ETV Bharat / sitara

ತಾಪ್ಸಿ ಪನ್ನು ನಿರ್ಮಾಣದ ಚೊಚ್ಚಲ ಸಿನಿಮಾ ಶೂಟಿಂಗ್​ ಮುಕ್ತಾಯ: 'ಬ್ಲರ್​​' ಬಿಡುಗಡೆ ಯಾವಾಗ? - ತಾಪ್ಸಿ ಪನ್ನು ನಿರ್ಮಾಣ ಸಂಸ್ಥೆ

ನಟಿ ತಾಪ್ಸಿ ಪನ್ನು ಮತ್ತು ಅವರ ಟೀಮ್​ 'ಬ್ಲರ್‌'ಸಿನಿಮಾ ಚಿತ್ರೀಕರಣವನ್ನು ಮುಗಿಸಿದೆ. ಅಂದಹಾಗೆ ಈ ಚಿತ್ರಕ್ಕೆ ತಾಪ್ಸಿ ಅವರ ಹೊಸ ನಿರ್ಮಾಣ ಸಂಸ್ಥೆ ಔಟ್‌ಸೈಡರ್ ಫಿಲ್ಮ್ಸ್‌ ಬಂಡವಾಳ ಹಾಕಿದೆ.

Blurr
ಬ್ಲರ್ ಸಿನಿಮಾ ಶೂಟಿಂಗ್​ ಮುಕ್ತಾಯ
author img

By

Published : Aug 31, 2021, 3:30 PM IST

ಮುಂಬೈ: ಬಹುಭಾಷಾ ತಾರೆ ತಾಪ್ಸಿ ಪನ್ನು ಅಭಿನಯದ ಸೈಕಲಾಜಿಕಲ್ ಥ್ರಿಲ್ಲರ್ 'ಬ್ಲರ್‌'ಸಿನಿಮಾ ಪ್ರೊಡಕ್ಷನ್​ ಕೆಲಸ ಮುಗಿಸಿದೆ ಎಂದು ತಯಾರಕರು ಮಂಗಳವಾರ ಘೋಷಿಸಿದ್ದಾರೆ. ಈ ಚಿತ್ರಕ್ಕೆ ಬಿಎ ಪಾಸ್​, ಸೆಕ್ಷನ್​ 375 ಸಿನಿಮಾ ನಿರ್ದೇಶಿಸಿ ಖ್ಯಾತಿ ಪಡೆದಿದ್ದ ನಿರ್ದೇಶಕ ಅಜಯ್​ ಬಹಲ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

'ಬ್ಲರ್‌' ಸಿನಿಮಾ ಶೂಟಿಂಗ್ ನೈನಿತಾಲ್​ನಲ್ಲಿ ನಡೆದಿದೆ. ನೈನಿತಾಲ್​ ಚಿತ್ರಕ್ಕೆ ಅತ್ಯವಶ್ಯಕವಾಗಿ ಬೇಕಿದ್ದ ಸೌಂದರ್ಯ ಮತ್ತು ಮಿಸ್ಟರಿಯನ್ನು ಒದಗಿಸಿತು ಎಂದು ಅಜಯ್​ ಹೇಳಿದ್ದಾರೆ. ನೈನಿತಾಲ್​ ಸರೋವರ, ಮಾಲ್ ರಸ್ತೆ ಮತ್ತು ಇತರ ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ ಹೆಚ್ಚಾಗುವುದರಿಂದ ಶೂಟಿಂಗ್​ಗೆ ಕಷ್ಟವಾಗಲಿದೆ ಎಂಬ ಕಾರಣಕ್ಕೆ ನಾವು ಮಧ್ಯರಾತ್ರಿ ಚಿತ್ರೀಕರಣ ಆರಂಭಿಸಿ ಬೆಳಗ್ಗೆವರೆಗೂ ಶೂಟಿಂಗ್​ ಮಾಡುತ್ತಿದ್ದೆವು ಎಂದು ಅಜಯ್​ ಹೇಳಿಕೊಂಡಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುತ್ತಾ, ತಾಪ್ಸಿ, "ಅಂತಿಮವಾಗಿ ಈ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಹೊರಹೊಮ್ಮಲು ನನಗೆ ಸಂತೋಷವಾಗಿದೆ ಮತ್ತು ಸಹ-ನಿರ್ಮಾಪಕರು ಮತ್ತು ಚಿತ್ರತಂಡದ ಸಹಕಾರದೊಂದಿಗೆ, ಇದು ನನ್ನ ಉತ್ತಮ ಪ್ರಯಾಣ ಎಂಬುದು ನನಗೆ ಖಾತ್ರಿಯಿದೆ" ಎಂದು ಹೇಳಿದ್ದರು.

ಈ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಕಥೆಯನ್ನು ಪವನ್ ಸೋನಿ ಮತ್ತು ಬಹ್ಲ್ ಹೆಣೆದಿದ್ದು, ಈ ಬ್ಲರ್​ ಸಿನಿಮಾ"ಅನಿವಾರ್ಯ ಸಂದರ್ಭಗಳಲ್ಲಿ ಸಿಲುಕಿದ" ಹುಡುಗಿಯ ಕಥೆಯನ್ನು ವಿವರಿಸುತ್ತದೆ. ಈ ಚಿತ್ರದಲ್ಲಿ ತಾಪ್ಸಿ ಪನ್ನು ಗಂಡನ ಪಾತ್ರದಲ್ಲಿ ಗುಲ್ಶನ್ ದೇವಯ್ಯ ನಟಿಸಿದ್ದಾರೆ. ಬ್ಲರ್ ಸಿನಿಮಾವನ್ನು 2022 ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ:"ನನಗೆ ಭಯವಾಗಿತ್ತು, ವಿಮಾನದಲ್ಲಿ ಅತ್ತಿದ್ದೆ".. ಕೊರೊನಾ ಬಗ್ಗೆ ಗ್ಲೋಬಲ್​ ಐಕಾನ್ ಪ್ರಿಯಾಂಕಾ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.