ETV Bharat / sitara

'ಕಬೀರ್​ ಸಿಂಗ್' ಕಣ್ತುಂಬಿಕೊಳ್ಳಲು ಅಪ್ರಾಪ್ತರು ಹೀಗೆ ಮಾಡ್ತಿದಾರಂತೆ! - ಕಬೀರ್​ ಸಿಂಗ್

ಶಾಹೀದ್ ಕಪೂರ್ ಹಾಗೂ ಕೈರಾ ಅಡ್ವಾಣಿ ನಟಿಸಿರುವ ಕಬೀರ್ ಸಿಂಗ್ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹದಿಹರೆಯದ ಹುಡುಗರನ್ನು ಎಲ್ಲಿಲ್ಲದಂತೆ ಸೆಳೆಯುತ್ತಿದೆ.

ಕಬೀರ್ ಸಿಂಗ್
author img

By

Published : Jul 3, 2019, 9:45 PM IST

ಹಿಂದಿಯ 'ಕಬೀರ್​ ಸಿಂಗ್' ಸಿನಿಮಾ ಬ್ಲಾಕ್​ ಬಸ್ಟರ್​ನತ್ತ ಸಾಗುತ್ತಿದೆ. ದಿನದಿಂದ ದಿನಕ್ಕೆ ಥಿಯೇಟರ್​​ಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಹೆಚ್ಚಾಗಿ
ಹದಿಹರೆಯದ ಪಡ್ಡೆ ಹೈಕಳನ್ನು ಚಿತ್ರಮಂದಿರಗಳತ್ತ ಹೆಚ್ಚು ಸೆಳೆಯುತ್ತಿದೆ. ಅದು ಎಷ್ಟರ ಮಟ್ಟಿಗೆಯಂದ್ರೆ ಈ ಚಿತ್ರ ನೋಡಲೇಬೇಕೆಂಬ ಹಟಕ್ಕೆ ಬಿದ್ದಿರುವ ಅಪ್ರಾಪ್ತ ವಯಸ್ಕರು ತಮ್ಮ ಆಧಾರ್ ಕಾರ್ಡ್​​ಗಳನ್ನೇ ತಿದ್ದುಪಡಿ ಮಾಡಿಕೊಳ್ಳುತ್ತಿದ್ದಾರಂತೆ.

ಹೌದು, ಲವ್​​ ಕಮ್ ಆ್ಯಕ್ಷನ್​ ಕಥಾಹಂದರದ 'ಕಬೀರ್​ ಸಿಂಗ್' ಸಿನಿಮಾದಲ್ಲಿ ಮಸ್ತ್ ಎನ್ನಿಸುವ ಕಿಸ್​ ಸೀನ್​​ಗಳಿವೆ. ಅದರಲ್ಲೂ ಹುಡುಗಿಯಿಂದ ದೂರವಾಗುವ ನಾಯಕ ನಟ ವಿಪರೀತ ಅನ್ನೋವಷ್ಟು ಕುಡಿತಕ್ಕೆ ದಾಸನಾಗುತ್ತಾನೆ. ಡ್ರಗ್​​ಗೆ ಅಡಿಕ್ಟ್ ಆಗ್ತಾನೆ. ಇದನ್ನೆಲ್ಲ ಗಮನಿಸಿರುವ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ 'A' ಸರ್ಟಿಫಿಕೇಟ್ ಕರುಣಿಸಿದೆ. ಪರಿಣಾಮ ಮಾಲ್​​ಗಳಲ್ಲಿ ಅಪ್ರಾಪ್ತ ವಯಸ್ಕರರಿಗೆ ಸಿನಿಮಾ ನೋಡುವುದಕ್ಕೆ ಕೊಂಚ ಕಷ್ಟವಾಗುತ್ತಿದೆಯಂತೆ. ಇದಕ್ಕೆ ತಮ್ಮದೇ ಪರಿಹಾರ ಕಂಡುಕೊಂಡಿರುವ ನಾರ್ಥ್ ಇಂಡಿಯಾ ಹುಡುಗರು, ಆಧಾರ್ ಕಾರ್ಡ್​​ನಲ್ಲಿ ತಮ್ಮ ಡೇಟ್​ ಆಫ್​ ಬರ್ತ್​​ ಬದಲಾಯಿಸಿಕೊಳ್ಳುತ್ತಿದ್ದಾರಂತೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ರಿಯಾಕ್ಷನ್ ನೀಡಿರುವ ಹುಡುಗನೋರ್ವ, ಮೊಬೈಲ್ ಆ್ಯಪ್ ಬಳಸಿ ನಾನು ಹಾಗೂ ನನ್ನ ಸ್ನೇಹಿತ ಆಧಾರ್ ಕಾರ್ಡ್​ ಎಡಿಟ್​ ಮಾಡಿದ್ದೇವೆ. ಆದ್ದರಿಂದ ನಮ್ಮನ್ನು ಯಾರೂ ತಡಿಯಲಿಲ್ಲ ಎಂದು ಹೇಳಿಕೊಂಡಿದ್ದಾನಂತೆ.

ಮೂವಿ ಟಿಕೆಟ್ ಬುಕ್​ ಅಪ್ಲಿಕೇಶನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ವಯಸ್ಸು ಅಥವಾ ಐಡಿ ಪ್ರೂಫ್ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. 'ಸಿನೆಮಾ ಹಾಲ್‌ನಲ್ಲಿ ಗಾರ್ಡ್​​​ಗಳು ನಮ್ಮನ್ನು ತಡೆದಾಗ, ನಮ್ಮ ಸ್ಮಾರ್ಟ್‌ ಫೋನ್‌ಗಳಲ್ಲಿ ಎಡಿಟ್ ಮಾಡಿದ ಆಧಾರ್ ಕಾರ್ಡ್‌ಗಳನ್ನು ತೋರಿಸಿದ್ದೇವೆ' ಎಂದಿದ್ದಾನೆ ಮತ್ತೊಬ್ಬ ಹುಡುಗ.

ಇನ್ನು ಚಿತ್ರಮಂದಿರಗಳಿಗೆ ಬರುತ್ತಿರುವ ಅಪ್ರಾಪ್ತ ವಯಸ್ಕರನ್ನು ಪತ್ತೆ ಹಚ್ಚುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಐನಾಕ್ಸ್​ ಸಂಸ್ಥೆ ಕೂಡ ಹೇಳಿಕೊಂಡಿದೆ. ಅದೇ ರೀತಿ ಆನ್​​ಲೈನ್​ಲ್ಲಿ ಟಿಕೆಟ್ ಬುಕ್ಕಿಂಗ್​​ ವೇಳೆ ಐಡಿ ಪ್ರೂಫ್‌ಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ ಎಂದು ಬುಕ್‌ ಮೈ ಶೋ ಕೂಡ ಒಪ್ಪಿಕೊಂಡಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.