ETV Bharat / sitara

ಗುಜರಾತ್​ನಲ್ಲಿ ನಡೆಯಲಿದೆ 'ರಶ್ಮಿ ರಾಕೆಟ್'​ ಚಿತ್ರದ ಶೂಟಿಂಗ್ - ಅಥ್ಲೀಟ್​ ರಶ್ಮಿ

ಆಕರ್ಷ್​ ಖುರಾನ ನಿರ್ದೇಶನದಲ್ಲಿ ಮಹಿಳಾ ಕ್ರೀಡಾ ಸಾಧಕಿಯ ಜೀವನ ಚಿತ್ರಣವನ್ನು ತೆರೆ ಮೇಲೆ ತರಲಾಗುತ್ತಿದ್ದು, 'ರಶ್ಮಿ ರಾಕೆಟ್‌' ಸಿನಿಮಾದ ಚಿತ್ರೀಕರಣ ಗುಜರಾತ್​ನಲ್ಲಿ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

ರಶ್ಮಿ ರಾಕೆಟ್
ರಶ್ಮಿ ರಾಕೆಟ್
author img

By

Published : Jan 6, 2021, 11:32 AM IST

ಹೈದರಾಬಾದ್ : ತಾಪ್ಸಿ ಪನ್ನು ಅವರ ಬಹು ನಿರೀಕ್ಷಿತ ಸಿನಿಮಾ 'ರಶ್ಮಿ ರಾಕೆಟ್‌' ಸಿನಿಮಾದ ಮೊದಲ ಹಂತದ ಶೂಟಿಂಗ್ ಈಗಾಗಲೇ​ ಮುಗಿದಿದ್ದು, ಮುಂದಿನ ಹಂತದ ಚಿತ್ರೀಕರಣ ಗುಜರಾತ್​ನಲ್ಲಿ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈಗಾಗಲೇ ಕ್ರೀಡಾಪಟು ಪಾತ್ರದಲ್ಲಿ ಕಾಣಿಸಿಕೊಂಡಿರುವ ತಾಪ್ಸಿ, ಅಥ್ಲೀಟ್​ ರಶ್ಮಿಯಾಗಿ ಹಾಕಿ ಸ್ಟಿಕ್ ಹಿಡಿದು ಮೈದಾನದಲ್ಲಿ ಧೂಳೆಬ್ಬಿಸಲಿದ್ದಾರೆ.

ಆಕರ್ಷ್​ ಖುರಾನ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣವನ್ನು ಪುಣೆ ಮತ್ತು ರಾಂಚಿಯಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಕೋವಿಡ್​-19 ಹಿನ್ನೆಲೆ ಇದೀಗ 14 ದಿನಗಳ ಕಾಲ ಗುಜರಾತ್‌ನಲ್ಲಿ ಶೂಟಿಂಗ್ ಮಾಡಲು 'ರಶ್ಮಿ ರಾಕೆಟ್‌' ತಂಡ ಸಜ್ಜಾಗಿದೆ. ಈ ಪ್ರಕಾರ ಮುಂದಿನ ವಾರದಿಂದ ಗುಜರಾತ್​ನಲ್ಲಿ ಚಿತ್ರೀಕರಣ ನಡೆಯಲಿದೆ.

ಇನ್ನು ಕಳೆದ ಕೆಲವು ತಿಂಗಳುಗಳಿಂದ ಈ ಚಿತ್ರಕ್ಕಾಗಿ ತಾಪ್ಸಿ ತಮ್ಮ ದೇಹವನ್ನು ಮತ್ತಷ್ಟು ದಂಡಿಸಿದ್ದಾರೆ. ಈ ಹಿಂದೆ ಮನ್ಮರ್ಜಿಯಾ ಹಾಗೂ ಸೂರ್ಮಾ ಚಿತ್ರಗಳಲ್ಲಿ ತಾಪ್ಸಿ ಹಾಕಿ ಕ್ರೀಡಾಪಟುವಿನ ಪಾತ್ರದಲ್ಲಿ ರಂಜಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.