ETV Bharat / sitara

ನಟ ವಿಕ್ಕಿ ಕೌಶಲ್​ಗೆ ಆ ಹುಡುಗಿಯ ಅಭಿಪ್ರಾಯ ಅಂದ್ರೆ ಪ್ರಪಂಚವಂತೆ..! - ನಿರ್ಮಾಪಕ ಅಮೃತ್​ ಪಾಲ್​ ಸಿಂಗ್ ಬಿಂದ್ರಾ

ಗ್ಯಾಂಗ್ಸ್ ಆಫ್ ವಾಸೇಪುರದಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದಾಗಿನಿಂದಲೂ ಶಿಲ್ಪಾ ಶ್ರೀವಾಸ್ತವ್ ಪರಿಚಯ. ಅವರು ಕಠಿಣ ವಿಮರ್ಶಕರು ಆಗಿರುವುದರಿಂದ ತನ್ನ ಎಲ್ಲ ಸಿನೆಮಾಗಳನ್ನು ತೋರಿಸುತ್ತೇನೆ ಎಂದು ನಟ ವಿಕ್ಕಿ ಕೌಶಲ್​ ತಿಳಿಸಿದ್ದಾರೆ.

Vicky Kaushal
ನಟ ವಿಕ್ಕಿ ಕೌಶಲ್
author img

By

Published : Oct 19, 2021, 8:53 PM IST

ಹೈದರಾಬಾದ್: ಬಾಲಿವುಡ್ ನಟ ವಿಕ್ಕಿ ಕೌಶಲ್ ತಮ್ಮ ವೃತ್ತಿ ಜೀವನದಲ್ಲಿ ಒಂದು ದಶಕಕ್ಕಿಂತ ಕಡಿಮೆ ಅವಧಿಯಲ್ಲಿಯೇ ಪ್ರಸಿದ್ಧರಾಗಿದ್ದಾರೆ. ಇವರು ನಟರು, ಅಭಿಮಾನಿಗಳು ಮತ್ತು ವಿಮರ್ಶಕರ ಪ್ರೀತಿಯನ್ನು ಗಳಿಸಿದ್ದಾರೆ. ಆದರೆ, ರಾಷ್ಟ್ರ ಪ್ರಶಸ್ತಿ ವಿಜೇತ ನಟನಿಗೆ ಯಾರೋ ಒಬ್ಬರು ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಅಭಿಪ್ರಾಯಗಳನ್ನ ನೀಡುತ್ತಾರಂತೆ. ಅವರ ಮಾತು ನಟನಿಗೆ ಪ್ರಪಂಚವಂತೆ. ಆದರೆ, ಇದು ಅವನ ವದಂತಿಯ ಗೆಳತಿ ಕತ್ರಿನಾ ಕೈಫ್ ಅಲ್ಲ ಎಂಬುದು ಆಶ್ಚರ್ಯ.

ಶೂಜಿತ್ ಸಿರ್ಕಾರ್ ನಿರ್ದೇಶನದ ಸರ್ದಾರ್ ಉಧಮ್‌ ಸಿನೆಮಾಕ್ಕೆ ಸಂಬಂಧಿಸಿದಂತೆ ನಟ ವಿಕ್ಕಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದ್ದಾರೆ. ಚಲನಚಿತ್ರವನ್ನು ಪ್ರಚಾರ ಮಾಡುವಾಗ ನಟನಿಗೆ ತನ್ನ ಸುತ್ತಲೂ ಕನ್ನಡಿಯನ್ನು ತೋರಿಸಬಲ್ಲ ಜನರಿದ್ದಾರೆಯೇ? ಎಂದು ಕೇಳಲಾಗಿತ್ತು. ಅದಕ್ಕೆ ವಿಕ್ಕಿ ತಾನು ಶಿಲ್ಪಾ ಶ್ರೀವಾಸ್ತವ್ ಎಂಬ ಸ್ನೇಹಿತೆಯನ್ನು ಹೊಂದಿದ್ದೇನೆ ಎಂದು ಉತ್ತರಿಸಿದ್ದಾರೆ.

ಗ್ಯಾಂಗ್ಸ್ ಆಫ್ ವಾಸೇಪುರದಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದಾಗಿನಿಂದಲೂ ಶಿಲ್ಪಾ ಶ್ರೀವಾಸ್ತವ್ ಪರಿಚಯ. ಅವರು ಕಠಿಣ ವಿಮರ್ಶಕರು ಆಗಿರುವುದರಿಂದ ತನ್ನ ಎಲ್ಲ ಸಿನೆಮಾಗಳನ್ನು ತೋರಿಸುತ್ತೇನೆ ಎಂದು ನಟ ತಿಳಿಸಿದ್ದಾರೆ.

ಅಂತಹ ಒಬ್ಬ ಸ್ನೇಹಿತನನ್ನು ಹೊಂದುವುದು ಬಹಳ ಮುಖ್ಯ. ಅವರು 'ಲವ್ ಪರ್ ಸ್ಕ್ವೇರ್ ಫೂಟ್' ನಿರ್ದೇಶಕ ಆನಂದ್ ತಿವಾರಿ, ನಿರ್ಮಾಪಕ ಅಮೃತ್​ ಪಾಲ್​ ಸಿಂಗ್ ಬಿಂದ್ರಾ ಮತ್ತು ಸಹನಟ ಅಂಗಿರಾ ಧರ್ ಅವರಿಗೆ ತುಂಬಾ ಹತ್ತಿರವಾಗಿದ್ದಾರೆ ಎಂದು ಹೇಳಿದ್ದಾರೆ.

ಲವ್ ಪರ್ ಸ್ಕ್ವೇರ್ ಫೂಟ್ ತಂಡವು ತನಗೆ ಕುಟುಂಬದಂತೆ. ನಟ ಮಸಾನ್ ನಿರ್ದೇಶಕ ನೀರಜ್ ಘಾಯ್ವಾನ್ ಅವರ ಹೆಸರನ್ನು ಅವರ ಪ್ರಾಮಾಣಿಕ ವಿಮರ್ಶಕರಾಗಿ ಉಲ್ಲೇಖಿಸಿದ್ದಾರೆ. ಅವರು ವಿಕ್ಕಿಯ ಕೆಲಸವನ್ನು ಪರಿಶೀಲಿಸುವಾಗ ಎಂದಿಗೂ ಮಾತುಗಳನ್ನು ಆಡುವುದಿಲ್ಲವಂತೆ.

ಓದಿ: ನ್ಯಾಯಾಧೀಶರಿಗೆ ನಿಂದಿಸಿದ ಆರೋಪ: ವಕೀಲನ ವಿರುದ್ಧ ನ್ಯಾಯಾಂಗ ನಿಂದನೆ ಕೈಬಿಟ್ಟ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.