬಾಯಿಗೆ ಇಟ್ಟುಕೊಂಡಿದ್ದಾರೆ. ಅವರ ಈ ಪೋಟೊ ಸದ್ಯ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ವಿರೋಧಕ್ಕೆ ತುತ್ತಾಗಿದೆ.

ಪ್ರಿಯಾಂಕಾ ಸಿಗರೇಟ್ ಸೇದುತ್ತಿರುವುದು ದೊಡ್ಡ ಪ್ರಮಾದವಲ್ಲ ಎಂದು ನೆಟ್ಟಿಗರು ಸುಮ್ಮನಾಗಿ ಬಿಡುತ್ತಿದ್ದರೇನೋ? ಆದರೆ, ಕಳೆದ ವರ್ಷ ಈ ನಟಿಯಾಡಿದ್ದ ಕೆಲ ಬುದ್ಧಿ ಮಾತುಗಳು ತಾವೇ ಹೆಣೆದ ಬಲೆಯಲ್ಲಿ ಬಂಧಿಯಾಗುವಂತೆ ಮಾಡಿವೆ. ಈ ಹಿಂದೆ 'ಅಸ್ತಮಾ ತಡೆ' ಅಭಿಯಾನವೊಂದರಲ್ಲಿ ಮಾತಾಡಿದ್ದ ಪ್ರಿಯಾಂಕಾ ತಾನು ಅಸ್ತಮಾದಿಂದ ಬಳಲುತ್ತಿದ್ದೆ. ಆದರೆ, ನನ್ನ ಸಾಧನೆಗೆ ಇದು ಎಂದೂ ಅಡ್ಡಿಯಾಗಲಿಲ್ಲ ಎಂದಿದ್ದರು. ಜತೆಗೆ ದೀಪಾವಳಿ ಹಬ್ಬದಂದು ಪಟಾಕಿ ಸುಡಬೇಡಿ, ಇದರಿಂದ ವಾಯುಮಾಲಿನ್ಯ ವಾಗಲಿದ್ದು, ಅಸ್ತಮಾ ರೋಗಿಗಳಿಗೂ ತೊಂದರೆಯಾಗುತ್ತದೆ ಎಂದಿದ್ದರು. ಹೀಗೆ ಪರಿಸರ ಕಾಳಜಿ ವ್ಯಕ್ತಪಡಿಸಿದ್ದ ಪ್ರಿಯಾಂಕಾ ಮದುವೆಯಲ್ಲಿ ರಾಶಿರಾಶಿ ಪಟಾಕಿ ಸಿಡಿಸಲಾಗಿತ್ತು.ಈಗ ಮತ್ತೆ ಸಿಗರೇಟ್ ಸೇದಿದ್ದಾರೆ.

ಪಿಗ್ಗಿಯ ಇಬ್ಬಗೆಯ ನೀತಿ ಜನರನ್ನು ಕೆರಳಿಸಿದೆ. ಪ್ರಿಯಾಂಕಾ ಅವರು ದೀಪಾವಳಿಯಂದು ಪಟಾಕಿಗಳನ್ನು ಸಿಡಿಸಲು ಸಿಗರೇಟ್​ ಸೇದಿ ಗುಣಮುಖರಾಗುತ್ತಿದ್ದಾರೆ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಇನ್ನೂ ಕೆಲವರು ಅಕ್ಕಾ ಇದು ಯಾವ ಚಾಲೆಂಜ್ ಎಂದು ಕಾಲೆಳೆದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.