ಫರಿದಾಬಾದ್ (ಹರಿಯಾಣ): ರಿಯಾ ಚಕ್ರವರ್ತಿ ತನ್ನ ಮಗನ ಕೊಲೆ ಮಾಡಿದ್ದಾಳೆ ಎಂದು ಮೃತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಂದೆ ಕೆ.ಕೆ.ಸಿಂಗ್ ಆರೋಪಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ರಿಯಾ ಚಕ್ರವರ್ತಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಕೆ.ಕೆ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ಪ್ರಕರಣದಲ್ಲಿ ಮಾದಕ ವಸ್ತು ಸೇವನೆ ಶಂಕೆ ವ್ಯಕ್ತವಾದ ಹಿನ್ನೆಲೆ ಎನ್‌ಸಿಬಿ ಮಹಾ ನಿರ್ದೇಶಕ ರಾಕೇಶ್ ಅಸ್ತಾನಾ ದೆಹಲಿ ಮತ್ತು ಮುಂಬೈಯಿಂದ ಡೆಪ್ಯೂಟಿ ಡೈರೆಕ್ಟರ್ ಆಫ್ ಆಪರೇಶನ್ಸ್ (ಎನ್‌ಸಿಬಿ) ಕೆಪಿಎಸ್ ಮಲ್ಹೋತ್ರಾ ಮೇಲ್ವಿಚಾರಣೆಯಲ್ಲಿ ತಂಡ ರಚಿಸಿದ್ದಾರೆ.
ಏತನ್ಮಧ್ಯೆ, ನಟಿ ರಿಯಾ ಚಕ್ರವರ್ತಿಗೆ ಸುಶಾಂತ್ ಶವ ನೋಡಲು ಆಸ್ಪತ್ರೆಯ ಶವಾಗಾರಕ್ಕೆ ತೆರಳಿದ್ದರು. ಈ ಹಿನ್ನೆಲೆ ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಂಎಸ್‌ಎಚ್‌ಆರ್‌ಸಿ) ಕೂಪರ್ ಆಸ್ಪತ್ರೆ ಮತ್ತು ಮುಂಬೈ ಪೊಲೀಸರಿಗೆ ನೋಟಿಸ್ ಕಳುಹಿಸಿದೆ. ರಿಯಾಗೆ ಯಾವ ನಿಯಮದ ಅಡಿ ಅನುಮತಿ ನೀಡಲಾಗಿದೆ ಎಂಬ ವಿವರವನ್ನೂ ಕೇಳಿದೆ.