ಎಲ್ಲೋ ಕಳೆದು ಹೋದ ಫೋಟೋಗಳು ಬಹುದಿನಗಳ ನಂತರ ಕಣ್ಣಿಗೆ ಬಿದ್ದಾಗ ಆಗುವ ಆನಂದಕ್ಕೆ ಪಾರವೇ ಇರೋದಿಲ್ಲ. ಅದರಲ್ಲೂ ಕೈಗೆ ಸಿಕ್ಕ ಬಾಲ್ಯದ ಬ್ಲ್ಯಾಕ್ ಅಂಡ್ ವೈಟ್ ಪಟಗಳು ನಮ್ಮ ಚೈಲ್ಡ್ವುಡ್ ಲೈಫ್ಗೆ ಮರಳಿ ಕರೆದೊಯ್ಯುತ್ತವೆ.
- " class="align-text-top noRightClick twitterSection" data="
">
ಹೀಗೆ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಚೈಲ್ಡ್ವುಡ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಸಂಭ್ರಮ ಪಡುತ್ತಾರೆ. ಎಲ್ಲೋ ಹುದುಗಿ ಹೋಗಿದ್ದ ನೆನಪುಗಳನ್ನು ಇಂತಹ ಫೋಟೋಗಳೊಂದಿಗೆ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಇದೀಗ ಬಾಲಿವುಡ್ ನಟ ತಮ್ಮ ಚಿಕ್ಕ ವಯಸ್ಸಿನ ಪಟ ಸೋಷಿಯಲ್ ಅಕೌಂಟ್ಗಳಲ್ಲಿ ಶೇರ್ ಮಾಡಿದ್ದಾರೆ. ಕೇವಲ ಒಂದೇ ದಿನದಲ್ಲಿ ಈ ಚಿತ್ರ 9 ಲಕ್ಷಕ್ಕೂ ಹೆಚ್ಚು ಮೆಚ್ಚುಗೆ ಹಾಗೂ ಕಾಮೆಂಟ್ಗಳನ್ನು ಪಡೆದುಕೊಂಡಿದೆ. ಚಿತ್ರದಲ್ಲಿರುವ ಪುಟ್ಟ ಬಾಲಕ ಇಂದು ಬಾಲಿವುಡ್ ಬಹುಬೇಡಿಕೆ ನಟ.
- " class="align-text-top noRightClick twitterSection" data="
">
ದೇಶ್ಯಾದ್ಯಂತ ಸದ್ದು ಮಾಡಿದ್ದ 'ಉರಿ' ಚಿತ್ರ ನೀವು ನೋಡಿರಬಹುದು. ಪಾಕ್ ನೆಲಕ್ಕೆ ನುಗ್ಗಿ ಉಗ್ರರ ದಮನ ಮಾಡಿ, ಸೈನಿಕರೆ 'How's The Josh'? ಎನ್ನುವ ಡೈಲಾಗ್ ಕೂಡ ನೀವು ಕೇಳಿರಬಹುದು. ಈ ಡೈಲಾಗ್ ಸಖತ್ ಫೇಮಸ್ ಆಗಿತ್ತು. ಈ ಉದ್ಘೋಷ ಹೊರಡಿಸಿದ್ದು ನಟ ವಿಕ್ಕಿ ಕೌಶಾಲ್ ಎನ್ನುವುದು ಎಲ್ಲರಿಗೂ ಗೊತ್ತು. ಸದ್ಯ ಈ ಚಿತ್ರದಲ್ಲಿರುವ ಬಾಲಕನೇ ವಿಕ್ಕಿ.
- " class="align-text-top noRightClick twitterSection" data="
">
ಶನಿವಾರ ವಿಕ್ಕಿ ತಮ್ಮ ಥ್ರೋಬ್ಯಾಕ್ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳಿಂದ ಮೆಚ್ಚುಗೆಯ ಸುರಿಮಳೆಯಾಗಿದೆ.