ಮುಂಬೈ : ಬಾಲಿವುಡ್ ಸ್ಟಾರ್ ನಟ ಟೈಗರ್ ಶ್ರಾಫ್ ಅವರು ದಿವಂಗತ ಪಾಪ್ ಸಿಂಗರ್ ಮೈಕೆಲ್ ಜಾಕ್ಸನ್‌ಗೆ ಅವರ ಥ್ರೋಬ್ಯಾಕ್ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಜಾಕ್ಸನ್ ಅವರ 11ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಟೈಗರ್ ತನ್ನ 'ಮುನ್ನಾ ಮೈಕೆಲ್ ನಂಬರ್', 'ಫೀಲ್ ದ ರಿದಮ್' ಮತ್ತು 'ಬೆಪರ್ವಾಹ್' ನೃತ್ಯದ ಕ್ಲಿಪ್ ಹಂಚಿಕೊಂಡಿದ್ದಾರೆ.
"ಜಾಕ್ಸನ್ ನಮಗೆ ಅನೇಕ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಹಾಗಾಗಿ ಧನ್ಯವಾದಗಳು #1959-2009 #ripking @michaeljackson," ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಇನ್ನು ಟೈಗರ್ ಶ್ರಾಫ್ ಜಾಕ್ಸನ್ ಅವರ ಬಹಳ ದೊಡ್ಡ ಅಭಿಮಾನಿಯಾಗಿದ್ದು, ಬಿಳಿ ಬಣ್ಣದ ಬಟ್ಟೆ ಧರಿಸಿ ಮೈಕಲ್ ಜಾಕ್ಸನ್ ಸ್ಟೈಲ್ನಲ್ಲಿ ನಿಂತಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಾಕುವ ಮೂಲಕ ಗೌರವ ಸಲ್ಲಿಸಿದ್ದಾರೆ.