ETV Bharat / sitara

ಸನ್ನಿಯಂತೆ ಮಕ್ಕಳಿಗೂ ಕೂಡಾ ಕ್ಯಾಮರಾ ಪ್ರೀತಿ.. . ಫೋಟೋಗೆ ಪೋಸ್ ಕೊಡುತ್ತಾ ನಿಂತ್ರು ಅಶೆರ್​, ನೋಹಾ - ನೋಹಾ ಸಿಂಗ್ ವೆಬರ್

ಕ್ಯಾಮೆರಾ ಕಂಡ ಕೂಡಲೇ ಸನ್ನಿ ಲಿಯೋನ್ ಮಕ್ಕಳು ಹಾಯ್ ಹೇಳುತ್ತಾ ನಿಂತ ಸ್ಥಳದಿಂದ ಕದಲದೇ ನಿಂತಿದ್ದಾರೆ. ಮಕ್ಕಳನ್ನು ನೋಡಿದ ಸ್ವತ: ಸನ್ನಿ ಒಂದು ಕ್ಷಣ ಆಶ್ಚರ್ಯ ಪಟ್ಟಿದ್ದಾರೆ. ನಂತರ ತಾವು ಕೂಡಾ ಪತ್ರಕರ್ತರಿಗೆ ಹಾಯ್ ಮಾಡಿ ಮಕ್ಕಳನ್ನು ಕಾರೊಳಗೆ ಕೂರಿಸಿಕೊಂಡು ಅಲ್ಲಿಂದ ಹೊರಟಿದ್ದಾರೆ.

ಅಶೆರ್​, ನೋಹಾ
author img

By

Published : Sep 3, 2019, 12:18 PM IST

Updated : Sep 3, 2019, 2:01 PM IST

ಬಾಲಿವುಡ್ ಬ್ಯೂಟಿ, ಗ್ಲಾಮರಸ್ ಗೊಂಬೆ ಸನ್ನಿ ಲಿಯೋನ್​​ ಏನು ಮಾಡಿದ್ರೂ ಚೆಂದಾನೆ. ಕೆಲವು ದಿನಗಳ ಹಿಂದೆ ದುಬೈನಲ್ಲಿ ರಜೆ ಎಂಜಾಯ್ ಮಾಡಲು ತೆರಳಿದ್ದ ಸನ್ನಿ ಮುದ್ದಿನ ಮಗಳು ನಿಶಾ ಕೌರ್​​​​ ಹೋಂ ವರ್ಕ್ ಮಾಡಿಸಿ ಅಮ್ಮನ ಕರ್ತವ್ಯ ನಿಭಾಯಿಸಿದ್ದರು. ಸನ್ನಿ ಕೆಲಸಕ್ಕೆ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪ್ಲೇ ಹೋಂನಿಂದ ಮಕ್ಕಳನ್ನು ಕರೆತರುತ್ತಿರುವ ಸನ್ನಿ ಲಿಯೋನ್

ಸನ್ನಿ ತನ್ನ ಮಗಳು ನಿಶಾಗೆ ಹೋಂವರ್ಕ್ ಮಾಡಿಸುತ್ತಿದ್ದ ಈ ಪೋಟೋ ಬಹಳ ವೈರಲ್ ಆಗಿತ್ತು. ಇದೀಗ ಅವರ ಮತ್ತೊಂದು ವಿಡಿಯೋ ಕೂಡಾ ಮೆಚ್ಚುಗೆಗೆ ಪಾತ್ರವಾಗಿದೆ. ಸನ್ನಿ ಅವಳಿ ಮಕ್ಕಳಾದ ಅಶೆರ್ ಸಿಂಗ್ ವೆಬರ್​ ಹಾಗೂ ನೋಹಾ ಸಿಂಗ್ ವೆಬರ್​ ಇಬ್ಬರನ್ನೂ ಕೂಡಾ ನಿಶಾ ಜೊತೆಗೆ ಪ್ಲೇ ಹೋಂಗೆ ಸೇರಿಸಿದ್ದಾರೆ. ಕೆಲಸದ ಬ್ಯುಸಿ ನಡುವೆಯೂ ಸನ್ನಿ ಮಕ್ಕಳನ್ನು ಪ್ಲೇ ಹೋಂನಿಂದ ತಾವೇ ಕರೆತರುತ್ತಾರೆ. ಇತ್ತಿಚೆಗೆ ಮಕ್ಕಳನ್ನು ಕರೆತರಲು ಸನ್ನಿ ಪ್ಲೇ ಹೋಂ ಬಳಿ ತೆರಳಿದ್ದಾರೆ. ವಾಪಸ್ ಬರುವಾಗ ಸನ್ನಿ ಮಕ್ಕಳೊಂದಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಇನ್ನು ಕ್ಯಾಮೆರಾ ನೋಡಿದ ಕೂಡಲೇ ಆ ಮುದ್ದಾದ ಮಕ್ಕಳು ಅಮ್ಮನಂತೆ ಕೈ ಬೀಸುತ್ತಾ, ಕ್ಯಾಮರಾಗೆ ಪೋಸ್ ಕೊಡುತ್ತಾ ನಿಂತಿದ್ದಾರೆ. ಅಮ್ಮ ಎಷ್ಟೇ ಕರೆದರೂ ಓಗೊಡದ ಮಕ್ಕಳು ಕ್ಯಾಮೆರಾ ನೋಡುತ್ತಾ ನಿಂತಿದ್ದಾರೆ.

sunny leone family
ಸನ್ನಿ ಲಿಯೋನ್ ಕುಟುಂಬ

ಮಕ್ಕಳನ್ನು ನೋಡಿದ ಸನ್ನಿಯೇ ಒಂದು ಕ್ಷಣ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಂತರ ತಾವೂ ಪತ್ರಕರ್ತರಿಗೆ ಹಾಯ್ ಮಾಡಿ ಮಕ್ಕಳನ್ನು ಕಾರೊಳಗೆ ಕೂರಿಸಿ ಅಲ್ಲಿಂದ ಹೊರನಡೆದಿದ್ದಾರೆ. ಈ ವಿಡಿಯೋ ಕೂಡಾ ವೈರಲ್ ಆಗುತ್ತಿದ್ದು ಅಮ್ಮನಂತೆ ಮಕ್ಕಳು ಎಂದು ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Intro:Body:

sunny leone

Conclusion:
Last Updated : Sep 3, 2019, 2:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.