ETV Bharat / sitara

ಹಿಂದಿ ಬಿಗ್ ಬಾಸ್ 15: ಟಾಸ್ಕ್​ನಿಂದ ಹಿಂದೆ ಸರಿದ ತೇಜಸ್ವಿ ಪ್ರಕಾಶ್ ? - ಹಿಂದಿ ಬಿಗ್ ಬಾಸ್

ಟಾಸ್ಕ್​​​ವೊಂದರ ವಿಚಾರವಾಗಿ 'ಹಿಂದಿ ಬಿಗ್ ಬಾಸ್ 15'ರಲ್ಲಿ ಸ್ಪರ್ಧಿಗಳಾದ ತೇಜಸ್ವಿ ಪ್ರಕಾಶ್ ಮತ್ತು ಅಭಿಜಿತ್ ಬಿಚ್ಚುಕಳೆ ನಡುವೆ ವೈಮನಸ್ಸುಂಟಾಗಿದೆ.

Tejasswi Prakash
ತೇಜಸ್ವಿ ಪ್ರಕಾಶ್
author img

By

Published : Jan 20, 2022, 12:14 PM IST

'ಹಿಂದಿ ಬಿಗ್ ಬಾಸ್ 15'ರಲ್ಲಿ ಫ್ರೆಂಡ್​ಶಿಪ್​, ಲವ್​ ರಿಲೇಷನ್​ಶಿಪ್​ ಜೊತೆಗೆ ಜಗಳಗಳು ಸಾಮಾನ್ಯ. ಟಾಸ್ಕ್ ವಿಚಾರವಾಗಿ ಪ್ರತಿದಿನವೂ ಸ್ಪರ್ಧಿಗಳ ನಡುವೆ ಕಾದಾಟ ಇದ್ದೇ ಇರುತ್ತದೆ. ಅದರಂತೆ ಟಾಸ್ಕ್​​​ವೊಂದರ ವಿಚಾರವಾಗಿ ಸ್ಪರ್ಧಿಗಳಾದ ತೇಜಸ್ವಿ ಪ್ರಕಾಶ್ ಮತ್ತು ಅಭಿಜಿತ್ ಬಿಚ್ಚುಕಳೆ ನಡುವೆ ವೈಮನಸ್ಸುಂಟಾಗಿದೆ.

ಗರಿಷ್ಠ ಪ್ರಮಾಣದ ಸ್ಪಾಂಜ್ ಚೆಂಡುಗಳನ್ನು ಸಂಗ್ರಹಿಸುವುದು ಮತ್ತು ಅವರ ಎದುರಾಳಿಗಳಿಂದ ರಕ್ಷಿಸಿಕೊಳ್ಳುವ ಟಾಸ್ಕ್​ ಸ್ಪರ್ಧಿಗಳಲ್ಲಿ ತೀವ್ರತರನಾದ ಸ್ಪರ್ಧೆ ಸೃಷ್ಟಿಸಿತ್ತು. ಎಲಿಮಿನೇಟ್​ ಆಗದೇ ಮನೆಯಲ್ಲಿ ಉಳಿದುಕೊಳ್ಳಲು ಟಾಸ್ಕ್​​ ನೆರವಾಗಿತ್ತು. ಸ್ಪರ್ಧಿಗಳು ಕಾರ್ಯತಂತ್ರವನ್ನು ರೂಪಿಸಲು ಮತ್ತು ಮೈತ್ರಿ ಮಾಡಿಕೊಳ್ಳಲು ಶುರು ಹಚ್ಚಿಕೊಂಡಿದ್ದರು. ಈ ವೇಳೆ ಅಭಿಜಿತ್ ಬಿಚ್ಚುಕಳೆ ಪ್ರತಿಸ್ಪರ್ಧಿ ತೇಜಸ್ವಿಯ ಸ್ಪಾಂಜ್ ಬ್ಯಾಗ್/ಬುಟ್ಟಿ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಇದು ಅವರ ನಡುವೆ ಅಸಹ್ಯಕರ ಜಗಳಕ್ಕೆ ಕಾರಣವಾಯಿತು.

ಅಭಿಜಿತ್ ತೇಜಸ್ವಿಯ ಬುಟ್ಟಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ತೇಜಸ್ವಿ ಕೆಳಗೆ ಬೀಳುತ್ತಾಳೆ. ಕೋಪಗೊಂಡ ತೇಜಸ್ವಿ ಅಭಿಜಿತ್​ ಮೇಲೆ ಚೆಂಡನ್ನು ಎಸೆಯುತ್ತಾಳೆ. ನಂತರ ತೇಜಸ್ವಿ ಕೋಣೆಯೊಂದರೊಳಗೆ ಹೋಗಿ ಅಳಲು ಶುರು ಮಾಡಿಕೊಳ್ಳುತ್ತಾರೆ. ಸ್ಪರ್ಧಿ ಕರಣ್ ಅವರನ್ನು ಸಾಂತ್ವನ ಮಾಡುವ ಯತ್ನ ಮಾಡ್ತಾರೆ, ಆದರೆ ಇದನ್ನು ತೇಜಸ್ವಿ ನಿರಾಕರಿಸ್ತಾರೆ. ಅಷ್ಟೇ ಅಲ್ಲ ನಂತರ ಅವರು ಟಾಸ್ಕ್‌ನಿಂದ ಹಿಂದೆ ಕೂಡಾ ಸರಿದರು.

ಇದನ್ನೂ ಓದಿ: King is Back: ಮಗನಿಗೆ ಜಾಮೀನು ಸಿಕ್ಕ ಬಳಿಕ ಶಾರುಖ್ ಹರಿಬಿಟ್ಟ ಮೊದಲ ಪೋಸ್ಟ್!

ಈ ಘಟನೆ ಬಳಿಕ ಸ್ಪರ್ಧಿ ರಾಖಿ ತೇಜಸ್ವಿಯನ್ನು ಅಪಹಾಸ್ಯ ಮಾಡಿದ ಘಟನೆ ನಡೆಯಿತು. ಈ ಪ್ರಹಸನದ ನಂತರ ಅಭಿಜಿತ್ ಬಿಚ್ಚುಕಳೆ ತಮ್ಮ ಆಟ ಮುಂದುವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.