ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದಾಗ ಅವರ ಕುಟುಂಬ ಹಾಗೂ ಸುಶಾಂತ್ ಸಾವಿಗೆ ನ್ಯಾಯ ಒದಗಿಸಬೇಕೆಂದು ಧ್ವನಿ ಎತ್ತಿದವರಲ್ಲಿ ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಕೂಡಾ ಒಬ್ಬರು. ಆ ಸಮಯದಲ್ಲಿ ಅಂಕಿತಾ ಅವರ ಬಗ್ಗೆ ಸುಶಾಂತ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಅದೇ ಅಭಿಮಾನಿಗಳು ಅಂಕಿತಾ ಮೇಲೆ ಗರಂ ಆಗಿದ್ದಾರೆ.

ಸುಶಾಂತ್ ಹಾಗೂ ಅಂಕಿತಾ, 'ಪವಿತ್ರ ರಿಷ್ತಾ' ಧಾರಾವಾಹಿ ಮೂಲಕ ಒಬ್ಬರಿಗೊಬ್ಬರು ಪರಿಚಯವಾಗಿ ಕ್ರಮೇಣ ಇಬ್ಬರೂ ಪ್ರೀತಿಸಲು ಆರಂಭಿಸಿದರು. ಆದರೆ ಕೆಲವು ದಿನಗಳ ನಂತರ ಬ್ರೇಕ್ಅಪ್ ಆಗಿ ತಮ್ಮ ತಮ್ಮ ಕರಿಯರ್ನಲ್ಲಿ ಬ್ಯುಸಿಯಾದರು. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ನಂತರ ಸುಶಾಂತ್ ಸಾವಿಗೆ ನ್ಯಾಯ ದೊರೆಯಬೇಕೆಂದು ಸೋಷಿಯಲ್ ಮೀಡಿಯಾ ಮೂಲಕ ಆಗ್ರಹಿಸಿದ್ದರು. ಆದರೆ ಈಗ ಸುಶಾಂತ್ ಅಭಿಮಾನಿಗಳು ಅಂಕಿತಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸುಶಾಂತ್ ಜೊತೆ ಬ್ರೇಕ್ ಅಪ್ ಆದ ನಂತರ ಅಂಕಿತಾಗೆ ವಿಕ್ಕಿ ಜೈನ್ ಜೊತೆ ಅವರೊಂದಿಗೆ ಪರಿಯವಾಯ್ತು. ವಿಕ್ಕಿ ಬಗ್ಗೆ ಆಗ್ಗಾಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದ ಅಂಕಿತಾ, ಆತನೊಂದಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಸುಶಾಂತ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
"ನಾವೆಲ್ಲಾ ಸುಶಾಂಗ್ ರಜಪೂತ್ ಅಗಲಿದ ದು:ಖದಲ್ಲೇ ಇದ್ದೇವೆ. ಸುಶಾಂತ್ ಅವರನ್ನು ನೀವು ಬೆಂಬಲಿಸಿದ ಕಾರಣಕ್ಕೆ ನಾವು ನಿಮ್ಮನ್ನು ಫಾಲೋ ಮಾಡಲು ಆರಂಭಿಸಿದೆವು. ಆದರೆ ನಿಮಗೆ ಸುಶಾಂತ್ ಅಗಲಿದ ದು:ಖ ಸ್ವಲ್ಪವೂ ಇಲ್ಲ. ಈ ರೀತಿ ನೀವು ವಿಕ್ಕಿ ಜೊತೆ ಎಂಜಾಯ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡುವ ಅಗತ್ಯ ಏನಿತ್ತು, ಒಮ್ಮೆ ಯೋಚಿಸಿ" ಎಂದು ಸುಶಾಂತ್ ಅಭಿಮಾನಿಗಳು ಅಂಕಿತಾ ಲೋಖಂಡೆಯನ್ನು ಪ್ರಶ್ನಿಸಿದ್ದಾರೆ.