ETV Bharat / sitara

ಆಯುಷ್ಮಾನ್ ಖುರಾನಾ ಜೊತೆ ಸ್ಕ್ರೀನ್ ಶೇರ್​ ಮಾಡಲು ವಾಣಿ ಕಪೂರ್ ರೆಡಿ - ಆಯುಷ್ಮಾನ್ ಖುರಾನಾ ಜೊತೆ ವಾಣಿ ಕಪೂರ್ ಸಿನಿಮಾ

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಎರಡು ಚಿತ್ರಗಳಿಗೆ ಸಹಿ ಮಾಡಿರುವ ನಟಿ ವಾಣಿ ಕಪೂರ್, ನಟ ಆಯುಷ್ಮಾನ್ ಖುರಾನಾ ಜೊತೆ ನಟಿಸಲು ಉತ್ಸುಕರಾಗಿದ್ದಾರೆ.

This quality of Ayushmann Khurrana amazes Vaani Kapoor
ಆಯುಷ್ಮಾನ್ ಖುರಾನಾ ಜೊತೆ ವಾಣಿ ಕಪೂರ್ ಸಿನಿಮಾ
author img

By

Published : Aug 13, 2020, 2:25 PM IST

ಮುಂಬೈ: ನಟ ಆಯುಷ್ಮಾನ್ ಖುರಾನಾ ಈ ಪೀಳಿಗೆಯ ಅತ್ಯಂತ ಶ್ರದ್ಧೆಯ ನಟರಲ್ಲಿ ಒಬ್ಬರು ಎಂದು ಹೇಳಿರುವ ನಟಿ ವಾಣಿ ಕಪೂರ್, ಆಯುಷ್ಮಾನ್ ಅವರೊಂದಿಗೆ ಮುಂಬರುವ ಚಿತ್ರದಲ್ಲಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

"ಆಯುಷ್ಮಾನ್ ನಮ್ಮ ಪೀಳಿಗೆಯ ಅತ್ಯಂತ ಶ್ರದ್ಧೆಯ ನಟರಲ್ಲಿ ಒಬ್ಬರು. ಅವರು ವಿಭಿನ್ನ ಪಾತ್ರಗಳಲ್ಲಿ ತಮ್ಮನ್ನು ತಾವು ರೂಪಿಸಿಕೊಳ್ಳುವ ರೀತಿ ನನ್ನನ್ನು ಬೆರಗುಗೊಳಿಸುತ್ತದೆ. ವಿಕ್ಕಿ ದಾನಿ ನನ್ನ ನೆಚ್ಚಿನ ಚಿತ್ರ. ಈ ಚಿತ್ರದಲ್ಲಿನ ಅವರ ಅಭಿನಯದಿಂದ ನಾನು ಆಶ್ಚರ್ಯಚಕಿತಳಾಗಿದ್ದೆ. ಅಂಧಾಧುನ್ ಮತ್ತು ಆರ್ಟಿಕಲ್ 15 ರಲ್ಲಿ ಅವರು ಅದ್ಭುತವಾಗಿ ನಟಿಸಿದ್ದಾರೆ. ಅವರೊಂದಿಗೆ ಕೆಲಸ ಮಾಡಲು ನಾನು ನಿಜಕ್ಕೂ ಎದುರು ನೋಡುತ್ತಿದ್ದೇನೆ ಎಂದು ವಾಣಿ ಹೇಳಿದ್ದಾರೆ.

ಅಭಿಷೇಕ್ ಕಪೂರ್ ಅವರ ಹೆಸರಿಡದ ಮುಂಬರುವ ಚಿತ್ರದಲ್ಲಿ ಆಯುಷ್ಮಾನ್ ಅವರ ಜೊತೆ ನಟಿಸಲು ವಾಣಿ ಸಿದ್ಧರಾಗಿದ್ದಾರೆ. ಅಕ್ಟೋಬರ್‌ನಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಈ ಚಿತ್ರವು ಪ್ರೇಮಕಥೆಯಾಗಿದ್ದು, ಆಯುಷ್ಮಾನ್ ಅವರು ಕ್ರೀಡಾಪಟುವಾಗಿ ನಟಿಸಲಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ವಾಣಿ ಎರಡು ಪ್ರಮುಖ ಚಿತ್ರಗಳಿಗೆ ಸಹಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದು ಅಕ್ಷಯ್ ಕುಮಾರ್ ನಟನೆಯ ಬೆಲ್ ಬಾಟಮ್ ಚಿತ್ರಕ್ಕೂ ವಾಣಿ ಕಪೂರ್ ಸಹಿ ಮಾಡಿದ್ದಾರೆ

"ಅಂತಹ ಅದ್ಭುತ ಪ್ರಾಜೆಕ್ಟ್​ಗಳ ಭಾಗವಾಗಲು ನಾನು ಸಖತ್ ಥ್ರಿಲ್ ಆಗಿದ್ದೇನೆ. ಎರಡೂ ತುಂಬಾ ವಿಭಿನ್ನವಾದ ಪಾತ್ರಗಳು. ನಮಗೆ ಸವಾಲು ನೀಡುವ ಮತ್ತು ನಮ್ಮ ಪ್ರತಿಭೆ ಮತ್ತು ಕುಶಲತೆ ಹೆಚ್ಚಿಸುವ ಪಾತ್ರಗಳಾಗಿವೆ" ಎಂದು ವಾಣಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.