ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಕುರಿತಾಗಿ ತಯಾರಾಗಿರುವ 'ದಿ ತಾಷ್ಕೆಂಟ್ ಫೈಲ್ಸ್' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದೊಡನೆ ಸಿನಿಮಾದ ಸಂಪೂರ್ಣ ಚಿತ್ರಣ ಕಣ್ಣ ಮುಂದೆ ಬರಲಿದೆ.
- " class="align-text-top noRightClick twitterSection" data="">
ಮಿಥುನ್ ಚಕ್ರವರ್ತಿ ಹಾಗೂ ನಾಸಿರುದ್ದೀನ್ ಷಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಚಿತ್ರಕಥೆಯನ್ನು ವಿವೇಕ್ ರಂಜನ್ ಅಗ್ನಿಹೋತ್ರಿ ಬರೆದು ನಿರ್ದೇಶನವನ್ನು ಕೂಡಾ ಮಾಡಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನ ಮಂತ್ರಿಯಾಗಿದ್ದಾಗ 1966ರಲ್ಲಿ ಉಜ್ಬೇಕಿಸ್ತಾನದ ತಾಷ್ಕೆಂಟ್ನಲ್ಲಿ ಭಾರತ-ಪಾಕಿಸ್ತಾನ ನಡುವೆ ಶಾಂತಿ ಮಾತುಕತೆ ಒಪ್ಪಂದ ನಡೆದಿತ್ತು. ಇದರ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಹೃದಯಾಘಾತದಿಂದ ಉಜ್ಬೇಕ್ ನಗರದಲ್ಲಿ ನಿಧನರಾದರು. ಆದರೆ ಇದು ಸಹಜ ಸಾವಲ್ಲ ಎಂಬುದು ಎಲ್ಲರ ಮಾತಾಗಿತ್ತು. 'ದಿ ತಾಷ್ಕೆಂಟ್ ಫೈಲ್ಸ್'ಸಿನಿಮಾದಲ್ಲಿ ಈ ಅಂಶಗಳನ್ನು ತೋರಿಸಲಾಗಿದೆ.
ಇನ್ನುಬಹಳ ದಿನಗಳ ನಂತರ ಮಿಥುನ್ ಹಾಗೂ ನಾಸಿರುದ್ದೀನ್ ಮತ್ತೆ ತೆರೆ ಮೇಲೆ ಒಂದಾಗುತ್ತಿದ್ದಾರೆ. ಕಳೆದ ವರ್ಷ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯಂದು ವಿವೇಕ್ ರಂಜನ್ ಈ ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದ್ದರು. ಶ್ವೇತಾ ಬಸು ಪ್ರಸಾದ್, ಪಲ್ಲವಿ ಜೋಶಿ, ಪಂಕಜ್ ತ್ರಿಪಾಠಿ, ಮಂದಿರಾ ಬೇಡಿ, ರಾಜೇಶ್ ಶರ್ಮಾ, ಪ್ರಕಾಶ್ ಬೆಳವಾಡಿ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಣಯ್ ಚೋಕ್ಷಿ, ಹರೇಶ್ ಪಾಟೀಲ್, ಪಲ್ಲವಿ ಜೋಷಿ, ವಿವೇಕ್ ರಂಜನ್ ಅಗ್ನಿಹೋತ್ರಿ ಸೇರಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾ ಏಪ್ರಿಲ್ 12 ರಂದು ಬಿಡುಗಡೆಯಾಗುತ್ತಿದೆ.