ಮುಂಬೈ: ಉತ್ತರ ಭಾರತದ ಸಣ್ಣ ಪಟ್ಟಣವೊಂದರ ಕಥಾಹಂದರವಿಟ್ಟುಕೊಂಡು ನಿರ್ಮಾಣವಾಗುತ್ತಿರುವ 'ಹಸೀನ್ ದಿಲ್‌ರುಬಾ' ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಇಂದು ಬಿಡುಗಡೆಯಾಗಿದೆ. ವಿನಿಲ್ ಮ್ಯಾಥ್ಯೂ ನಿರ್ದೇಶನದ ಈ ಚಿತ್ರವನ್ನು ಆನಂದ್ ಎಲ್. ರಾಯ್ ಅವರ ಕಲರ್ ಯೆಲ್ಲೋ ಪ್ರೊಡಕ್ಷನ್ಸ್ ಇರೋಸ್ ಇಂಟರ್ನ್ಯಾಷನಲ್ ಮತ್ತು ಹಿಮಾಂಶು ಶರ್ಮಾ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಕೊರೊನಾ ಸಮಯದಲ್ಲಿ ಹಸೀನ್ ದಿಲ್‌ರುಬಾ ಚಿತ್ರೀಕರಿಸಲಾಗಿದ್ದು, ಜುಲೈ 2ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಇನ್ನು ಈ ಬಗ್ಗೆ ಮಾತನಾಡಿದ ನಟಿ ತಾಪ್ಸಿ ಪನ್ನು, "ಹಸೀನ್ ದಿಲ್ರುಬಾ ಸಿನಿಮಾದ ಕಥೆ ಕೇಳಿ ತುಂಬಾ ಉತ್ಸುಕನಾದೆ. ಈ ಚಿತ್ರಕ್ಕೆ ನಾನು ಮೊದಲು ಆಯ್ಕೆಯಾಗಿಲ್ಲ. ನಿಮಗಾಗಿಯೇ ಎಂದು ಬರೆದಿದ್ದರೆ ಅದು ನಿಮ್ಮ ಬಳಿಗೆ ಬಂದೇ ಬರುತ್ತದೆ ಎಂಬ ಹಿರಿಯರ ಮಾತು ನಿಜವಾಗಿದೆ. ಇದು ಕೇವಲ ಸುಂದರವಾಗಿ ಬರೆದ ರಹಸ್ಯ ಕಥೆಯಲ್ಲ. ಇದರಲ್ಲಿ ಅದ್ಭುತ ಪಾತ್ರಗಳಿವೆ"ಎಂದು ತಾಪ್ಸಿ ಹೇಳಿದರು.
- " class="align-text-top noRightClick twitterSection" data="">
ಹಸೀನ್ ದಿಲ್‌ರುಬಾ ಚಿತ್ರದಲ್ಲಿ ತಾಪ್ಸಿ ಪನ್ನು ಮತ್ತು ವಿಕ್ರಾಂತ್ ಮಾಸ್ಸಿ ಮುಖ್ಯ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಚಿತ್ರವು ಕಾಮ, ಗೀಳು ಮತ್ತು ವಂಚನೆ ಎಂಬ ಮೂರು ಮಾಯೆಗಳನ್ನು ಅನ್ವೇಷಿಸುವ ಕಥಾವಸ್ತು ಹೊಂದಿದೆ.
ವಿಕ್ರಾಂತ್ ಮಾಸ್ಸಿ ಮಾತನಾಡಿದ್ದು, "ನಾನು ಚಿತ್ರದ ಕಥೆಯನ್ನು ಮೊದಲು ಕೇಳಿದಾಗ ಅಚ್ಚರಿಗೊಂಡಿದ್ದೇನೆ. ಪ್ರೇಕ್ಷಕರನ್ನು ಆಶ್ಚರ್ಯಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಚಿತ್ರೀಕರಣದ ರೋಮಾಂಚನಕಾರಿ ಅನುಭವವಾಗಿದೆ" ಎಂದು ಹೇಳಿದರು.
- " class="align-text-top noRightClick twitterSection" data="
">