ಹೈದರಾಬಾದ್: ಬಾಲಿವುಡ್ ನಟಿ ಹಾಗೂ ಲೇಖಕಿ ಟ್ವಿಂಕಲ್ ಖನ್ನಾ ತಮ್ಮ ಇನ್ಸ್ಟಾಗ್ರಾಮಾದಲ್ಲಿ ಮಕ್ಕಳ ಬಗ್ಗೆ ಪೋಷಕರ ಆಲೋಚನೆಗಳು ಹೇಗೆ ಇರಬೇಕು ಎನ್ನುವುದರ ಬಗ್ಗೆ ಬರೆದುಕೊಂಡಿದ್ದಾರೆ.
ಟ್ವಿಂಕಲ್ ಖನ್ನಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಮಗಳು ನಿತಾರಾ ಅವರೊಂದಿಗೆ ಇರುವ ಪೋಟೋ ಜೊತೆಗೆ ಕೆಲವು ವಿಷಗಳ ಬಗ್ಗೆ ಬರೆದು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಟ್ವಿಂಕಲ್ ಖನ್ನಾ ಪೋಷಕರ ಬಗ್ಗೆ ಬರೆದಿದ್ದಾರೆ. ಪೋಷಕರು 'ತಮ್ಮ ಮಕ್ಕಳಿಗೆ ಪರಿಪೂರ್ಣ ಬಾಲ್ಯವನ್ನು ನೀಡುವುದಿಲ್ಲ, ಆದರೆ, ಅವರ ತಲೆಯಲ್ಲಿ ಒಳ್ಳೆಯ ಆಲೋಚನೆಗಳನ್ನು ತುಂಬಬೇಕು ' ಎಂದು ಸಲಹೆ ನೀಡಿದ್ದಾರೆ.
ಓದಿ: ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ ಸನ್ನಿ ಡಿಯೋಲ್ ಕಿರಿಯ ಪುತ್ರ!
ಟ್ವಿಂಕಲ್ ಖನ್ನಾ ಮತ್ತು ಅಕ್ಷಯ್ ಕುಮಾರ್ ಅವರು 2001 ರಲ್ಲಿ ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆರಾವ್ 2002 ರಲ್ಲಿ ಜನಿಸಿದರೆ, ನಿತಾರಾ 2012 ರಲ್ಲಿ ಹುಟ್ಟಿದ್ದಳು.