ETV Bharat / sitara

ಆಕೆಯೊಂದಿಗೆ ಬ್ರೇಕ್​​​ ಅಪ್​ ಆಗಿದ್ದಕ್ಕೆ ಪಶ್ಚಾತಾಪ...ವಿಚಾರಣೆ ವೇಳೆ ಸುಶಾಂತ್ ಮನೋವೈದ್ಯರು ಹೇಳಿದ್ದೇನು..? - Sushant Singh Rajput suicide case

ಮುಂಬೈ ಪೊಲೀಸರು ಸುಶಾಂತ್ ಸಿಂಗ್ ರಜಪೂತ್ ಚಿಕಿತ್ಸೆ ಪಡೆಯುತ್ತಿದ್ದ ಮನೋವೈದ್ಯ ಕೇಸರಿ ಚಾವ್ಡಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಅಂಕಿತಾ ಅವರೊಂದಿಗೆ ಬ್ರೇಕ್​​ ಅಪ್ ಆಗಿದ್ದಕ್ಕೆ ಸುಶಾಂತ್ ಪಶ್ಚಾತಾಪ ಪಡುತ್ತಿರುವುದಾಗಿ ವೈದ್ಯರೊಂದಿಗೆ ಹೇಳಿಕೊಂಡಿದ್ದರು ಎನ್ನಲಾಗಿದೆ.

Sushant Singh Rajput suicide case
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ
author img

By

Published : Jun 20, 2020, 6:18 PM IST

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂದ್ರಾ ಪೊಲೀಸರು ಸುಶಾಂತ್​​ ಸಾಯುವ ಮುನ್ನ ಸಂಪರ್ಕದಲ್ಲಿದ್ದ ಎಲ್ಲರನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಸುಶಾಂತ್ ಮಾನಸಿಕ ಖಿನ್ನತೆಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮನೋವೈದ್ಯ ಕೇಸರಿ ಚಾವ್ಡಾ ಅವರನ್ನು ಕೂಡಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕೇಸರಿ ಚಾವ್ಡಾ ಹೇಳುವ ಪ್ರಕಾರ ಅಂಕಿತಾ ಲೋಖಂಡೆ ನನ್ನನ್ನು ಪ್ರೀತಿಸುವಂತೆ ಬೇರೆ ಯಾರೂ ಪ್ರೀತಿಸಲಿಲ್ಲ. ಆಕೆಯೊಂದಿಗೆ ಬ್ರೇಕ್​​ಅಪ್ ಆಗಿದ್ದಕ್ಕೆ ಬಹಳ ಪಶ್ಚಾತಾಪ ಪಡುತ್ತಿರುವುದಾಗಿ ವೈದ್ಯರೊಂದಿಗೆ ಹೇಳಿಕೊಂಡಿದ್ದರು ಎನ್ನಲಾಗಿದೆ. ಸುಶಾಂತ್ 'ಪವಿತ್ರ ರಿಶ್ತಾ' ಧಾರಾವಾಹಿಯಲ್ಲಿ ನಟಿಸುತ್ತಿರುವಾಗ ಸಹನಟಿ ಅಂಕಿತಾ ಅವರನ್ನು ಪ್ರೀತಿಸುತ್ತಿದ್ದರು. ಆದರೆ 6 ವರ್ಷಗಳ ಬಳಿಕ ಇವರ ನಡುವೆ ಬ್ರೇಕ್ ಅಪ್ ಆಯ್ತು. ಇದಾದ ನಂತರ ಸುಶಾಂತ್ 'ರಾಬ್ಟಾ' ಚಿತ್ರದ ಸಹನಟಿ ಕೃತಿ ಸನನ್​​​ ಅವರೊಂದಿಗೆ ರಿಲೇಶನ್​​ಶಿಪ್​​ನಲ್ಲಿದ್ದರು ಎನ್ನಲಾಗಿದೆ. ಆದರೆ ಅವರು ಎಂದಿಗೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ.

ರಿಯಾ ಚಕ್ರವತಿ ಪರಿಚಯವಾಗುವ ಕೆಲವು ದಿನಗಳ ಮೊದಲು ಸುಶಾಂತ್ ನಿರ್ದೇಶಕರೊಬ್ಬರ ಪುತ್ರಿಯೊಂದಿಗೆ ಕೂಡಾ ರಿಲೇಶನ್​​​ನಲ್ಲಿದ್ದರು ಎನ್ನಲಾಗಿದೆ. ಕೇಸರಿ ಚಾವ್ಡಾ ಅವರ ಪ್ರಕಾರ ರಿಯಾ ಅವರ ವರ್ತನೆಯಿಂದ ಸುಶಾಂತ್ ಬಹಳ ನೊಂದಿದ್ದರು ಎನ್ನಲಾಗಿದೆ.

ಜೂನ್ 14 ರಂದು ಸುಶಾಂತ್ ಮುಂಬೈನ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ 6 ವರ್ಷಗಳಿಂದ ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್​, ಸುಶಾಂತ್ ಅವರ ಆತ್ಮಹತ್ಯೆ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ಮಾಡಲಾಗುವುದು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.