ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ತಮ್ಮ ಕುಟುಂಬದ ಜೊತೆ ಬಣ್ಣಗಳ ಹಬ್ಬ ಹೋಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ತಮ್ಮ ಸಡಗರದ ಕ್ಷಣಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸನ್ನಿ ಲಿಯೋನ್ ತಮ್ಮ ಮಕ್ಕಳಾದ ನೋವಾ, ಆಶರ್ ಮತ್ತು ನಿಶಾ ಅವರೊಂದಿಗೆ ಬಣ್ಣಗಳನ್ನು ಎರಚಿಕೊಂಡು ಹೋಳಿ ಆಚರಿಸಿದ್ದಾರೆ. ಈ ಕುರಿತಾದ ಫೋಟೋಗಳನ್ನು ಶೇರ್ ಮಾಡಿ ತಮ್ಮ ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಸನ್ನಿ ತನ್ನ ಪತಿ ಡೇನಿಯಲ್ ಅವರೊಂದಿಗೆ ಪರಸ್ಪರ ಚುಂಬಿಸುತ್ತಿರುವ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ.
ಪೋಟೋದಲ್ಲಿ ಸನ್ನಿ ನೀಲಿ ಬಣ್ಣದ ಕುರ್ತಾ ಮತ್ತು ಡೇನಿಯಲ್ ಬಳಿ ಬಣ್ಣದ ಕುರ್ತಾದಲ್ಲಿ ಕಂಡು ಬಂದರು. ತನ್ನ ಕುಟುಂಬದೊಂದಿಗೆ ಹೋಳಿ ಆಚರಿಸುತ್ತಿರುವ ಈ ಕ್ಷಣ ಅತ್ಯುನ್ನತವಾಗಿದೆ. ಈ ಬಾರಿಯ ಹೋಳಿಯೂ ಎಲ್ಲರ ಜೀವನವನ್ನು ಬಣ್ಣಮಯಗೊಳಿಸಲಿ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.